ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟದ ಕಮಾಲ್‌; ಮತ್ತೆ ಸಿಎಂ ಆಗಲಿದ್ದಾರೆ ಹಿಮಂತ ಬಿಸ್ವಾ ಶರ್ಮಾ

ಈಶಾನ್ಯ ರಾಜ್ಯದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಅಸ್ಸಾಂನಲ್ಲಿ ಬಿಜೆಪಿ ಜಯದತ್ತ ಮುನ್ನುಗುತ್ತಿದೆ. 126 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, 722 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎನ್‌ಡಿಎ ನೇತೃತ್ವದ ಪಕ್ಷವು ಇದೀಗ 96 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದು, 27 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿದೆ.

ಸಂಗ್ರಹ ಚಿತ್ರ

ದಿಸ್ಪುರ: ಈಶಾನ್ಯ ರಾಜ್ಯದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಅಸ್ಸಾಂನಲ್ಲಿ ಬಿಜೆಪಿ ಜಯದತ್ತ ಮುನ್ನುಗುತ್ತಿದೆ. 126 ವಿಧಾನಸಭಾ (Assam Election Results) ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, 722 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ NDA ಮೈತ್ರಿಕೂಟ ಮತ್ತು ಗೌರವ್ ಗೊಗೊಯ್ ನೇತೃತ್ವದ ಅಸ್ಸೋಮ್ ಸನ್ಮಿಲಿಟೊ ಮೋರ್ಚಾ (ASM) ನಡುವೆ ಪೈಪೋಟಿ ಏರ್ಪಟ್ಟಿತ್ತು.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಯ ಪ್ರಮುಖ ಪಕ್ಷಗಳು ಅಸ್ಸಾಂ ಗಣ ಪರಿಷತ್ (ಎಜಿಪಿ) ಮತ್ತು ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್). ಬಿಜೆಪಿ 90 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಜಿಪಿ ಮತ್ತು ಬಿಪಿಎಫ್ ಕ್ರಮವಾಗಿ 26 ಮತ್ತು 11 ನಾಮನಿರ್ದೇಶಿತರನ್ನು ಹೊಂದಿವೆ. ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ 99 ಅಭ್ಯರ್ಥಿಗಳು, ರೈಜೋರ್ ದಳ 13, ಅಸ್ಸಾಂ ಜಾತಿಯ ಪರಿಷತ್ 10, ಸಿಪಿಐ (ಎಂ) ಮೂವರು ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ (ಎಪಿಎಚ್‌ಎಲ್‌ಸಿ) ಇಬ್ಬರು ಅಭ್ಯರ್ಥಿಗಳನ್ನು ಹೊಂದಿವೆ. ಎಐಯುಡಿಎಫ್ 30 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ತಲಾ 18 ಸ್ಥಾನಗಳಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) 22 ಸ್ಥಾನಗಳಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 16 ಸ್ಥಾನಗಳಲ್ಲಿ ಸ್ಪರ್ಧಿಸಿವೆ.

ಎನ್‌ಡಿಎ ನೇತೃತ್ವದ ಪಕ್ಷವು ಇದೀಗ 96 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದು, 27 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಹಿಮಂತ ಬಿಸ್ವಾ ಶರ್ಮಾ ಸಜ್ಜಾಗಿದ್ದಾರೆ. 126 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ ಕೇವಲ 64 ಸ್ಥಾನಗಳು ಬೇಕು. ಈಗಾಗಲೇ ಶರ್ಮಾ ನೇತೃತ್ವದ ಮೈತ್ರಿಕೂಟ ಮ್ಯಾಜಿಕ್‌ ನಂಬರ್‌ ದಾಟಿದೆ.

Assembly Election 2026 LIVE Counting and Results: ಪಂಚ ರಾಜ್ಯ ಚುನಾವಣಾ ಫಲಿತಾಂಶ; ತಮಿಳುನಾಡಿನಲ್ಲಿ ಟಿವಿಕೆ ಕಮಾಲ್‌, ಕೇರಳಂನಲ್ಲಿ ಕೆಂಪು ಕೋಟೆ ಛಿದ್ರ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಆಘಾತ

ಕ್ಷೇತ್ರ ಪುನರ್ವಿಂಗಡಣೆಯ ನಂತರ ಮೊದಲ ಚುನಾವಣೆ!

ಕ್ಷೇತ್ರ ಪುನರ್ವಿಂಗಡಣೆಯ ನಂತರ ಮೊದಲ ಬಾರಿಗೆ ಚುನಾವಣೆ ನಡೆದಿದೆ.ಕೆಲವು ಪ್ರದೇಶಗಳಲ್ಲಿ ಮತದಾರರ ಸಂಖ್ಯೆ, ಸಮುದಾಯಗಳ ವಾಸಸ್ಥಾನ, ರಾಜಕೀಯ ಪ್ರಭಾವ ಎಲ್ಲವೂ ಹೊಸ ರೂಪ ಪಡೆದಿವೆ. ಕ್ಷೇತ್ರಗಳ ಮರುವಿಂಗಡಣೆ ಕಾರಣದಿಂದ ಅನೇಕ ಕ್ಷೇತ್ರಗಳ ರಾಜಕೀಯದಲ್ಲಿ ಹಲವು ಬದಲಾವಣೆ ಕಂಡು ಬಂದಿತ್ತು.

Vishakha Bhat Heggar

View all posts by this author