ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ayodhya Ram Mandir: ಅಯೋಧ್ಯೆ ರಾಮಮಂದಿರಕ್ಕೆ ಸಾರ್ವಜನಿಕರಿಂದ 3,000 ಕೋಟಿ ರೂ. ದೇಣಿಗೆ

Donation for Ayodhya Ram Mandir: ಅಯೋಧ್ಯಾ ರಾಮ ಮಂದಿರ ನಿರ್ಮಾಣ ಸಮಿತಿ ದೇವಾಲಯ ಯೋಜನೆ ಪ್ರಕಾರ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಉಳಿದಿರುವ ಕಾಮಗಾರಿಗಳ ಒಟ್ಟು ವೆಚ್ಚ ಸುಮಾರು 1,800 ಕೋಟಿ ರೂ.ಎಂದು ಅಂದಾಜಿಸಲಾಗಿದ್ದು, ಸಾರ್ವಜನಿಕರಿಂದಲೇ 3,000 ಕೋಟಿ ರೂ. ದೇಣಿಗೆ ಬಂದಿದೆ. 2022ರಲ್ಲಿ ಹಣಕಾಸು ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದ ದೇಶಾದ್ಯಂತ ಹೆಚ್ಚಿನ ಜನರು ಉದಾರವಾಗಿ ಹಣ ನೀಡಿದ್ದಾರೆ. ನವೆಂಬರ್ 25 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಎಲ್ಲಾ ದಾನಿಗಳನ್ನು ಆಹ್ವಾನಿಸುವುದಾಗಿ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಬುಧವಾರ ತಿಳಿಸಿದ್ದಾರೆ.

ಅಯೋಧ್ಯಾ: ರಾಮ ಮಂದಿರ (Ram Mandir) ನಿರ್ಮಾಣಕ್ಕಾಗಿ ದೇಶ- ವಿದೇಶಗಳಿಂದ ಜನರು 3,000 ಕೋಟಿ ರೂ. ಗಳಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಅಯೋಧ್ಯೆ (ayodhya) ರಾಮ ಮಂದಿರ ದೇವಾಲಯ ಯೋಜನೆಯ ಉಳಿದಿರುವ ಕಾಮಗಾರಿಗಳ ಒಟ್ಟು ವೆಚ್ಚ ಸುಮಾರು 1,800 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಸುಮಾರು 1,500 ಕೋಟಿ ರೂ. ಗಳ ಬಿಲ್ಲಿಂಗ್ ಕಾರ್ಯಗಳು ಪೂರ್ಣಗೊಂಡಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ (Ram Mandir Construction Committee chairman) ನೃಪೇಂದ್ರ ಮಿಶ್ರಾ ಬುಧವಾರ ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ 2022ರಲ್ಲಿ ದೇಣಿಗೆ ಸಂಗ್ರಹ ಕಾರ್ಯವನ್ನು ಆರಂಭಿಸಲಾಗಿತ್ತು. ಈ ಹಣಕಾಸು ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದ ದೇಶಾದ್ಯಂತ ಜನರು ಉದಾರವಾಗಿ ಹಣವನ್ನು ದಾನವಾಗಿ ನೀಡಿದ್ದಾರೆ ಎಂದು ಅವರು ತಿಳಿಸಿದರು. ದೇವಾಲಯದ ನಿರ್ಮಾಣಕ್ಕೆ ಇಲ್ಲಿಯವರೆಗೆ ಸುಮಾರು 1,500 ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ. ಇನ್ನು ದೇವಾಲಯ ಸಂಕೀರ್ಣದಾದ್ಯಂತ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು 1,800 ಕೋಟಿ ರೂ. ಗಳಷ್ಟು ಅಂದಾಜು ವೆಚ್ಚವಾಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Rishabh Pant: ಕೊಹ್ಲಿಯ 18ನೇ ನಂಬರ್ ಜೆರ್ಸಿ ಧರಿಸಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ರಿಷಭ್ ಪಂತ್

ರಾಮ ಮಂದಿರದ ಆವರಣದಲ್ಲಿ ನವೆಂಬರ್ 25ರಂದು ದೇವಾಲಯದ ಶಿಖರದ ಮೇಲಿನ ಧ್ವಜಾರೋಹಣ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಎಲ್ಲಾ ದಾನಿಗಳನ್ನು ಆಹ್ವಾನಿಸಲಾಗುವುದು ಎಂದು ನೃಪೇಂದ್ರ ಮಿಶ್ರಾ ಹೇಳಿದರು. ಧ್ವಜಾರೋಹಣ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು 70 ಎಕರೆ ವಿಸ್ತೀರ್ಣದ ದೇವಾಲಯ ಸಂಕೀರ್ಣದಲ್ಲಿರುವ ಶೇಷಾವತಾರ ದೇವಾಲಯ, ಕುಬೇರ ತಿಲ ಮತ್ತು ಸಪ್ತ ಮಂಟಪಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.



2024ರ ಜನವರಿ 22ರಂದು ರಾಮ ದೇವಾಲಯದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಲಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಮುಂದಿನ ನಡೀಲಿರ್ವ ಧ್ವಜಾರೋಹಣಕ್ಕೆ ಪೂರ್ವಭಾವಿಯಾಗಿ ಬುಧವಾರ ಧ್ವಜಾರೋಹಣಡಾ ಪರೀಕ್ಷೆ ನಡೆಸಲಾಗಿದೆ. ದೇವಾಲಯದ ಒಳಗೆ ಏಕಕಾಲದಲ್ಲಿ 5,000 ರಿಂದ 8,000 ಭಕ್ತರಿಗೆ ಅವಕಾಶ ಕಲ್ಪಿಸಬಹುದು ಎಂದು ಮಿಶ್ರಾ ಅವರು ತಿಳಿಸಿದ್ದಾರೆ.

ದಕ್ಷಿಣ ನಿರ್ಗಮನಕ್ಕೆ ದರ್ಶನ ಮಾರ್ಗವು ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸುಗ್ರೀವ್ ಕಿಲಾವರೆಗಿನ ಪೂರ್ಣ ಮಾರ್ಗವು ಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 8,000 ಕ್ಕೂ ಹೆಚ್ಚು ಜನರನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 25 ರಂದು ನಡೆಯುವ ರಾಮ ದೇವಾಲಯದ ಶಿಖರದ ಮೇಲಿನ ಧ್ವಜಾರೋಹಣ ಸಮಾರಂಭಕ್ಕೆ ಎಲ್ಲಾ ದಾನಿಗಳನ್ನು ಆಹ್ವಾನಿಸಲಾಗುತ್ತಿದೆ. ಧ್ವಜಾರೋಹಣ ಸಮಾರಂಭದ ಅನಂತರ ದೇವಾಲಯ ಸಂಕೀರ್ಣದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಸಂಬಂಧಿಸಿದ ಕಂಪೆನಿಗಳು, ಪೂರೈಕೆದಾರರು ಮತ್ತು ಕಾರ್ಮಿಕರನ್ನು ಸಮ್ಮಾನಿಸಲಾಗುವುದು. ಅಲ್ಲಿ ಅವರಿಗೆ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು ಎಂದರು.

ಇದನ್ನೂ ಓದಿ: Shreyas Iyer: 'ಪ್ರತಿದಿನ ಉತ್ತಮಗೊಳ್ಳುತ್ತಿದೆ'; ಗಾಯದ ಬಗ್ಗೆ ಶ್ರೇಯಸ್‌ ಅಯ್ಯರ್‌ ಮೊದಲ ಪ್ರತಿಕ್ರಿಯೆ

ರಾಮ ಮಂದಿರಕ್ಕೆ ಭಕ್ತರ ಭೇಟಿಗೆ ಸುಲಭವಾಗುವಂತೆ ಪಾರ್ಕೋಟಾದ ಬಳಿ ಶೂ ಮತ್ತು ಚಪ್ಪಲಿಗಳನ್ನು ಇಡಲು ಮೂರು ಗೊತ್ತುಪಡಿಸಿದ ಸ್ಥಳಗಳನ್ನು ಸ್ಥಾಪಿಸಲಾಗಿದ್ದು. ನವೆಂಬರ್ 5 ರೊಳಗೆ ಪಾರ್ಕೋಟಾ ನಿರ್ಮಾಣವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author