ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Andhra Government: 161 ಸರ್ಕಾರಿ ಸೇವೆಗಳು ಇನ್ಮುಂದೆ ವಾಟ್ಸಾಪ್​ನಲ್ಲೇ ಲಭ್ಯ- ಇದು ಆಂ‍ಧ್ರ ಸರ್ಕಾರ ವಿನೂತನ ಕಾರ್ಯ!

‌ಜನ ಸಾಮಾನ್ಯರಿಗೆ ಸುಲಭವಾಗುವಂತೆ ಆಂಧ್ರ ಪ್ರದೇಶ ಸರ್ಕಾರ 161 ಸರ್ಕಾರಿ ಸೇವೆಗಳನ್ನು ವಾಟ್ಸಾಪ್​ನಲ್ಲಿ ಲಭ್ಯವಾಗುವಂತೆ ಮಾಡಿದೆ. ಇಂಧನ, ಎಪಿಎಸ್​ಆರ್​ಟಿಸಿ, ಕಂದಾಯ, ಮುಖ್ಯಮಂತ್ರಿ ಪರಿಹಾರ ನಿಧಿ, ಮುನ್ಸಿಪಲ್ ಕಾರ್ಪೊರೇಷನ್​ಗೆ ಸಂಬಂಧಿಸಿದ ಸೇವೆಗಳು ಸದ್ಯ ಲಭ್ಯವಿದೆ.

Andhra Pradesh

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ(Andhra Government) ಸರ್ಕಾರಿ ಸೇವೆಗಳು ಇನ್ನು ಮುಂದೆ ವಾಟ್ಸಾಪ್​ನಲ್ಲಿ ಲಭ್ಯವಾಗಲಿದ್ದು, ಸಾರ್ವಜನಿಕರು ಪದೇ ಪದೇ ಕಚೇರಿಗೆ ಅಲೆಯುವುದು ತಪ್ಪಲಿದೆ. ಸದ್ಯ 161 ಸರ್ಕಾರಿ ಸೇವೆಗಳು ವಾಟ್ಸಾಪ್​ನಲ್ಲಿ ಲಭ್ಯವಾಗಲಿವೆ. ಈ ಬಗ್ಗೆ ಆಂಧ್ರ ಸರ್ಕಾರ ಅಧಿಕೃತವಾದ ಮಾಹಿತಿಯನ್ನು ಹೊರಡಿಸಿದೆ.

ಆರಂಭದಲ್ಲಿ, 161 ಸೇವೆಗಳು ಲಭ್ಯವಿದ್ದು, ಶೀಘ್ರದಲ್ಲೇ ಇನ್ನಷ್ಟು ಸೇರಿಸಲಾಗುವುದು. ಇಂಧನ,ಎಪಿಎಸ್​ಆರ್​ಟಿಸಿ, ಕಂದಾಯ, ಮುಖ್ಯಮಂತ್ರಿ ಪರಿಹಾರ ನಿಧಿ, ಮುನ್ಸಿಪಲ್ ಕಾರ್ಪೊರೇಷನ್​ಗೆ ಸಂಬಂಧಿಸಿದ ಸೇವೆಗಳನ್ನು ಮೊದಲ ಹಂತದಲ್ಲಿ ಒದಗಿಸಲಾಗುತ್ತದೆ. ಎರಡನೇ ಹಂತದಲ್ಲಿ ಹೆಚ್ಚಿನ ಸೇವೆಗಳನ್ನು ಒದಗಿಸುವ ನಿರೀಕ್ಷೆ ಇದೆ. ಸಾಮಾನ್ಯ ಜನರ ಡೇಟಾ ಅಪರಾಧಿಗಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.



ಇದರೊಂದಿಗೆ ಫೋರೆನ್ಸಿಕ್ಸ್ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸುವಂತೆಯೂ ಮನವಿ ಮಾಡಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 22 ರಂದು, ಆಂಧ್ರಪ್ರದೇಶವು ವಾಟ್ಸಾಪ್ ಮೂಲಕ ಸೇವೆಗಳನ್ನು ವಿಸ್ತರಿಸಲು ಮೆಟಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಬುಧವಾರ ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಉಪಕ್ರಮವನ್ನು ಪರಿಶೀಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ಎಲ್ಲಾ ಸರ್ಕಾರಿ ಸೇವೆಯು ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಈ ಸೇವೆಯ್ನನು ಪ್ರಾರಂಭ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ : Waqf Board: ಆಂಧ್ರ ಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ; ವಕ್ಫ್‌ ಬೋರ್ಡ್‌ ವಜಾಗೊಳಿಸಿ ಆದೇಶ

ಕೇವಲ ಸೇವೆ ಅಷ್ಟೇ ಅಲ್ಲ. ಇಲ್ಲಿ ದೂರು ಕೂಡ ಸಲ್ಲಿಸಬಹುದಾಗಿದೆ. ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯಬಹುದು.