ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಸ್ಕೃತ ಸತ್ತ ಭಾಷೆ; ಮತ್ತೆ ನಾಲಗೆ ಹರಿಯಬಿಟ್ಟ ಉದಯನಿಧಿ ಸ್ಟಾಲಿನ್‌ಗೆ ಬಿಜೆಪಿ ತಿರುಗೇಟು

ಚೆನ್ನೈನಲ್ಲಿ ಶುಕ್ರವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಂಸ್ಕೃತವನ್ನು ಸತ್ತ ಭಾಷೆ ಎಂದು ಕರೆದಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ದೇಶಾದ್ಯಂತ ಪ್ರಾರ್ಥನೆ ಮತ್ತು ಆಚರಣೆಗಳಲ್ಲಿ ಬಳಸಲಾಗುವ ಸಂಸ್ಕೃತದ ಬಗ್ಗೆ ನಾಯಕರು ಹೇಳಿಕೆ ನೀಡುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದೆ.

ಉದಯನಿಧಿ ಸ್ಟಾಲಿನ್ (ಸಂಗ್ರಹ ಚಿತ್ರ)

ಚೆನ್ನೈ: ದೇಶಾದ್ಯಂತ ಪ್ರಾರ್ಥನೆ ಮತ್ತು ವಿವಿಧ ಆಚರಣೆಗಳಲ್ಲಿ ಬಳಸಲಾಗುವ ಸಂಸ್ಕೃತದ ಬಗ್ಗೆ ನಾಯಕರು ಹೇಳಿಕೆ ನೀಡುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ತಮಿಳುನಾಡು (Tamil Nadu) ಉಪಮುಖ್ಯಮಂತ್ರಿ (Deputy Chief Minister) ಉದಯನಿಧಿ ಸ್ಟಾಲಿನ್ (Udhayanidhi Stalin ) ಅವರಿಗೆ ಬಿಜೆಪಿ ಹೇಳಿದೆ. ಚೆನ್ನೈನಲ್ಲಿ (chennai) ಶುಕ್ರವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಮಾತನಾಡಿ ಸಂಸ್ಕೃತವನ್ನು ಸತ್ತ ಭಾಷೆ ಎಂದು ಕರೆದಿದ್ದರು. ಇದಕ್ಕೆ ಬಿಜೆಪಿ (BJP) ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

ಚೆನ್ನೈನಲ್ಲಿ ಶುಕ್ರವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಿಎಂಕೆ ನಾಯಕ, ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಮಾತನಾಡಿ ತಮಿಳು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೇವಲ 150 ಕೋಟಿ ರೂ. ಮೀಸಲಿಟ್ಟಿರುವುದಕ್ಕೆ ಟೀಕಿಸಿದರು. ಅವರು ತಮ್ಮ ಮಾತನ್ನು ಮುಂದುವರಿಸಿ, ಸತ್ತಿರುವ ಭಾಷೆ ಸಂಸ್ಕೃತವು ಕೇಂದ್ರ ಸರ್ಕಾರದಿಂದ 2,400 ಕೋಟಿ ರೂ. ಪಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Star Fashion 2025: ಗೋಲ್ಡ್ ಟಿಶ್ಯೂ ಸೀರೆಯಲ್ಲೂ ಹಾಟ್‌ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಅವರು, ಯಾವುದೇ ಭಾಷೆಯನ್ನು ಸತ್ತಿದೆ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಸಂಸ್ಕೃತವನ್ನು ಇಂದಿಗೂ ದೇಶಾದ್ಯಂತ ಪ್ರಾರ್ಥನೆ ಮತ್ತು ಆಚರಣೆಗಳಲ್ಲಿ ಬಳಸಲಾಗುತ್ತಿದೆ. ಒಂದು ಭಾಷೆಯನ್ನು ಮೆಚ್ಚಲು ಇನ್ನೊಂದು ಭಾಷೆಯನ್ನು ತಿರಸ್ಕರಿಸುವುದು ತಪ್ಪು. ನಾಯಕರು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

ತಮಿಳು ಭಾಷೆಗೂ ಸಂಸ್ಕೃತದ ಕೊಡುಗೆ ಸಾಕಷ್ಟು ಇದೆ. ತಮಿಳು ಮುಕ್ತ ಹೃದಯದ ಭಾಷೆ. ಅದು ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಿಂದ ಪದಗಳು ಮತ್ತು ವಿಚಾರಗಳನ್ನು ಪಡೆಯುತ್ತದೆ. ಇದು ಅದರ ಶಕ್ತಿಯಾಗಿದೆ. ಅದು ದೌರ್ಬಲ್ಯವಲ್ಲ ಎಂದು ಅವರು ಹೇಳಿದ್ದಾರೆ.



ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ಚೆನ್ನೈನಲ್ಲಿ ಶುಕ್ರವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸಂಸ್ಕೃತ ಸತ್ತ ಭಾಷೆ. ಕೇಂದ್ರವು ತಮಿಳಿಗೆ ಕಡಿಮೆ ಹಣ ನೀಡುತ್ತಿದೆ ಎಂದು ಆರೋಪಿಸಿದರು. ಕೇಂದ್ರದ ಭಾಷಾ ನೀತಿಗಳು ಮತ್ತು ಹಣಕಾಸಿನ ಆದ್ಯತೆಗಳ ಬಗ್ಗೆ ಟೀಕಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ತಮಿಳು ಬದ್ಧತೆಯ ಕುರಿತು ಪ್ರಶ್ನಿಸಿದರು.

ಮೋದಿಯವರು ಒಂದು ಕಡೆ ತಮಿಳು ಭಾಷೆಯ ಬಗ್ಗೆ ಕಾಳಜಿ ವಹಿಸುವಂತೆ ತೋರಿಸುತ್ತಾರೆ. ಮತ್ತೊಂದೆಡೆ ನಮ್ಮ ವಿದ್ಯಾರ್ಥಿಗಳ ಮೇಲೆ ಹಿಂದಿ ಮತ್ತು ಸಂಸ್ಕೃತವನ್ನು ಹೇರುತ್ತಾರೆ. ಯಾಕೆಂದರೆ ಅವರು ತಮಿಳು ಕಲಿಯಬಾರದು. ಇದು ಹೇಗೆ ನ್ಯಾಯಯುತವಾಗಿದೆ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: Kalaburagi News: ಸುಪಾರಿ ಕೊಟ್ಟು ಪತಿಯನ್ನೇ ಕೊಲ್ಲಿಸಿದ್ದ ಪತ್ನಿ; 9 ವರ್ಷದ ಬಳಿಕ ವಿಡಿಯೋದಿಂದ ಬಯಲಾಯ್ತು ಹತ್ಯೆ ರಹಸ್ಯ!

ತ್ರಿಭಾಷಾ ನೀತಿಯನ್ನು ಅಂಗೀಕರಿಸಿದರೆ ಮಾತ್ರ ತಮಿಳುನಾಡಿಗೆ ಹಣ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ತಮಿಳು ಭಾಷೆಯ ಅಭಿವೃದ್ಧಿಗೆ ಕೇಂದ್ರವು ಏನು ಮಾಡಿದೆ. ಕಳೆದ 10 ವರ್ಷಗಳಲ್ಲಿ ತಮಿಳು ಅಭಿವೃದ್ಧಿಗೆ ಕೇಂದ್ರವು ಕೇವಲ 150 ಕೋಟಿ ರೂ. ಗಳನ್ನು ಮಾತ್ರ ಮೀಸಲಿಟ್ಟಿದ್ದು, ಸಂಸ್ಕೃತಕ್ಕೆ 2,400 ಕೋಟಿ ರೂ. ಗಳನ್ನು ಇಟ್ಟಿದೆ. ಇದು ತಮಿಳು ಭಾಷಿಕರಿಗೆ ಅನ್ಯಾಯವಾಗಿದೆ. 2026 ರ ಚುನಾವಣೆಗೆ ಮುಂಚಿತವಾಗಿ ಜನರು ಇದನ್ನು ಪ್ರಶ್ನಿಸಬೇಕು ಎಂದು ಒತ್ತಾಯಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author