ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್; ಅಮರನಾಥ ಯಾತ್ರೆ ಸ್ಥಗಿತ

Amarnath Yatra Suspended in Jammu: ನಿರಂತರ ಮಳೆಯಿಂದಾಗಿ ಜಮ್ಮು ಕಾಶ್ಮೀರದ ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಎರಡನೇ ದಿನವೂ ಮುಚ್ಚಲ್ಪಟ್ಟಿದೆ. ಇದರಿಂದ ಶನಿವಾರ (ಆಗಸ್ಟ್‌ 1) ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜುಲೈ 3ರಂದು ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ ಸುಮಾರು 4.5 ಲಕ್ಷ ಭಕ್ತರು ಈ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಶ್ರೀನಗರ, ಆ. 1: ನಿರಂತರ ಮಳೆಯಿಂದಾಗಿ ಜಮ್ಮು-ಶ್ರೀನಗರ (Jammu) ರಾಷ್ಟ್ರೀಯ ಹೆದ್ದಾರಿ ಎರಡನೇ ದಿನವೂ ಮುಚ್ಚಲ್ಪಟ್ಟಿದ್ದರಿಂದ ಶನಿವಾರ (ಆಗಸ್ಟ್‌ 1) ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಹೊರಡುವ ಅಮರನಾಥ ಯಾತ್ರೆಯನ್ನು (Amarnath Yatra) ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ದುರಸ್ತಿ ಕಾರ್ಯ ಮುಂದುವರಿದಿರುವುದರಿಂದ ಕಾಶ್ಮೀರ ಕಣಿವೆಗೆ ಹೊಸ ಯಾತ್ರಾರ್ಥಿಗಳಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿನ ಇಳಿಕೆಯಾಗುತ್ತಿರುವ ಮಧ್ಯೆ ಅಮರನಾಥ ದೇವಾಲಯ ಮಂಡಳಿಯು ನೋಂದಣಿ ಮತ್ತು ಟೋಕನ್ ವಿತರಣಾ ಕೌಂಟರ್‌ಗಳನ್ನು ತಾವಿ ನದಿ ದಂಡೆಯಿಂದ ಭಗವತಿ ನಗರ ಮೂಲ ಶಿಬಿರಕ್ಕೆ ಸ್ಥಳಾಂತರಿಸಿದೆ. ಜುಲೈ 3ರಂದು ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ ಸುಮಾರು 4.5 ಲಕ್ಷ ಭಕ್ತರು ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ರಕ್ಷಾ ಬಂಧನ ದಿನವಾದ ಆಗಸ್ಟ್ 28ರಂದು ಯಾತ್ರೆ ಕೊನೆಗೊಳ್ಳಲಿದೆ.

ಉಧಮ್‌ಪುರ ಜಿಲ್ಲೆಯ ಹೆದ್ದಾರಿಯ ಲಾಧಾ-ಸಮ್ರೋಲಿ ವಿಭಾಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಜಮ್ಮು ಮೂಲ ಶಿಬಿರದಿಂದ ಯಾವುದೇ ಹೊಸ ತಂಡಕ್ಕೆ ಹೊರಹೋಗಲು ಅನುಮತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರೆ ಆರಂಭವಾದ ಕೇವಲ 5 ದಿನಗಳಲ್ಲಿ ಅಮರನಾಥ ಹಿಮಲಿಂಗ ಕರಗಿತೆ?

250 ಕಿ.ಮೀ. ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು NH 44 ಎಂದೂ ಕರೆಯುತ್ತಾರೆ. ಇದು ಕಾಶ್ಮೀರ ಕಣಿವೆಯನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆ ಎನಿಸಿಕೊಂಡಿದೆ. ಕಳೆದ ವಾರ ಮಳೆಯಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಅಮರನಾಥ ಯಾತ್ರಿಕರ ಬೆಂಗಾವಲು ಪಡೆ ಹಾದುಹೋದ ಸ್ವಲ್ಪ ಸಮಯದ ನಂತರ ಶುಕ್ರವಾರ (ಜುಲೈ 31) ಹೆದ್ದಾರಿಯ ಎರಡೂ ಬದಿಗಳನ್ನು ಸಂಚಾರಕ್ಕೆ ಮುಚ್ಚಲಾಯಿತು.

ಮಳೆ ಕೆಲಸ ಅಡ್ಡಿಯಾಗಿದ್ದು, ರಸ್ತೆಯ ಮೇಲ್ಮೈ ಕೆಸರಿನಿಂದ ಕೂಡಿದ್ದು, ತುಂಬಾ ಜಾರುವಂತಾಗಿದೆ. ರಂಬನ್ ಮತ್ತು ಉಧಂಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾದ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾವಿ ನದಿ ದಂಡೆಯನ್ನು ಅಮರನಾಥ ಯಾತ್ರಿಕರಿಗೆ ಆಫ್‌ಲೈನ್ ನೋಂದಣಿ, ಟೋಕನ್ ವಿತರಣೆ, ಇ-ಕೆವೈಸಿ ಪರಿಶೀಲನೆ ಮತ್ತು ಆರ್‌ಎಫ್‌ಐಡಿ ವಿತರಣೆಗಾಗಿ ಕೇಂದ್ರೀಕೃತ ಸೌಲಭ್ಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಯಾತ್ರಾರ್ಥಿಗಳ ಒಳಹರಿವು ಕಡಿಮೆಯಾಗುತ್ತಿರುವುದರಿಂದ, ಈ ಸೌಲಭ್ಯಗಳನ್ನು ಈಗ ಭಗವತಿ ನಗರ ಮೂಲ ಶಿಬಿರದಲ್ಲಿ ಕ್ರೋಢೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗವನ್ನು ಹೊಂದಿರುವ ಗುಹಾ ದೇವಾಲಯಕ್ಕೆ ತೀರ್ಥಯಾತ್ರೆ ಆಗಸ್ಟ್ 28ರವರೆಗೆ ಮುಂದುವರಿಯಲಿದೆ.