ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manish Sisodia : ಮನೀಷ್‌ ಸಿಸೋಡಿಯಾ ಇದ್ದ ಕಚೇರಿಯಲ್ಲಿ ಕುರ್ಚಿ ಸೇರಿದಂತೆ ವಸ್ತುಗಳೆಲ್ಲಾ ಮಂಗಮಾಯ! ವೈರಲಾಗಿರೋ ವಿಡಿಯೊದಲ್ಲೇನಿದೆ?

ಪತ್ಪರ್‌ಗಂಜ್‌ ಕ್ಷೇತ್ರದ ಶಾಸಕ ರವೀಂದರ್ ಸಿಂಗ್ ನೇಗಿ ಮಾಜಿ ಡಿಸಿಎಂ ಮನೀಷ್‌ ಸಿಸೋಡಿಯಾ ಮೇಲೆ ಆರೋಪ ಮಾಡಿದ್ದು, ತಮ್ಮ ಕ್ಷೇತ್ರದ ಶಾಸಕ ಕಚೇರಿಯಲ್ಲಿದ್ದ ಎಸಿ, ಟಿವಿ, ಸ್ಪೀಕರ್, ಕುರ್ಚಿ, ಟೇಬಲ್ ಗಳನ್ನು ಕದ್ದೊಯ್ದಿದ್ದಾರೆ ಎಂದು ಅವರು ದೂರಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೊವೊಂದನ್ನು ಅವರು ಹರಿಬಿಟ್ಟಿದ್ದಾರೆ.

ಮನೀಷ್‌ ಸಿಸೋಡಿಯಾ ಇದ್ದ ಕಚೇರಿಯ ಎಲ್ಲಾ ವಸ್ತುಗಳು ಮಂಗಮಾಯ!

ರವೀಂದ್ರ ನೇಗಿ

Profile Vishakha Bhat Feb 18, 2025 3:33 PM

ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಪ್‌ನ ದಿಗ್ಗಜರು ಸೋಲನ್ನು ಕಂಡಿದ್ದಾರೆ. ಈ ಹಿಂದೆ ಡಿಸಿಎಂ ಆಗಿದ್ದ ಮನೀಷ್‌ ಸಿಸೋಡಿಯಾ (Manish Sisodia) ಕೂಡ ಪತ್ಪರ್‌ಗಂಜ್‌ ಕ್ಷೇತ್ರದಿಂದ ಈ ಹಿಂದೆ ಸ್ಪರ್ಧಿಸಿದ್ದರು. ನಂತರ ಈ ಬಾರಿ ಆಪ್‌ ಅವಧ್ ಓಜಾ ಸ್ಪರ್ಧಿಸಿ ಸೋತಿದ್ದಾರೆ. ಸದ್ಯ ಅದೇ ಕ್ಷೇತ್ರದ ನೂತನ ಶಾಸಕ ರವೀಂದರ್ ಸಿಂಗ್ (Ravinder Negi) ನೇಗಿ ಮಾಜಿ ಡಿಸಿಎಂ ಸಿಸೋಡಿಯಾ ಮೇಲೆ ಆರೋಪ ಮಾಡಿದ್ದು, ಶಾಸಕರ ಕಚೇರಿಯಲ್ಲಿದ್ದ ಎಸಿ, ಟಿವಿ, ಸ್ಪೀಕರ್, ಕುರ್ಚಿ, ಟೇಬಲ್ ಗಳನ್ನು ಕೊದ್ದೊಯ್ದಿದ್ದಾರೆ ಎಂದು ಅವರು ಹೇಳಿದ್ದಾರೆ. ಪತ್ಪರ್‌ಗಂಜ್‌ನ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ನಿನ್ನೆ ತಮ್ಮ ಕ್ಷೇತ್ರದ ಶಾಸಕರ ಕಚೇರಿಗೆ ತೆರಳಿದ್ದರು.

ಸದ್ಯ ನೇಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವೇಳೆ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಎಸಿ, ಟಿವಿ, ಸ್ಪೀಕರ್, ಕುರ್ಚಿ, ಟೇಬಲ್ ಗಳು ನಾಪತ್ತೆಯಾಗಿದ್ದು, ಇವೆಲ್ಲವನ್ನೂ ಮನೀಶ್ ಸಿಸೋಡಿಯಾ ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. "ಆಮ್ ಆದ್ಮಿ ಪಕ್ಷದ ಪತ್ಪರ್‌ಗಂಜ್‌ನ ಮಾಜಿ ಶಾಸಕ ಮನೀಷ್‌ ಸಿಸೋಡಿಯಾ ಚುನಾವಣೆಗೆ ಮೊದಲೇ ತಮ್ಮ ನಿಜವಾದ ಮುಖವನ್ನು ತೋರಿಸಿದ್ದರು. ಎಸಿ, ಟಿವಿ, ಟೇಬಲ್, ಕುರ್ಚಿ ಮತ್ತು ಫ್ಯಾನ್‌ನಂತಹ ವಸ್ತುಗಳನ್ನು ಶಾಸಕರ ಶಿಬಿರ ಕಚೇರಿಯಿಂದ ಕದ್ದಿದ್ದಾರೆ. ಅವರ ಭ್ರಷ್ಟಾಚಾರ ಮತ್ತೊಮ್ಮೆ ಎಲ್ಲಾ ಮಿತಿಗಳನ್ನು ಮೀರಿದೆ. ಈಗ ಅವರು ತಮ್ಮ ವಾಸ್ತವವನ್ನು ಮರೆಮಾಚುವ ಮತ್ತು ಕದಿಯುವ ರಾಜಕೀಯದಲ್ಲಿ ಪರಿಣಿತರಾಗಿದ್ದಾರೆ. ನಾವು ಜನರ ಹಕ್ಕುಗಳನ್ನು ರಕ್ಷಿಸುತ್ತೇವೆ ಮತ್ತು ಅಂತಹ ಭ್ರಷ್ಟ ಜನರನ್ನು ಬಹಿರಂಗಪಡಿಸುತ್ತೇವೆ" ಎಂದು ನೇಗಿ ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Atishi Marlena: ದೆಹಲಿ ಚುನಾವಣೆಯಲ್ಲಿ ಮುಗ್ಗರಿಸಿದ ಆಪ್: ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ!

ಶಾಸಕರ ಕಚೇರಿಯ ಸಭಾಂಗಣದಿಂದ ಸುಮಾರು 250 ಕುರ್ಚಿಗಳು ಕಾಣೆಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ಈಗ ನಾಪತ್ತೆಯಾಗಿರುವ ವಸ್ತುಗಳನ್ನು ಖಂಡಿತಾ ವಾಪಸ್ ಪಡೆಯುತ್ತೇವೆ. ಇದು ಸಾರ್ವಜನಿಕರ ಆಸ್ತಿ, ಅವುಗಳ ರಕ್ಷಣೆ ನಮ್ಮ ಹೊಣೆ. ಸಿಸೋಡಿಯಾ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅವರು ಹೊತ್ತೊಯ್ದಿರುವ ಎಲ್ಲ ವಸ್ತುಗಳಿಗೂ ಅವರಿಂದಲೇ ದಂಡ ಕಟ್ಟಿಸುತ್ತೇವೆ. ಒಂದೇ ಒಂದು ರೂಪಾಯಿಯನ್ನೂ ಬಿಡುವುದಿಲ್ಲ ಎಂದು ನೇಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.