ಇರಾನ್ ಯುದ್ಧದ (Iran strike) ಬಿಸಿಯಲ್ಲಿ ಈ ಸುದ್ದಿ ಯಾರ ಗಮನಕ್ಕೂ ಬರಲಿಲ್ಲ. ಆದರೆ ಭಾರತ-ಕೆನಡಾದ (India-Canada relations) ರಾಜತಾಂತ್ರಿಕ-ವ್ಯಾವಹಾರಿಕ ಸಂಬಂಧ ಮರು ಸ್ಥಾಪನೆಯಾಗುತ್ತಿರುವುದು ಐತಿಹಾಸಿಕ ಮಹತ್ವ ಗಳಿಸಿದೆ. ಏಕೆಂದರೆ ಕೆನಡಾದ ಈ ಹಿಂದಿನ ಅಪ್ರಬುದ್ಧ ಪ್ರಧಾನಿ ಟ್ರೂಡೊ (Justin Trudeau) ಎಂಬಾತನ ದೆಸೆಯಿಂದ ಸಂಬಂಧ ಹದಗೆಟ್ಟಿತ್ತು.
ಭಾರತಕ್ಕೆ ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನೆ ಅವರು ಮೊದಲ ಅಧಿಕೃತ ಭೇಟಿ ನೀಡಿದ್ದಾರೆ. ಈ ಸಂದರ್ಭ ಭಾರತಕ್ಕೆ ದೀರ್ಘಾವಧಿಗೆ ಯುರೇನಿಯಂ ಪೂರೈಕೆ ಸೇರಿದಂತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಈ ವರ್ಷಾಂತ್ಯದ ಒಳಗೆ ಒಪ್ಪಂದ ಅಂತಿಮವಾಗಲಿದೆ.
ಇದರೊಂದಿಗೆ 2023ರಿಂದೀಚೆಗೆ ಹಳಸಿದ್ದ ಕೆನಡಾ-ಭಾರತದ ರಾಜತಾಂತ್ರಿಕ ಸಂಬಂಧವನ್ನು ಹೊಸ ಮೈತ್ರಿಯೊಂದಿಗೆ ಸರಿಪಡಿಸಲು ಉಭಯ ನಾಯಕರು ನಿರ್ಧರಿಸಿದ್ದಾರೆ. ಅಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಕಾರಣದಿಂದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಲೀಡರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಜಸ್ಟಿನ್ ಟ್ರೂಡೊ ಆರೋಪಿಸಿದ್ದರು.
ಭಾರತ-ಕೆನಡಾ ಸಂಬಂಧ ಸುಧಾರಣೆಯತ್ತ: 4 ದಿನಗಳ ಪ್ರವಾಸಕ್ಕಾಗಿ ಮುಂಬೈಗೆ ಆಗಮಿಸಿದ ಪ್ರಧಾನಿ ಮಾರ್ಕ್ ಕಾರ್ನಿ
ಆದರೆ ಈಗಿನ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ಭಾರತದ ಜತೆಗೆ ಮೈತ್ರಿಯನ್ನು ಬಯಸಿದ್ದಾರೆ. ಅಮೆರಿಕದ ಟಾರಿಫ್ ಒತ್ತಡದಿಂದ ಬಳಲುತ್ತಿರುವ ಕೆನಡಾಕ್ಕೂ ಭಾರತದ ಜತೆಗೆ ವ್ಯಾವಹಾರಿಕ ಒಪ್ಪಂದದಿಂದ ಅನುಕೂಲವಾಗಲಿದೆ.
ಕ್ರಿಟಿಕಲ್ ಮಿನರಲ್ಸ್, ಎಐ ತಂತ್ರಜ್ಞಾನ, ಸ್ವಚ್ಛ ಇಂಧನ, ರಕ್ಷಣೆ, ಬಾಹ್ಯಾಕಾಶ ಮತ್ತು ಉನ್ನತ ಶಿಕ್ಷಣ, ಜನರ ಮಟ್ಟದ ಸಾಂಸ್ಕೃತಿಕ ಸಂಬಂಧ ವಲಯದಲ್ಲಿ ಕೆನಡಾ ಭಾರತಕ್ಕೆ ಸಹಕರಿಸಲಿದೆ.
ಭಾರತಕ್ಕೆ ಕೆನಡಾ ಪ್ರಧಾನಿಯ ಭೇಟಿ ಏಕೆ ಮಹತ್ವ ಪಡೆದಿದೆ ಎಂದರೆ:
- ಅಮೆರಿಕ-ಚೀನಾ ನಡುವೆ ಸ್ಟ್ರಾಟಜಿಕ್ ಪೈಪೋಟಿ ಹೆಚ್ಚುತ್ತಿದೆ.
- ಜಾಗತಿಕ ಸಪ್ಲೈ ಚೈನ್ ಬಲಪಡಿಸಬೇಕಾಗಿದೆ.
- ಉಕ್ರೇನ್ ಯುದ್ಧದ ನಂತರ ಇಂಧನ ಭದ್ರತೆ ಹೆಚ್ಚಿಸಬೇಕಾಗಿದೆ.
- ಗ್ಲೋಬಲ್ ಸೌತ್ ವ್ಯೂಹಾತ್ಮಕವಾಗಿ ಸ್ವಾಯತ್ತತೆಯನ್ನು ಬಯಸುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತ ಮತ್ತು ಕೆನಡಾ ನಡುವೆ ಸಮಗ್ರ ಆರ್ಥಿಕ ಪಾಲುದಾರಿಕೆಯ ಒಪ್ಪಂದ ನಡೆಯುತ್ತಿದೆ. 2026ರ ಅಂತ್ಯದ ವೇಳೆಗೆ Comprehensive Economic Partnership Agreement-(CEPA) ನಡೆಯಲಿದೆ.
ಈಗ ಭಾರತ-ಕೆನಡಾ ನಡುವೆ 9 ಬಿಲಿಯನ್ ಡಾಲರ್ ವ್ಯಾಪಾರ ನಡೆಯುತ್ತಿದೆ. ಈ ವ್ಯಾಪಾರ ಒಪ್ಪಂದದಿಂದ 2030ರ ವೇಳೆಗೆ ಈ ದ್ವಿಪಕ್ಷೀಯ ವ್ಯಾಪಾರ 70 ಬಿಲಿಯನ್ ಡಾಲರ್‌ಗೆ ಹೆಚ್ಚಲಿದೆ.
ಕೆನಡಾವು ಭಾರತದಲ್ಲಿ ನೇರ ಮತ್ತು ಪರೋಕ್ಷವಾಗಿ ಭಾರತದಲ್ಲಿ 110 ಬಿಲಿಯನ್ ಡಾಲರ್ ಮೊತ್ತವನ್ನು ಈಗಾಗಲೇ ಹೂಡಿಕೆ ಮಾಡಿದೆ.
ಭಾರತಕ್ಕೆ 2.6 ಬಿಲಿಯನ್ ಡಾಲರ್ ಮೌಲ್ಯದ ಯುರೇನಿಯಂ ಅನ್ನು ಪೂರೈಸುವ ಒಪ್ಪಂದಕ್ಕೆ ಕೆನಡಾ ಸಹಿ ಹಾಕಲಿದೆ. 2027ರಿಂದ 2035ರ ತನಕ ಭಾರತಕ್ಕೆ ಯುರೇನಿಯಂ ಪೂರೈಕೆಯಾಗಲಿದೆ. ಇದು ಭಾರತದ ಎನರ್ಜಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಕೆನಡಾವು ಭಾರತದ ಜತೆಗೆ ಎಲ್‌ಎನ್‌ಜಿ, ಎಲ್ಪಿಜಿ ಮತ್ತು ಹೈಡ್ರೊಜನ್ ಇಂಧನ ಪೂರೈಕೆ, ರಿನೆವಬಲ್ ಮತ್ತು ಕ್ಲೀನ್ ಎನರ್ಜಿ ಸೆಕ್ಟರ್‌ನಲ್ಲಿ ಸೋಲಾರ್, ಪವನ, ಬಯೊ ಫ್ಯುಯೆಲ್, ಹೈಡ್ರೊ ಪವರ್ ಸಲುವಾಗಿ ಸಹಕರಿಸಲಿದೆ.
ಭಾರತವನ್ನು ಹಾಡಿ ಹೊಗಳಿದ ಕೆನಡಾ! ಕಾರ್ನಿ ಭೇಟಿಗೂ ಮುನ್ನವೇ ಸರಿಯಾಯ್ತಾ ರಾಜತಾಂತ್ರಿಕತೆ?
ಐಐಟಿ ತಿರುಪತಿ ಮೊದಲಾದ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಜತೆಗೆ ಕೆನಡಾದ ವಿಶ್ವವಿದ್ಯಾಲಯಗಳು ಶೈಕ್ಷಣಿಕ, ಸಾಂಸ್ಕೃತಿಕ ಒಪ್ಪಂದ ಮಾಡಿಕೊಳ್ಳಲಿವೆ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹೆಚ್ಚಳವಾಗಲಿದೆ. ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಕ್ರಿಯೇಟಿವ್ ಇಂಡಸ್ಟ್ರಿಯಲ್ಲಿ ಸಾಂಸ್ಕೃತಿಕ ವಿನಿಮಯ ನಡೆಯಲಿದೆ.
ಎಐ, ಕ್ವಾಂಟಮ್, ಏರೊಸ್ಪೇಸ್, ಸ್ಪೇಸ್ ಅಪ್ಲಿಕೇಶನ್‌ನಲ್ಲಿ ಸಹಕಾರ ಇರಲಿದೆ. ಭಾರತದ ಎಚ್‌ಸಿಎಲ್ ಟೆಕ್ನಾಲಜೀಸ್ ಕೆನಡಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.
ಈಗ ನಡೆಯುತ್ತಿರುವ ಯುದ್ಧಗಳು, ಜಿಯೊ ಪೊಲಿಟಿಕಲ್ ಅಸ್ಥಿರತೆಯ ಹಿನ್ನೆಲೆಯಲ್ಲಿ ವ್ಯಾಪಾರ ಒಪ್ಪಂದಗಳು ಮಹತ್ವ ಪಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಜತೆಗೆ ಹಲವಾರು ಪ್ರಮುಖ ರಾಷ್ಟ್ರಗಳು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ.
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಹೇಳುತ್ತಾರೆ: ಭಾರತವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಳೆದ ಒಂದು ದಶಕದಲ್ಲಿ ಜಗತ್ತಿನಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ತಲಾ ಆದಾಯವೂ ಹಿಂದೆಂದೂ ಇತಿಹಾಸದಲ್ಲಿ ಕಾಣದಷ್ಟು ಏರಿಕೆಯಾಗಿದೆ. 2023ರಲ್ಲಿ ಜಿ20 ಶೃಂಗವನ್ನೂ ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ಸಮಕಾಲೀನ ಸಂದರ್ಭದಲ್ಲಿ ಯಾವುದೇ ಒಂದು ದೇಶ ಏಕಾಂಗಿಯಾಗಿ ಸವಾಲುಗಳನ್ನು ಪರಿಹರಿಸಲು ಅಸಾಧ್ಯ. ಆದ್ದರಿಂದ ಭಾರತ-ಕೆನಡಾ ಒಪ್ಪಂದ ಮಹತ್ವದ್ದಾಗಿದೆ.