ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಸತ್ತಿನ ನಡವಳಿಕೆ ಬಗ್ಗೆ ರಾಹುಲ್‌ಗೆ ಅಮಿತ್ ಶಾ ಟಾಂಗ್: ಪ್ರಿಯಾಂಕಾ ನೋಡಿ ಕಲಿಯಿರಿ ಎಂದು ಸಲಹೆ!

ಲೋಕಸಭೆಯಲ್ಲಿ ನಡೆದ ತೀವ್ರ ಚರ್ಚೆಯ ವೇಳೆ ಅಮಿತ್ ಶಾ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾಷಣದ ಶೈಲಿಯನ್ನು ಕಟುವಾಗಿ ಟೀಕಿಸಿದರು. ಸಂಸತ್ತಿನ ಘನತೆಯನ್ನು ಕಾಪಾಡುವ ಜವಾಬ್ದಾರಿ ನಾಯಕತ್ವದ ಮೇಲಿರುವುದಾಗಿ ಹೇಳಿದ ಅವರು, ರಾಹುಲ್ ಬಳಸಿದ ಪದಗಳು ಮತ್ತು ಧಾಟಿ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಪ್ರಿಯಾಂಕಾ ಗಾಂಧಿ ಅವರ ವಾಕ್ಚಾತುರ್ಯ ಮತ್ತು ರಾಜಕೀಯ ಮಾತಿನ ಶೈಲಿಯನ್ನು ಮೆಚ್ಚಿ, ಅವರಿಂದಲೇ ಸಂಸದೀಯ ಭಾಷೆಯನ್ನು ಕಲಿಯಬಹುದು ಎಂದು ವ್ಯಂಗ್ಯವಾಗಿ ಸೂಚಿಸಿದರು.

ಗೃಹ ಸಚಿವ ಅಮಿತ್ ಶಾ - ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆ (Lok Sabha)ಯಲ್ಲಿ ಶುಕ್ರವಾರ ನಡೆದ ಚರ್ಚೆಯ ವೇಳೆ ಗೃಹ ಸಚಿವ ಅಮಿತ್ ಶಾ (Amit Sha) ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವ ಕಲೆಯನ್ನು ತಮ್ಮ ಹಿರಿಯರಿಂದ, ಕನಿಷ್ಠ ಪಕ್ಷ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ಯವರಿಂದಲಾದರೂ ಕಲಿತುಕೊಳ್ಳಿ ಎಂದು ಶಾ ಅವರು ವ್ಯಂಗ್ಯವಾಡಿದ್ದಾರೆ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಅವರ ಇತ್ತೀಚಿನ ಭಾಷಣದ ಧಾಟಿಯನ್ನು ಟೀಕಿಸಿದರು. "ಸಂಸತ್ತಿನ ಘನತೆಯನ್ನು ದೇಶ ಮತ್ತು ಪ್ರಪಂಚದಾದ್ಯಂತ ಎತ್ತಿಹಿಡಿಯುವುದು ನಿಮ್ಮ ಜವಾಬ್ದಾರಿ. 'ನೀವು ಹೇಡಿಗಳು, ನೀವು ಶರಣಾಗುತ್ತಿದ್ದೀರಿ, ನಿಮಗೆ ನನ್ನ ಕಂಡರೆ ಭಯ' ಎಂಬಂತಹ ಭಾಷೆ ಬಳಸುವುದು ವಿರೋಧ ಪಕ್ಷದ ನಾಯಕನಿಗೆ ಶೋಭಿಸುವುದಿಲ್ಲ. ಇಡೀ ದೇಶ ನಿಮ್ಮನ್ನು ಮತ್ತು ನಿಮ್ಮ ಪಕ್ಷವನ್ನು ಗಮನಿಸುತ್ತಿದೆ" ಎಂದು ಶಾ ಹೇಳಿದರು.

ಭಾರತ ಸೇರಿದಂತೆ ದೇಶಗಳಿಗೆ ರಷ್ಯಾದ ತೈಲ ಖರೀದಿಸಲು ಅವಕಾಶ; ಅಮೆರಿಕ ಹೇಳಿದ್ದೇನು?

ಪ್ರಿಯಾಂಕಾ ಭಾಷಣಕ್ಕೆ ಮೆಚ್ಚುಗೆ:

ಇದೇ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭಾಷಣವನ್ನು ಅಮಿತ್ ಶಾ ಉಲ್ಲೇಖಿಸಿದರು. ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ಚಾಣಕ್ಯನಿಗೆ ಹೋಲಿಸಿ ಚುಚ್ಚಿದ್ದರು. ಪ್ರಿಯಾಂಕಾ ಅವರ ವಾಕ್ಚತುರ್ಯವನ್ನು ಗಮನಿಸಿದ ಶಾ, "ನಿಮಗೆ ಯಾರೂ ಹಿರಿಯರು ಇಲ್ಲದಿದ್ದರೆ ಪ್ರಿಯಾಂಕಾ ಅವರನ್ನೇ ಹಿರಿಯರೆಂದು ಪರಿಗಣಿಸಿ ಅವರಿಂದ ಸಂಸದೀಯ ಭಾಷೆಯನ್ನು ಕಲಿಯಿರಿ" ಎಂದರು. ರಾಹುಲ್ ಗಾಂಧಿ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, "ನಾನು ಕಳೆದ 20 ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ನನ್ನ ಸಹೋದರಿ ಐದು ನಿಮಿಷಗಳಲ್ಲಿ ಮಾಡಿದ್ದಾರೆ, ಅಮಿತ್ ಶಾ ಅವರ ಮುಖದಲ್ಲಿ ನಗು ತರಿಸಿದ್ದಾರೆ" ಎಂದು ಲಘು ದಾಟಿಯಲ್ಲಿ ಹೇಳಿದರು.

ಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆ:

ಮತ್ತೊಂದೆಡೆ, 2029ರ ವೇಳೆಗೆ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲನ್ನಪ್ಪಿದೆ. ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ (ಕನಿಷ್ಠ 352 ಮತಗಳು) ಸಿಗದ ಕಾರಣ ಈ ಪ್ರಮುಖ ಮಸೂದೆ ಅಂಗೀಕಾರಗೊಳ್ಳಲಿಲ್ಲ. ಲೋಕಸಭೆಯ ಸ್ಥಾನಗಳನ್ನು 543 ರಿಂದ 850 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಈ ಮಸೂದೆಯ ಭಾಗವಾಗಿತ್ತು. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.