ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan National Symbol Balloon: ಹಿಮಾಚಲ ಪ್ರದೇಶದ ಹಳ್ಳಿಯಲ್ಲಿ ಪಾಕಿಸ್ತಾನದ ಗುರುತಿರುವ ಬಲೂನ್ ಪತ್ತೆ

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನೂರ್ಪುರ್ ಪ್ರದೇಶದ ಸುಲಿಯಾಲಿ ಪಂಚಾಯತ್‌ನಲ್ಲಿರುವ ಛತ್ರಿ ಮಾತಾ ದೇವಸ್ಥಾನದ ಬಳಿ ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆ ಮತ್ತು 'ಪಿಐಎ' ಎಂಬ ಸಂಕ್ಷಿಪ್ತ ರೂಪವನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ ಶುಕ್ರವಾರ ಪತ್ತೆಯಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಕಾಂಗ್ರಾ (Kangra) ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆ (Pakistani national symbol) ಮತ್ತು 'ಪಿಐಎ' (PIA) ಎಂಬ ಸಂಕ್ಷಿಪ್ತ ರೂಪವನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ (balloon) ಪತ್ತೆಯಾಗಿದೆ. ಕಾಂಗ್ರಾ ಜಿಲ್ಲೆಯ ನೂರ್ಪುರ್ ಪ್ರದೇಶದ ಸುಲಿಯಾಲಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಛತ್ರಿ ಮಾತಾ ದೇವಸ್ಥಾನದ ಬಳಿ ಮಹಿಳೆಯೊಬ್ಬರು ಇದನ್ನು ನೋಡಿ ಅವರು ತಮ್ಮ ತಂದೆಗೆ ತಿಳಿಸಿದ್ದಾರೆ. ಬಳಿಕ ಗ್ರಾಮದ ಮುಖ್ಯಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಲೂನ್ ವಶಕ್ಕೆ ಪಡೆದಿದ್ದಾರೆ.

ನೂರ್ಪುರ್ ಪ್ರದೇಶದ ಸುಲಿಯಾಲಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಛತ್ರಿ ಮಾತಾ ದೇವಸ್ಥಾನದ ಬಳಿ ಶೀತಲ್ ಎಂಬ ಸ್ಥಳೀಯ ಮಹಿಳೆ ಶುಕ್ರವಾರ ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆ ಮತ್ತು 'ಪಿಐಎ' ಎಂಬ ಸಂಕ್ಷಿಪ್ತ ರೂಪವನ್ನು ಹೊಂದಿರುವ ಬಲೂನ್ ಅನ್ನು ಗಮನಿಸಿದರು.

ಇದನ್ನೂ ಓದಿ: Lokayukta Raid: ರಾಜ್ಯಾದ್ಯಂತ ಲೋಕಾಯುಕ್ತ ದಾಳಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್

ಈ ಬಗ್ಗೆ ಶೀತಲ್ ಅವರು ತಮ್ಮ ತಂದೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಘಟನೆಯ ಬಗ್ಗೆ ಗ್ರಾಮದ ಕೆಲವು ಗ್ರಾಮಸ್ಥರು ಹಾಗೂ ಮುಖ್ಯಸ್ಥರು ಸೇರಿ ಸ್ಥಳೀಯ ಪೊಲೀಸರಿಗೆ ವರದಿ ಮಾಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಬಲೂನ್ ಅನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ನಿವಾಸಿ ಪ್ರೀತಮ್ ಎಂಬಾತ ಕೆಲಸಕ್ಕೆ ಹೋಗುವಾಗ ಹತ್ತಿರದ ಹೊಳೆಯಲ್ಲಿ ಈ ಬಲೂನ್ ಅನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಎಸ್‌ಪಿ ವಿಶಾಲ್ ವರ್ಮಾ ಬಲೂನ್ ಪತ್ತೆಯಾಗಿದೆ ಎಂದು ದೃಢಪಡಿಸಿದ್ದಾರೆ. ಈ ಘಟನೆಯ ಮೂಲ ಮತ್ತು ಉದ್ದೇಶವನ್ನು ನಿರ್ಧರಿಸಲು ತನಿಖೆ ನಡೆಸುತ್ತಿರುವುದಾಗಿ ಹೇಳಿದರು.

ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಅನ್ನು ಸೂಚಿಸುವ ಪಿಐಎ ಎಂದು ಬರೆದಿರುವ ಅನುಮಾನಾಸ್ಪದ ಬಲೂನ್ ಪತ್ತೆಯಾಗಿತ್ತು.

ಟತೆಹ್ರಾ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಬಲೂನ್ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಕಳವಳ ಉಂಟು ಮಾಡಿತ್ತು. ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ಪೊಲೀಸ್ ಸಿಬ್ಬಂದಿ ಮತ್ತು ಗುಪ್ತಚರ ಸಂಸ್ಥೆಗಳು ಸ್ಥಳಕ್ಕೆ ಆಗಮಿಸಿ ಬಲೂನ್ ಅನ್ನು ವಶಕ್ಕೆ ಪಡೆದಿತ್ತು.

ಪ್ರಾಥಮಿಕ ಪರೀಕ್ಷೆಯಲ್ಲಿ ಬಲೂನ್‌ನಲ್ಲಿ ಪಿಐಎ ಮತ್ತು ಉರ್ದು ಭಾಷೆಯಲ್ಲಿ ಬರೆಯಲಾದ ಹೆಚ್ಚುವರಿ ಪಠ್ಯ ಇರುವುದು ಕಂಡುಬಂದಿತ್ತು. ಕಳೆದ ತಿಂಗಳು ಹಮೀರ್‌ಪುರ ಜಿಲ್ಲೆಯಲ್ಲಿ ಇದೇ ರೀತಿಯ ಬಲೂನ್ ಕಂಡುಬಂದಿದ್ದು, ಪ್ರದೇಶದಾದ್ಯಂತ ಕಳವಳ ಉಂಟು ಮಾಡಿತ್ತು. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣ ವರದಿ ಮಾಡುವಂತೆ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author