ನವದೆಹಲಿ: ಶುಕ್ರವಾರ ರಾಷ್ಟ್ರ ರಾಜಧಾನಿಗೆ ಏರ್ ಇಂಡಿಯಾ (Air India) ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಇಳಿದ (Flight Cancelled) ನಂತರ ಮತ್ತು ದೆಹಲಿಗೆ ಹಿಂತಿರುಗುವ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಈ ಡಿಕ್ಕಿ ಸಂಭವಿಸಿದೆ. ಜೂನ್ 20, 2025 ರಂದು ಪುಣೆಯಿಂದ ದೆಹಲಿಗೆ ಹಾರಲು ನಿಗದಿಯಾಗಿದ್ದ AI2470 ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿದು ಹಿಂದಿರುವಾಗ ಈ ಘಟನೆ ಸಂಭವಿಸಿದೆ. ವಿಮಾನವನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಅಡಚಣೆಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಏರ್ ಇಂಡಿಯಾ ಕ್ಷಮೆಯಾಚಿಸಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಪ್ರಯಾಣವನ್ನು ಮುಂದೂಡಲು ಆಯ್ಕೆ ಮಾಡುವವರಿಗೆ ವಿಮಾನಯಾನ ಸಂಸ್ಥೆಯು ಪೂರ್ಣ ಮರುಪಾವತಿ ನೀಡುತ್ತೇವೆ ಎಂದು ಏರ್ ಇಂಡಿಯಾ ಹೇಳಿದೆ.
ಪ್ರಯಾಣಿಕರನ್ನು ದೆಹಲಿಗೆ ಕಳಿಸಲು ಪರ್ಯಾಯ ವಿಮಾನ ವ್ಯವಸ್ಥೆಯನ್ನು ಏರ್ ಇಂಡಿಯಾ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಏರ್ ಇಂಡಿಯಾದಲ್ಲಿ, ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ" ಎಂದು ಅವರ ಹೇಳಿಕೆ ತಿಳಿಸಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ" ಎಂದು ಅವರ ಹೇಳಿಕೆ ತಿಳಿಸಿದೆ. ವಿಮಾನಯಾನದಲ್ಲಿ ಪಕ್ಷಿ ಡಿಕ್ಕಿಗಳು ಸಾಮಾನ್ಯವಾಗಿದ್ದರೂ, ಅವು ಗಮನಾರ್ಹವಾದ ಯಾಂತ್ರಿಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಈ ಸುದ್ದಿಯನ್ನೂ ಓದಿ: Flights Cancelled: ತಾಂತ್ರಿಕ ದೋಷ; ಒಂದೇ ದಿನ ಏರ್ ಇಂಡಿಯಾದ 7 ಅಂತಾರಾಷ್ಟ್ರೀಯ ವಿಮಾನ ರದ್ದು
ನಿರ್ವಹಣೆ, ಕೆಟ್ಟ ಹವಾಮಾನ ಮತ್ತು ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಶುಕ್ರವಾರವೂ ಹಲವು ಏರ್ ಇಂಡಿಯಾ ವಿಮಾನಗಳು ರದ್ದಾಗಿವೆ ಎಂದು ತಿಳಿದು ಬಂದಿದೆ. ಜೂನ್ 21 ಮತ್ತು ಜುಲೈ 15 ರ ನಡುವೆ ವಾರಕ್ಕೆ 38 ಅಂತರರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸುವುದಾಗಿ ಮತ್ತು ಮೂರು ವಿದೇಶಿ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ. ದುಬೈನಿಂದ ಚೆನ್ನೈಗೆ AI906, ದಿಲ್ಲಿಯಿಂದ ಮೆಲ್ಬೋರ್ನ್‌ಗೆ AI308, ಮೆಲ್ಬೋರ್ನ್‌ನಿಂದ ದಿಲ್ಲಿಗೆ AI309 ಮತ್ತು ದುಬೈನಿಂದ ಹೈದರಾಬಾದ್‌ಗೆ AI2204 ಸಂಚರಿಸುವ ಏರ್ ಇಂಡಿಯಾ ವಿಮಾನಗಳ ಸಂಚಾರ ರದ್ದಾಗಿದೆ.