ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ (west bengal) ಬಿಜೆಪಿ (BJP) ಬಹುಮತ ಪಡೆಯುವ ಮೂಲಕ ಉತ್ತರ ಭಾರತದ ರಾಜ್ಯಗಳಲ್ಲಿ ಮತ್ತೊಂದು ರಾಜ್ಯ ಈಗ ಕೇಸರಿ (Saffron wave) ಮಯವಾಗಿದೆ. ಉತ್ತರ ಭಾರತದ ಐದು ರಾಜ್ಯಗಳನ್ನು ಹೊರತುಪಡಿಸಿ ಈಗ ಸಂಪೂರ್ಣ ಕೇಸರಿಮಯವಾಗಿದೆ. ಉತ್ತರ ಭಾರತದ ಐದು ರಾಜ್ಯಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಜಾರ್ಖಂಡ್ ಹಾಗೂ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಹೊರತು ಉಳಿದ ಎಲ್ಲಾ ರಾಜ್ಯಗಳಲ್ಲೂ ಕೇಸರಿ ಪಕ್ಷ ರಾರಾಜಿಸುತ್ತಿದೆ. ಇದೀಗ ಇದರಲ್ಲಿ ಪಶ್ಚಿಮ ಬಂಗಾಳ ಕೂಡ ಸೇರಿದೆ.
ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತಕ್ಕೆ ತೆರೆ ಎಳೆದು ಬಿಜೆಪಿ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ ಸೋಮವಾರ ಪಶ್ಚಿಮ ಬಂಗಾಳದ ಬೀದಿಗಳನ್ನು ಕೇಸರಿ ಬಣ್ಣಗಳಿಂದ ಅಲಂಕರಿಸಲಾಯಿತು. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಲಡ್ಡುಗಳನ್ನು ವಿತರಿಸಿ ಘೋಷಣೆಗಳನ್ನುಕೂಗಿ ಸಂಭ್ರಮಿಸಿದರು.
ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಸಂಘರ್ಷ: ಮತ ಎಣಿಕೆ ಕೇಂದ್ರದ ಬಳಿ ಕುರ್ಚಿ, ವಾಹನ ಧ್ವಂಸ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ 294 ಸ್ಥಾನಗಳಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದುಕೊಂಡು 131 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 33 ಸ್ಥಾನಗಳನ್ನು 50ರಲ್ಲಿ ಮುನ್ನಡೆಯಲ್ಲಿದೆ. 2021ರಲ್ಲಿ 216 ಸ್ಥಾನಗಳನ್ನು ಪಡೆದಿದ್ದ ತೃಣ ಮೂಲ ಕಾಂಗ್ರೆಸ್ ಗೆ ಇದು ಭಾರಿ ದೊಡ್ಡ ಹೊಡೆತವಾಗಿದೆ.
ನಂದಿಗ್ರಾಮ್ ಮತ್ತು ಭಬಾನಿಪುರ ಎರಡರಿಂದಲೂ ಸ್ಪರ್ಧಿಸುತ್ತಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಬಿಜೆಪಿ 180ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಸರ್ಕಾರ ರಚಿಸುತ್ತದೆ ಎಂದು ವಿಷವಾಸ ವ್ಯಕ್ತಪಡಿಸಿದರು.
ಐತಿಹಾಸಿಕ ವಿಜಯ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಈ ವಿಜಯವು ಐತಿಹಾಸಿಕ ಗೆಲುವು ಎಂದೇ ಪರಿಗಣಿಸಲಾಗುತ್ತದೆ. ಯಾಕೆಂದರೆ 2006 ಮತ್ತು 2011ರ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಾಗದ ಬಿಜೆಪಿ 2016ರಲ್ಲಿ ಕೇವಲ ಮೂರು, 2021ರ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಬಾಗಲಕೋಟೆ, ದಾವಣಗೆರೆ ಕ್ಷೇತ್ರ ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಎಂ ಅಭಿನಂದನೆ
ಕೇಸರಿ ನಕ್ಷೆ ವಿಸ್ತರಣೆ
ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬಿಜೆಪಿ 'ಮೋದಿಮಯ್ ಭಾರತ್' ನಕ್ಷೆಯನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಬಂಗಾಳವನ್ನು ಕೂಡ ಸೇರಿಸಿದೆ. ಪಕ್ಷದ ಹೆಜ್ಜೆಗುರುತು ಈಗ ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಬಿಹಾರ, ಅಸ್ಸಾಂ, ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ, ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಆಂಧ್ರಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ಈಗ ಕೇಸರಿಮಯವಾಗಿದೆ.