ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Assembly Election 2025: ಮತ ಚಲಾಯಿಸಲು ಬಂದಿದ್ದ ಡಿಸಿಎಂ ಮೇಲೆ ಚಪ್ಪಲಿ, ಕಲ್ಲು ತೂರಾಟ; ವಿಡಿಯೋ ವೈರಲ್‌

ಬಿಹಾರದಲ್ಲಿ ಮತದಾನ ಪ್ರಕ್ರಿಯೆ ವೇಳೆ ಹೈಡ್ರಾಮಾವೊಂದು ನಡೆದಿದೆ. ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಕ್ಷೇತ್ರವಾದ ಲಖಿಸರಾಯ್‌ನಲ್ಲಿ ಅವರ ಬೆಂಗಾವಲು ಪಡೆಗೆ ಜನರ ಗುಂಪೊಂದು ಅಡ್ಡಗಟ್ಟಿ ಕಲ್ಲು ಹಾಗೂ ಚಪ್ಪಲಿಗಳ ತೂರಾಟ ನಡೆಸಿದೆ ಎಂದು ತಿಳಿದು ಬಂದಿದೆ. ವಿಜಯ್ ಕುಮಾರ್ ಸಿನ್ಹಾ ಮತಗಟ್ಟೆ ಬಳಿ ಬಂದಾಗ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಯಿತು.

ಸಂಗ್ರಹ ಚಿತ್ರ

ಪಟನಾ: ಬಿಹಾರದಲ್ಲಿ ಮತದಾನ ಪ್ರಕ್ರಿಯೆ ವೇಳೆ ಹೈಡ್ರಾಮಾವೊಂದು (Bihar Assembly Election 2025) ನಡೆದಿದೆ. ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ (Vijay Kumar Sinha) ಅವರ ಕ್ಷೇತ್ರವಾದ ಲಖಿಸರಾಯ್‌ನಲ್ಲಿ ಅವರ ಬೆಂಗಾವಲು ಪಡೆಗೆ ಜನರ ಗುಂಪೊಂದು ಅಡ್ಡಗಟ್ಟಿ ಕಲ್ಲು ಹಾಗೂ ಚಪ್ಪಲಿಗಳ ತೂರಾಟ ನಡೆಸಿದೆ ಎಂದು ತಿಳಿದು ಬಂದಿದೆ. ವಿಜಯ್ ಕುಮಾರ್ ಸಿನ್ಹಾ ಮತಗಟ್ಟೆ ಬಳಿ ಬಂದಾಗ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಯಿತು. ಮೂರು ಬಾರಿ ಶಾಸಕರಾಗಿರುವ ಸಿನ್ಹಾ ಈ ಬಾರಿಯೂ ತಮ್ಮ ತವರು ಕ್ಷೇತ್ರವಾದ ಭೂಮಿಹಾರ್‌ನಿಂದ ಸ್ಪರ್ಧೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿತ ಗೂಂಡಾಗಳು ಎಂದು ಅವರು ಆರೋಪಿಸಿದ್ದಾರೆ.

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ನಾವು ಅವರ ಎದೆಯ ಮೇಲೆ ಬುಲ್ಡೋಜರ್‌ಗಳನ್ನು ಓಡಿಸುತ್ತೇವೆ" ಎಂದು ಘಟನೆಯ ನಂತರ ಕೋಪಗೊಂಡ ಅವರು ಹೇಳಿದರು. ಕೆಲವು ಬೂತ್‌ಗಳಲ್ಲಿ ಬೂತ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. "ನನ್ನ ಮತಗಟ್ಟೆ ಏಜೆಂಟ್ ಅನ್ನು ಬೂತ್‌ನಿಂದ ಹೊರಗೆ ಎಸೆಯಲಾಯಿತು. ಜನರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ" ಎಂದು ಸಿನ್ಹಾ ಹೇಳಿದ್ದಾರೆ.



ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್, ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಎರಡು ಮತಗಟ್ಟೆಗಳಲ್ಲಿ ಬಿಜೆಪಿಯ ಮತಗಟ್ಟೆ ಏಜೆಂಟ್ ಅನ್ನು ಬೆದರಿಸಲಾಗಿದೆ ಎಂಬ ಆರೋಪಗಳನ್ನು ಐಪಿಎಸ್ ಅಧಿಕಾರಿ ತಳ್ಳಿಹಾಕಿದ್ದಾರೆ. ಇಡೀ ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಮತದಾನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗವು ಇದನ್ನು ಗಮನಿಸಿದ್ದು, ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಮತ್ತು ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಹಾರ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.

"ಪ್ರತಿಯೊಬ್ಬ ಅಭ್ಯರ್ಥಿಗೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ಹಕ್ಕಿದೆ. ಜನರು ತಮ್ಮ ಕುಂದುಕೊರತೆಗಳನ್ನು ಮಂಡಿಸುವ ಹಕ್ಕಿದೆ. ಆಡಳಿತವು ತನ್ನ ಕೆಲಸವನ್ನು ಮಾಡುತ್ತಿದೆ. ನಮಗೆ ಯಾವುದೇ ದೂರುಗಳು ಬಂದರೆ, ನಾವು ಅವುಗಳನ್ನು ತನಿಖೆ ಮಾಡುತ್ತೇವೆ. ಶಾಂತಿ ಪುನಃಸ್ಥಾಪಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಪರಿಸ್ಥಿತಿಯನ್ನು ಅವಲಂಬಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಿಥಿಲೇಶ್ ಮಿಶ್ರಾ ಹೇಳಿದರು.

ಈ ಸುದ್ದಿಯನ್ನೂ ಓದಿ: Bihar Assembly Election: ಬಿಹಾರ ವಿಧಾನಸಭಾ ಚುನಾವಣೆ ಯಾವಾಗ? ಎಷ್ಟು ಹಂತಗಳಲ್ಲಿ ಮತದಾನ? ಸಂಪೂರ್ಣ ವಿವರ ಇಲ್ಲಿದೆ

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಮತದಾನಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲಾ ಬೂತ್‌ಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕೆಲಸಕ್ಕಾಗಿ ಸುಮಾರು ನಾಲ್ಕೂವರೆ ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನೇರ ಸ್ಪರ್ಧೆ ಇದೆ. 12 ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದರೆ, 34 ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ. 11 ಸ್ಥಾನಗಳಲ್ಲಿ ಜೆಡಿಯು ವಿರುದ್ಧ ಕಾಂಗ್ರೆಸ್ ಸ್ಪರ್ಧಿಸುತ್ತಿದೆ, ಮತ್ತು 14 ಸ್ಥಾನಗಳಲ್ಲಿ ಎಲ್‌ಜೆಪಿ (ಆರ್) ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ, ಈ ಪೈಕಿ 12 ಸ್ಥಾನಗಳಲ್ಲಿ ನೇರ ಸ್ಪರ್ಧೆಗಳಿವೆ.