ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಜೆಪಿಯ 30 ವರ್ಷಗಳ ಭದ್ರಕೋಟೆ ಪುಡಿ ಪುಡಿ ಮಾಡಿದ ಪ್ರಶಾಂತ್ ಕಿಶೋರ್; ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್‌ಗೆ ಐತಿಹಾಸಿಕ ಗೆಲುವು

Prashant Kishor: ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು, ಮೂರು ತಿಂಗಳಲ್ಲಿ ಬಂಕಿಪುರದಲ್ಲಿ ಗೋಚರಿಸುವ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದಾರೆ. ಈ ಗೆಲುವು ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ಪರಿಗಣಿಸಲಾಗಿದೆ.

ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್

ಪಾಟ್ನಾ, ಆ. 3: ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ (Assembly Constituency) ಉಪಚುನಾವಣೆಯಲ್ಲಿ (By-election) ಜನ ಸುರಾಜ್ ಪಕ್ಷದ (Jan Suraaj Party - JSP) ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಹಲವು ವರ್ಷಗಳಿಂದ ಬಿಜೆಪಿ ಭದ್ರಕೋಟೆ ಆಗಿದ್ದ ಈ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಪ್ರಶಾಂತ್ ಕಿಶೋರ್, "ಮುಂದಿನ ಮೂರು ತಿಂಗಳಲ್ಲಿ ಬಂಕಿಪುರದಲ್ಲಿ ಸ್ಪಷ್ಟವಾದ ಬದಲಾವಣೆ ಕಾಣುತ್ತೀರಿ. ಅದಕ್ಕಾಗಿ ನನಗೆ ಮೂರು ತಿಂಗಳ ಸಮಯ ನೀಡಿ. ನನ್ನ ಕಚೇರಿ ಬಂಕಿಪುರ ಜನರಿಗೆ ಮಾತ್ರವಲ್ಲ, ಇಡೀ ಬಿಹಾರದ ಜನರಿಗೆ ಸದಾ ತೆರೆದಿರುತ್ತದೆ" ಎಂದು ಹೇಳಿದರು.

"ನಾನು ಯಾವುದೇ ಅದ್ಭುತ ಮಾಡಿಲ್ಲ. ಆದರೆ ಕೇವಲ 30 ದಿನಗಳಲ್ಲಿ ಬಿಜೆಪಿಯ 30 ವರ್ಷದ ಭದ್ರಕೋಟೆಯನ್ನು ಭೇದಿಸಿದ್ದೇನೆ. ಈ ಗೆಲುವು ಬಂಕಿಪುರ ಜನರ ವಿಶ್ವಾಸದ ಫಲ" ಎಂದು ಅವರು ತಿಳಿಸಿದರು.

ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್‌ ಕಿಶೋರ್‌ಗೆ ಜಯ:



ಬಿಹಾರದ ಅಭಿವೃದ್ಧಿಗಾಗಿ ಸಂಪೂರ್ಣ ಸಮರ್ಪಣೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದ ಅವರು, "ಬಿಹಾರಕ್ಕೆ ಉತ್ತಮ ನಾಯಕತ್ವ ಬೇಕೆಂಬ ಸಂದೇಶವನ್ನು ಜನರು ನೀಡಿದ್ದಾರೆ. ಅಪರಾಧ ಹಿನ್ನೆಲೆ ಅಥವಾ ವಿವಾದಾತ್ಮಕ ವ್ಯಕ್ತಿತ್ವ ಹೊಂದಿರುವವರು ರಾಜ್ಯವನ್ನು ಮುನ್ನಡೆಸಬಾರದು ಎಂಬುದು ಜನರ ಅಭಿಪ್ರಾಯ" ಎಂದರು.

ಇತ್ತ ಬಿಹಾರ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಪ್ರಶಾಂತ್ ಕಿಶೋರ್ ಅವರಿಗೆ ಅಭಿನಂದನೆ ಸಲ್ಲಿಸಿದರು. "ಪ್ರಜಾಪ್ರಭುತ್ವದ ಹಬ್ಬದಲ್ಲಿ ಬಂಕಿಪುರ ಜನರು ಜನ ಸುರಾಜ್ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಜನರ ತೀರ್ಪನ್ನು ಗೌರವಿಸಿ ಪ್ರಶಾಂತ್ ಕಿಶೋರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಉಪಚುನಾವಣೆ ದೇಶಾದ್ಯಂತ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲೇ ನಡೆದಿದ್ದು, ಯುವ ಮತದಾರರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಶಿಕ್ಷಣ ಸಂಸ್ಥೆಗಳು ಹೆಚ್ಚಿರುವ ಬ್ಯಾಂಕಿಪುರ್ ಕ್ಷೇತ್ರದಲ್ಲಿ ಯುವಕರ ಮತದಾನ ನಿರ್ಣಾಯಕವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಬಂಕಿಪುರ ಹಲವು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ನವೀನ್ ಹಲವು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಕ್ಷೇತ್ರ ತೆರವಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನೀರಜ್ ಕುಮಾರ್ ಹಾಗೂ ಆರ್‌ಜೆಡಿ ಪರ ರೇಖಾ ಕುಮಾರಿ ಸ್ಪರ್ಧಿಸಿದ್ದರು. ಜನ ಸುರಾಜ್ ಪಕ್ಷವು 2025ರ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದ್ದರೂ, ಈ ಬಾರಿ ಬಂಕಿಪುರ್‌ನಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಮೊದಲ ವಿಧಾನಸಭಾ ಸ್ಥಾನವನ್ನು ದಾಖಲಿಸಿದೆ.

ಜನ ಸುರಾಜ್ ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಮನೋಜ್ ಭಾರತಿ, "ಬಂಕಿಪುರ್ ಜನರು ಬದಲಾವಣೆಯನ್ನು ಆಯ್ಕೆ ಮಾಡಿದ್ದಾರೆ. ಮೌನ ಮತದಾರರ ಅಪಾರ ಬೆಂಬಲದಿಂದ ಈ ಗೆಲುವು ಸಾಧ್ಯವಾಗಿದೆ. ಇದು ಬಿಹಾರದ ಪ್ರಜಾಪ್ರಭುತ್ವಕ್ಕೆ ಮಹತ್ವದ ಸಂದೇಶ" ಎಂದು ಹೇಳಿದ್ದಾರೆ.