ಬೆಂಗಳೂರು: ಭಾರತೀಯ ನೌಕಾಪಡೆಗೆ ಸಹಾಯಕವಾಗುವ ಮತ್ತು ದೇಶದ ರಕ್ಷಣೆಗೆ ಮೀಸಲಾಗಿರುವ ಉಪಗ್ರಹವನ್ನು ಹೊತ್ತು ಬೃಹತ್ ಬಾಹುಬಲಿ (Bahubali Rocket Launch) ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್- 3 (Launch Vehicle Mark-3) ಅನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ (Indian Space Research Organisation) ಸಜ್ಜಾಗಿದೆ. ಅತ್ಯಂತ ಭಾರದ ಈ ರಾಕೆಟ್ ಭಾನುವಾರ (ನವೆಂಬರ್ 2) ಸಂಜೆ 5.26ಕ್ಕೆ ಆಂಧ್ರ ಪ್ರದೇಶದ (Andrapradesh) ಶ್ರೀ ಹರಿಕೋಟಾದಲ್ಲಿರುವ (Sriharikota) ಭಾರತದ ಬಾಹ್ಯಾಕಾಶ ಬಂದರಿನಿಂದ ಆಕಾಶಕ್ಕೆ ಜಿಗಿಯಲಿದೆ. ಈ ರಾಕೆಟ್ ಕುರಿತಾದ ಹತ್ತು ವಿಶೇಷ ಮಾಹಿತಿಗಳು ಇಲ್ಲಿವೆ.
- ಭಾರತದ ಬಾಹ್ಯಾಕಾಶ ಬಂದರು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಎಂಟನೇ ರಾಕೆಟ್ ಆಗಿರುವ ಬಾಹುಬಲಿ ಅನ್ನು ಭಾನುವಾರ ಸಂಜೆ 5.26ಕ್ಕೆ ಉಡಾವಣೆ ಮಾಡಲಾಗುತ್ತದೆ.
- ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈವರೆಗೆ ಉಡಾವಣೆಯಾಗಿರುವ ಎಲ್ಲ ಉಡಾವಣೆಗಳು ಶೇ. 100ರಷ್ಟು ಯಶಸ್ವಿಯಾಗಿದೆ. ಎಂಟನೇ ರಾಕೆಟ್ ಬೃಹತ್ 'ಬಾಹುಬಲಿ' ಅನ್ನು ತಾಂತ್ರಿಕವಾಗಿ ಲಾಂಚ್ ವೆಹಿಕಲ್ ಮಾರ್ಕ್-3 (LVM-3) ಎಂದು ಕರೆಯಲಾಗುತ್ತಿದೆ.
- ಕೊನೆಯ ಬಾರಿಗೆ 2023ರಲ್ಲಿ ಎಲ್ ವಿಎಂ-3 ಭಾರತದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಗಿತ್ತು. ಇದು ಐತಿಹಾಸಿಕ ದಾಖಲೆಯಾಗಿದ್ದು, ಸ್ವದೇಶಿ ಹೆವಿ ಲಿಫ್ಟ್ ಲಾಂಚರ್ 43.5 ಮೀಟರ್ ಎತ್ತರವಾಗಿದ್ದು, 15 ಅಂತಸ್ತಿನ ಕಟ್ಟಡಕ್ಕೆ ಸಮನಾಗಿರುತ್ತದೆ.
- ಹೆವಿ ಲಿಫ್ಟ್ ಲಾಂಚರ್ ಉಡಾವಣೆಯಲ್ಲಿ 642 ಟನ್ ಭಾರ ಹೊಂದಿದ್ದು, ಇದು 150 ಆನೆಗಳ ಭಾರಕ್ಕೆ ಸಮಾನವಾಗಿದೆ.
ಇದನ್ನೂ ಓದಿ: Bangalore News: ಅಪೋಲೊ ಕ್ಯಾನ್ಸರ್ ಸೆಂಟರ್‌ಗಳ ಹೊಸ ಕ್ಯಾಂಪೇನ್ ‘ಚೆಕ್-ಒಲೇಟ್’ ಸಿಹಿಯಾದ ಚಾಕೊಲೇಟ್‌ನಲ್ಲಿ ಆರೋಗ್ಯದ ಸಂದೇಶ
- ಭಾರತೀಯ ನೌಕಾಪಡೆಯ ಸಮುದ್ರ ರಕ್ಷಣಾ ಸಂವಹನಕ್ಕಾಗಿ ಬಳಸಲಾಗುವ ಉಪಗ್ರಹವನ್ನು ಸಿಎಂಎಸ್ -03 ಎಂದು ಕರೆಯಲಾಗುತ್ತದೆ.
- ಸಿಎಂಎಸ್ -03ಯು 4,400 ಕೆ.ಜಿ. ಭಾರ ಹೊಂದಿದ್ದು, ಇದನ್ನು ಭಾರತದಿಂದ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ಉಡಾಯಿಸಲಾಗುವ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದೆ.
- 2013ರಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನದ ನೌಕಾಪಡೆಯನ್ನು ದೂರವಿಡಲು ಸಹಾಯ ಮಾಡಿದ್ದ ಜಿಸ್ಯಾಟ್-7 ಅಥವಾ ರುಕ್ಮಿಣಿ ಉಪಗ್ರಹವನ್ನು ಸಿಎಂಎಸ್ -03 ಉಪಗ್ರಹವು ಬದಲಾಯಿಸಲಿದೆ.
- ಹೊಸ ಉಪಗ್ರಹವು ಅನೇಕ ಬ್ಯಾಂಡ್‌ಗಳಲ್ಲಿ ಸಂವಹನ ನಡೆಸಬಲ್ಲದು. ಭಾರತದ ಕರಾವಳಿಯಿಂದ 2,000 ಕಿಮೀ ಒಳಗೆ ಸುರಕ್ಷಿತ ಸಂವಹನ ನಡೆಸಲು ಭಾರತೀಯ ನೌಕಾಪಡೆಗಳಿಗೆ ಸಹಾಯ ಮಾಡುತ್ತದೆ.
- ಪ್ರತಿ ಎಲ್ ವಿಎಂ-3 ರಾಕೆಟ್‌ಗೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದ್ದು , ಇದರ 16 ನಿಮಿಷಗಳ ಹಾರಾಟಕ್ಕೆ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಅನ್ನು ಬಳಸಲಾಗುತ್ತದೆ.
- ಭಾರತದ ಸಿಬ್ಬಂದಿ ಬಾಹ್ಯಾಕಾಶ ಹಾರಾಟ ಅಥವಾ ಗಗನ್ ಯಾನ್ ಮಿಷನ್‌ಗೆ ಎಲ್ ವಿಎಂ-3 ‘ಬಾಹುಬಲಿ’ ರಾಕೆಟ್ ಶಕ್ತಿ ತುಂಬಲಿದೆ.