ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಕ್ರಮ ಬೆಟ್ಟಿಂಗ್ ಆ್ಯಪ್: ಯುವರಾಜ್ ಸಿಂಗ್ ಸೇರಿ ಖ್ಯಾತ ಸೆಲೆಬ್ರಿಟಿಗಳ ಆಸ್ತಿ ಇಡಿ ವಶಕ್ಕೆ!

ಮಾಜಿ ಕ್ರಿಕೆಟಿಗರಾದ ಯುವರಾಜ್‌ ಸಿಂಗ್‌, ರಾಬಿನ್ ಉತ್ತಪ್ಪ ಹಾಗೂ ನಟ ಸೋನು ಸೂದ್‌ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಮೋಟ್ ಮಾಡಿದ್ದ ಕಾರಣ ಬೆಟ್ಟಿಂಗ್ ಜಾಲದ ವಿರುದ್ಧ ಸಮರ ಸಾರಿರುವ ಜಾರಿ ನಿರ್ದೇಶನಾಲಯ (ED)ಇದೀಗ ದೊಡ್ಡ ಮಟ್ಟದ ಕ್ರಮಕೈಗೊಂಡಿದೆ...

ಬೆಟ್ಟಿಂಗ್ ಆ್ಯಪ್ ಪ್ರಕರಣ

ಹೊಸದಿಲ್ಲಿ, ಡಿ.19: ಇತ್ತೀಚೆಗೆ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿದೆ.. ಈಗಾಗಲೇ ಕೆಲವೊಂದಿಷ್ಟು ಸೆಲೆಬ್ರಿಟಿಗಳು ಈ ಜಾಲಕ್ಕೆ ಸಿಲುಕಿ ಸಮಸ್ಯೆ ಎದುರಿಸಿ ದ್ದರು. ಇದೀಗ ಇದೇ ವಿಚಾರವಾಗಿ ಮಾಜಿ ಕ್ರಿಕೆಟಿಗರಾದ ಯುವರಾಜ್‌ ಸಿಂಗ್‌, ರಾಬಿನ್ ಉತ್ತಪ್ಪ ಹಾಗೂ ನಟ ಸೋನು ಸೂದ್‌ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಮೋಟ್ ಮಾಡಿದ್ದ ಕಾರಣ ಬೆಟ್ಟಿಂಗ್ ಜಾಲದ ವಿರುದ್ಧ ಸಮರ ಸಾರಿರುವ ಜಾರಿ ನಿರ್ದೇಶನಾಲಯ (ED), ಇದೀಗ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ.

ನಿಷೇಧಿತ ಆಫ್‌ಶೋರ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ ಆದ '1xBet' ಮತ್ತು ಅದರ ಅಂಗಸಂಸ್ಥೆಗಳನ್ನು ಪ್ರಚಾರ ಮಾಡಿದ ಕಾರಣ ಸೆ.22ಕ್ಕೆ ರಾಬಿನ್ ಉತ್ತಪ್ಪ (Robin Uthappa), ಸೆ.23ಕ್ಕೆ ಯುವ ರಾಜ್ ಸಿಂಗ್ (Yuvraj Singh) ಹಾಗೂ ಸೆ. 24ಕ್ಕೆ ನಟ ಸೋನು ಸೂದ್‌ (Sonu Sood) ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಇದೀಗ ‌ಯುವರಾಜ್ ಸಿಂಗ್ ಸುಮಾರು 2.5 ಕೋಟಿ ರೂ., ರಾಬಿನ್ ಉತ್ತಪ್ಪದ್ದು 8.26 ಲಕ್ಷ ರೂ., ಮಿಮಿ ಚಕ್ರವರ್ತಿ ಅವರ 59 ಲಕ್ಷ ರೂ., ಸೋನು ಸೂದ್ ಅವರ 1 ಕೋಟಿ ರೂ., ನೇಹಾ ಶರ್ಮಾ ಅವರ 1.26 ಕೋಟಿ ರೂ., ಬಂಗಾಳಿ ನಟ ಅಂಕುಶ್ ಹಜ್ರಾ ಅವರ 47 ಲಕ್ಷ ರೂ. ಮತ್ತು ಮಾಡೆಲ್ ಉರ್ವಶಿ ರೌಟೇಲಾ ಅವರ 2.02 ಕೋಟಿ ರೂ. ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

Pyar Movie: ರಾಶಿಕಾ ಶೆಟ್ಟಿಗಾಗಿ ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಟ್ಟ ನಟ ರವಿಚಂದ್ರನ್;‌ ದೊಡ್ಮನೆ ಈಗ ಸಖತ್‌ ಕಲರ್‌ಫುಲ್

ತನಿಖೆಯಲ್ಲಿ ಬಯಲಾದ ವಿಚಾರವೇನು?

ಅಕ್ರಮ ಆಫ್‌ಶೋರ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ನ ನಿರ್ವಾಹಕರ ವಿರುದ್ಧ ವಿವಿಧ ರಾಜ್ಯ ಪೊಲೀಸ್ ಸಂಸ್ಥೆಗಳು ಕೈಗೊಂಡ ಎಫ್‌ಐಆರ್‌ಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇಡಿ ಪ್ರಕಾರ '1xBet' ಪ್ಲಾಟ್‌ಫಾರ್ಮ್ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿ ನಲ್ಲಿ ಖ್ಯಾತ ಸೆಲೆಬ್ರಿಟಿಗಳು ಈ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಮತ್ತು ಜಾಹೀರಾತುಗಳ ಮೂಲಕ ಪ್ರಚಾರ ಮಾಡಿದ್ದರು.

ಇದರಲ್ಲಿ ಬೆಟ್ಟಿಂಗ್ ದಂಧೆಯ ಮೂಲಕ ಸಂಗ್ರಹವಾದ ಹಣವನ್ನೇ ಸಂಭಾವನೆಯಾಗಿ ನೀಡ ಲಾಗಿದೆ. ಈ ಹಣವನ್ನು ವಿದೇಶಿ ಮಧ್ಯವರ್ತಿಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಇದರ ಮೂಲವನ್ನು ಮರೆಮಾಚಲು ಪ್ರಯತ್ನ ಕೂಡ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಇದೀಗ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುವ ಸೆಲೆಬ್ರಿಟಿಗಳಿಗೆ ಇಡಿ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದೆ

ಇದಕ್ಕೂ ಮುನ್ನ ಇಡಿ ಅಧಿಕಾರಿಗಳು ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದ್ದರು.ಈಗಾಗಲೇ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿದ್ದ ಹಲ ವಾರು ಬಾಲಿವುಡ್ ನಟ ನಟಿಯರು ಹಾಗೂ ಕ್ರಿಕೆಟಿಗರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದೆ.