ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಮ್ಮವನಲ್ಲ, ನಮ್ಮವನಲ್ಲ...; ಭಾರತದ ಗಡಿ ದಾಟಿದ ಪ್ರಜೆಯನ್ನು ಸ್ವೀಕರಿಸಲು ನಿರಾಕರಿಸಿದ ಬಾಂಗ್ಲಾದೇಶ

ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಸಿಲುಕಿರುವ ಬಾಂಗ್ಲಾದೇಶದ ಪ್ರಜೆಯನ್ನು ನಮ್ಮವನಲ್ಲ ಎಂದು ಹೇಳಿ ಬಾಂಗ್ಲಾದೇಶದ ಗಡಿ ಭದ್ರತಾ ಸಿಬ್ಬಂದಿ ಸ್ವೀಕರಿಸಲು ನಿರಾಕರಿಸಿದೆ. ಇದರಿಂದಾಗಿ 55 ವರ್ಷದ ಬಾಂಗ್ಲಾದೇಶದ ಹಿಂದೂ ಪ್ರಜೆ ಯಾರೂ ಇಲ್ಲದೆ ಗಡಿಯಲ್ಲಿ ಅತಂತ್ರವಾಗಿ ನಿಂತಿದ್ದಾರೆ. ಇವರು ಮೇಘಾಲಯದ ಗಡಿಯಲ್ಲಿ ಅಕ್ರಮವಾಗಿ ಭಾರತದೊಳಗೆ ನುಸುಳಿದ್ದರು ಎನ್ನಲಾಗಿದೆ.

ಸಂಗ್ರಹ ಚಿತ್ರ

ಮೇಘಾಲಯ: ಬಾಂಗ್ಲಾದೇಶದಿಂದ (Bangladesh) ಭಾರತದ ಗಡಿಯೊಳಗೆ (India-Bangladesh Border) ಅಕ್ರಮವಾಗಿ ಪ್ರವೇಶಿಸಿರುವ ವ್ಯಕ್ತಿಯನ್ನು ಸ್ವೀಕರಿಸಲು ಬಾಂಗ್ಲಾದೇಶದ ಗಡಿ ಭದ್ರತಾ ಪಡೆ ( Border Guard Bangladesh) ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಬಾಂಗ್ಲಾದೇಶದ ಪ್ರಜೆಯೊಬ್ಬರು ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಅನಾಥರಾಗಿದ್ದಾರೆ. 55 ವರ್ಷದ ಹಿಂದೂ ವ್ಯಕ್ತಿಯೊಬ್ಬರು ಮೇಘಾಲಯದ ಗಡಿಯಲ್ಲಿ ಭಾರತದೊಳಗೆ ಪ್ರವೇಶಿಸಿದ್ದು, ಯಾರೂ ಇಲ್ಲದೆ ಅತಂತ್ರವಾಗಿದ್ದಾರೆ. ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯು ಅವರು ಬಾಂಗ್ಲಾದೇಶದವರಲ್ಲ ಎಂದು ಹೇಳಿದ್ದು, ಭಾರತ ಗಡಿ ಭದ್ರತಾ ಪಡೆ (Border Security Force) ಕೂಡ ಅವರು ಭಾರತದವರಲ್ಲ ಎಂದು ದೃಢೀಕರಿಸಿದ್ದಾರೆ.

ಮಹೇಂದ್ರಗಂಜ್ ಬಳಿಯ ಮೇಘಾಲಯದ ನೈಋತ್ಯ ಗಾರೋ ಬೆಟ್ಟಗಳ ಜಿಲ್ಲೆಯ ನಂದಿರ್‌ಚಾರ್‌ನ ಗಡಿಯಲ್ಲಿ ಬುಧವಾರ ಭಾರತ ಗಡಿ ಭದ್ರತಾ ಪಡೆ ಮತ್ತು ಬಾಂಗ್ಲಾದೇಶದ ಗಡಿ ಭದ್ರತಾ ಸಿಬ್ಬಂದಿ ನಡುವೆ ವ್ಯಕ್ತಿಯೊಬ್ಬರಿಗಾಗಿ ಉದ್ವಿಗ್ನತೆ ಉಂಟಾಗಿದೆ. ಬಾಂಗ್ಲಾದೇಶದ ಪ್ರಜೆಯನ್ನು ಭಾರತ ಗಡಿ ಭದ್ರತಾ ಪಡೆ ಬಾಂಗ್ಲಾದೇಶಕ್ಕೆ ಕಳುಹಿಸಲು ಮುಂದಾದಾಗ ಬಾಂಗ್ಲಾದೇಶದ ಗಡಿ ಭದ್ರತಾ ಸಿಬ್ಬಂದಿ ಆತ ಭಾರತೀಯ ಎಂದು ಹೇಳಿದ್ದರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ.

ಟಿಎಂಸಿಯ ಮೂರನೇ ವಿಕೆಟ್‌ ಪತನ; ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಪ್ರಕಾಶ್ ಬರೈಕ್

ಅಪರಿಚಿತ ವ್ಯಕ್ತಿಯನ್ನು ಸತಿ ರಾಜ್‌ಬನ್ಶಿ ಎಂದು ಗುರುತಿಸಲಾಗಿದ್ದು, ಮೇಘಾಲಯ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾನೆ. ಬಾಂಗ್ಲಾದೇಶದ ಪ್ರಜೆಯಾಗಿರುವ ಸತಿ ರಾಜ್‌ಬನ್ಶಿಯನ್ನು ಬಿಎಸ್‌ಎಫ್ ಬಂಧಿಸಿತು. ತಪಾಸಣೆ ಬಳಿಕ ಗಡಿ ಭದ್ರತಾ ಪಡೆ ಅವನನ್ನು ಬಾಂಗ್ಲಾದೇಶದ ಗಡಿಯ ಕಡೆಗೆ ಕಳುಹಿಸಿತು. ಈ ವಿಚಾರವಾಗಿ ಬಾಂಗ್ಲಾದೇಶದ ಜಮಾಲ್ಪುರದ ಬಿಜಿಬಿ ಮತ್ತು ಬಿಎಸ್ಎಫ್ ಸಿಬ್ಬಂದಿ ತೀವ್ರ ವಾಗ್ವಾದ ನಡೆದಿದೆ. ಇದನ್ನೆಲ್ಲ ಮುಗ್ದವಾಗಿ ಕುಳಿತು ಸತಿ ರಾಜ್‌ಬನ್ಶಿ ವೀಕ್ಷಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ಬಾಂಗ್ಲಾದೇಶದ ಭದ್ರತಾ ಸಿಬ್ಬಂದಿ ಆತನ ವಿಳಾಸ ಮತ್ತು ರಾಷ್ಟ್ರೀಯತೆಯ ಬಗ್ಗೆ ಆಕ್ರಮಣಕಾರಿಯಾಗಿ ಪ್ರಶ್ನಿಸುತ್ತಿದ್ದರೆ ಆತ ಭಯಭೀತನಾಗಿದ್ದಾನೆ. ಬಿಎಸ್ಎಫ್ ಮತ್ತು ಬಿಜಿಬಿ ನಡುವಿನ ಮಾತುಕತೆಗಳು ವಿಫಲವಾಗಿದ್ದರಿಂದ ಸತಿ ರಾಜ್‌ಬನ್ಶಿ ಗಡಿಯಲ್ಲಿ ಅತಂತ್ರವಾಗಿ ಉಳಿದಿದ್ದಾನೆ.

ಸತಿ ರಾಜ್‌ಬನ್ಶಿಯನ್ನು ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಾರಾಯಣಪುರ ಅಂಚೆ ಕಚೇರಿ ಮತ್ತು ಗುಡಗರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಲ್ನಾ ಗ್ರಾಮದ ದಿವಂಗತ ಬಾಗ್ಬಟ್ಟಾ ಅವರ ಪುತ್ರ ಎಂದು ಗುರುತಿಸಲಾಗಿದೆ.

ಭಾರತಕ್ಕೆ ಕಳಂಕ ತರಲು ಬಾಂಗ್ಲಾದೇಶ ಪ್ರಯತ್ನಿಸುತ್ತಿದೆ. ಬಿಎಸ್‌ಎಫ್ ಈ ವ್ಯಕ್ತಿಯನ್ನು ಮರಳಿ ಕಳುಹಿಸಿಲ್ಲ. ಆತ ಹಿಂದೂ ಎನ್ನುವ ಕಾರಣಕ್ಕೆ ಆತನನ್ನು ಸ್ವೀಕರಿಸಲು ಬಿಜಿಬಿ ನಿರಾಕರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ನಡವಳಿಕೆಯ ಕಾರಣದಿಂದ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಗಡಿ ಭದ್ರತೆಯನ್ನು ಕೂಡ ಬಿಗಿಗೊಳಿಸಿದೆ.

ಟಿಎಂಸಿ ಬಂಡಾಯದ ನಡುವೆ ಟ್ಯಾಂಗಿ, ಮಸಲೇದಾರ್, ಕುರುಕಲು...; ಬಂಗಾಳದ ಜಲ್ಮುರಿ ಬಗ್ಗೆ ಅಮಿತ್ ಶಾ ಹೇಳಿದ್ದೇಕೆ?

ಅಸ್ಸಾಂನಲ್ಲೂ ಕೂಡ ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಗಡೀಪಾರು ಮಾಡಲು ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author