ಬೆಂಗಳೂರು: ಅಕ್ಟೋಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರಲಿದೆ. ಬ್ಯಾಂಕ್‌ನಲ್ಲಿ ವಹಿವಾಟು ನಡೆಸುವವರು ರಜೆಗಳ ಕುರಿತು ತಿಳಿದುಕೊಳ್ಳಬೇಕು. ದಸರಾದಿಂದ ದೀಪಾವಳಿಯವರೆಗೆ, ಬ್ಯಾಂಕುಗಳು (Bank Holidays) ಬಹು ದಿನಗಳು ಬ್ಯಾಂಕ್‌ಗೆ ರಜೆ ಇರುತ್ತದೆ. ನೀವು ಅಕ್ಟೋಬರ್‌ನಲ್ಲಿ ಯಾವುದೇ ಬ್ಯಾಂಕ್ ಸಂಬಂಧಿತ ಚಟುವಟಿಕೆಯನ್ನು ಯೋಜಿಸುತ್ತಿದ್ದರೆ, ಕೊನೆಯ ಕ್ಷಣದ ಅನಾನುಕೂಲತೆಗಳನ್ನು ತಪ್ಪಿಸಲು ರಜೆಯ ವೇಳಾಪಟ್ಟಿಯನ್ನು ಗಮನಿಸುವುದು ಮುಖ್ಯ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ ತಿಂಗಳ ಅಧಿಕೃತ ರಜಾ ಕ್ಯಾಲೆಂಡರ್ ಅನ್ನು ಪ್ರಕಟಿಸಿದೆ.
ಎಲ್ಲಾ ಬ್ಯಾಂಕುಗಳು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಾದ ಅಕ್ಟೋಬರ್ 11 ಮತ್ತು 25 ರಂದು ಮತ್ತು ಎಲ್ಲಾ ಭಾನುವಾರಗಳಾದ ಅಕ್ಟೋಬರ್ 5, 12, 19 ಮತ್ತು 26 ರಂದು ಮುಚ್ಚಲ್ಪಡುತ್ತವೆ. ದಸರಾ, ದುರ್ಗಾ ಪೂಜೆ, ಗಾಂಧಿ ಜಯಂತಿ, ಲಕ್ಷ್ಮಿ ಪೂಜೆ, ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಇರಲಿದೆ. ಅಕ್ಟೋಬರ್ 1 ರಂದು ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಮಹಾನವಮಿಯನ್ನು ಆಚರಿಸಲಾಸಲಾಗುತ್ತದೆ. ಹೀಗಾಗೆ ಬ್ಯಾಂಕ್‌ಗಳು ರಜೆ ಇರುತ್ತವೆ. ಅಕ್ಟೋಬರ್ 2: ಮಹಾತ್ಮಾ ಗಾಂಧಿ ಜಯಂತಿ, ದಸರಾ ಮತ್ತು ದುರ್ಗಾ ಪೂಜೆಗಾಗಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ ಇರುವುದರಿಂದ ಬ್ಯಾಂಕುಗಳಿಗೆ ರಜೆ ಇರುತ್ತವೆ.
ಈ ಸುದ್ದಿಯನ್ನೂ ಓದಿ: Navaratri 2025: ನವರಾತ್ರಿಯ ಒಂಬತ್ತನೇ ದಿನ; ಸಿದ್ದಿಧಾತ್ರಿ ದೇವಿಯನ್ನು ಪೂಜಿಸುವುದು ಏಕೆ?
ಅಕ್ಟೋಬರ್ 22 ರಂದು ದೀಪಾವಳಿ ರಜೆ ಇರುವುದರಿಂದ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ. ಅಕ್ಟೋಬರ್ 25 ರಂದು 4 ನೇ ಶನಿವಾರ ಹಾಗೂ 26 ರಂದು ಭಾನುವಾರ ಇರುವುದರಿಂದ ಬ್ಯಾಕುಗಳು ತೆರಯುವುದಿಲ್ಲ. ರಜಾದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟಿದ್ದರೂ, ಮೊಬೈಲ್ ಅಪ್ಲಿಕೇಶನ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಪಾವತಿಗಳು ಮತ್ತು ಎಟಿಎಂ ವಹಿವಾಟುಗಳಂತಹ ಡಿಜಿಟಲ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇದರರ್ಥ ಗ್ರಾಹಕರು ಶಾಖೆಗೆ ಭೇಟಿ ನೀಡದೆಯೇ ಹಣವನ್ನು ವರ್ಗಾಯಿಸಬಹುದು, ಬಿಲ್‌ಗಳನ್ನು ಪಾವತಿಸಬಹುದು, ಖಾತೆ ಬಾಕಿಗಳನ್ನು ಪರಿಶೀಲಿಸಬಹುದು ಮತ್ತು ಇತರ ವಹಿವಾಟುಗಳನ್ನು ಮಾಡಬಹುದು.