ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault: ನಾಯಿ ಕಾಣೆಯಾಗಿದ್ದಕ್ಕೆ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ

ಸಾಕು ನಾಯಿ ಕಾಣೆಯಾಗಿರುವುದಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಳಿಕ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ.

ಭೋಪಾಲ್‌: ಸಾಕು ನಾಯಿ (Mssing dog) ಕಾಣೆಯಾಗಿದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬ (Senior Police) ಕಾನ್‌ಸ್ಟೇಬಲ್‌ (Police constable) ಮೇಲೆ ಹಲ್ಲೆ ನಡೆಸಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಖಾರ್ಗೋನ್‌ನಲ್ಲಿ ನಡೆದಿದೆ. ನಾಯಿ ಕಾಣೆಯಾಗಿರುವುದಕ್ಕೆ ಪೊಲೀಸ್ ಕಾನ್‌ಸ್ಟೇಬಲ್‌ ರಾಹುಲ್ ಚೌಹಾಣ್ ಕಾರಣ ಎಂದು ಆರೋಪಿಸಿ ಆರ್‌ಐ ಸೌರಭ್ ಸಿಂಗ್ ಕುಶ್ವಾಹ ಹಲ್ಲೆ ನಡೆಸಿದ್ದಾನೆ. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬಳಿಕ ಕುಶ್ವಾಹ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಮಧ್ಯ ಪ್ರದೇಶದ ಖರ್ಗೋನ್ ಜಿಲ್ಲೆಯ ಪೊಲೀಸ್ ಕಾನ್‌ಸ್ಟೇಬಲ್‌ ಅವರಿಂದಾಗಿ ಹಿರಿಯ ಪೊಲೀಸ್ ಅಧಿಕಾರಿ ನಿವಾಸದ ಸಾಕು ನಾಯಿ ಕಾಣೆಯಾಗಿದ್ದು, ಈ ಬಗ್ಗೆ ತಿಳಿದ ಮೇಲೆ ಹಿರಿಯ ಅಧಿಕಾರಿ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ.

ಆಗಸ್ಟ್ 23ರಂದು ರಿಸರ್ವ್ ಇನ್ಸ್‌ಪೆಕ್ಟರ್ (ಆರ್‌ಐ) ಸೌರಭ್ ಸಿಂಗ್ ಕುಶ್ವಾಹ ಅವರ ಸರ್ಕಾರಿ ನಿವಾಸದಲ್ಲಿ ಈ ಘಟನೆ ನಡೆದಿದೆ. ಅವರು ಕಾನ್‌ಸ್ಟೆಬಲ್ ರಾಹುಲ್ ಚೌಹಾಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಆರ್‌ಐ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ಚೌಹಾಣ್‌ನನ್ನು 1.30ರ ಸುಮಾರಿಗೆ ಕರೆಸಿದ ಕುಶ್ವಾಹ ತಮ್ಮ ಸಾಕು ನಾಯಿ ಕಾಣೆಯಾಗಿರುವುದಕ್ಕೆ ಚೌಹಾಣ್ ಅವರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಹಿರಿಯ ಅಧಿಕಾರಿ ಬೆಲ್ಟ್ ಮತ್ತು ಚಪ್ಪಲಿಯಿಂದ ಹೊಡೆದಿದ್ದಾನೆ ಎನ್ನಲಾಗಿದೆ.

ಆರ್‌ಐ ಕುಶ್ವಾಹ ಮತ್ತು ಆತನ ಪತ್ನಿ ಇಬ್ಬರೂ ಚೌಹಾಣ್ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ ಮಾತ್ರವಲ್ಲದೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರ ಕೈಗಳು, ಬೆನ್ನು ಮತ್ತು ಕಾಲುಗಳ ಮೇಲೆ ಗಾಯಗಳಾಗಿವೆ.



ಈ ಕುರಿತು ಕಾನ್‌ಸ್ಟೇಬಲ್‌ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲಧಿಕಾರಿಯ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಆರ್‌ಐ ಕುಶ್ವಾಹ ಮತ್ತು ಆತನ ಪತ್ನಿ ಜಯಶ್ರೀ ವಿರುದ್ಧ ದೂರು ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಚೌಹಾಣ್ ಅವರ ಆರೋಪಗಳನ್ನು ಕುಶ್ವಾಹ ನಿರಾಕರಿಸಿದ್ದಾನೆ. ಮನೆಯಲ್ಲಿ ಸಿಗರೇಟ್ ತುಂಡುಗಳು ಮತ್ತು ಮದ್ಯದ ಬಾಟಲಿಗಳು ಇದ್ದು, ಕಾನ್‌ಸ್ಟೇಬಲ್‌ ಕುಡಿದು ನಾಯಿಯ ಮೇಲೆ ಹಲ್ಲೆ ನಡೆಸಿ ಹೊರಗೆ ಬಿಟ್ಟಿದ್ದಾರೆ ಎಂದು ಕುಶ್ವಾಹ್ ಆರೋಪಿಸಿದ್ದಾನೆ. ಸದ್ಯ ಕುಶ್ವಾಹನನ್ನು ಅಧಿಕಾರದಿಂದ ಅಮಾನತುಗೊಳಿಸಲಾಗಿದೆ ಮತ್ತು ಆತನ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: Viral Video: ಆನೆಗೆ ಬಿಯರ್ ಕುಡಿಸಿದ ಕಿಡಿಗೇಡಿ- ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಗರಂ!

ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೈ ಆದಿವಾಸಿ ಯುವ ಶಕ್ತಿ (ಜೆವೈಎಸ್) ಸೇರಿದಂತೆ ಬುಡಕಟ್ಟು ಸಂಘಟನೆಗಳು ಮತ್ತು ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿವೆ. ಮೂವರು ಕಾಂಗ್ರೆಸ್ ಶಾಸಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author