ನವದೆಹಲಿ: ದೆಹಲಿಯ ಕೆಂಪು ಕೋಟೆಯ (Delhi Blast) ಬಳಿ ಸಂಭವಿಸಿದ ಸ್ಫೋಟದ ಕುರಿತು ಮಹತ್ವದ ಮಾಹಿತಿ ದೊರಕಿದ್ದು, ತನಿಖಾಧಿಕಾರಿಗಳು ಇದು ಆತ್ಮಹುತಿ ಕಾರ್ಯಾಚರಣೆಯಲ್ಲ, ಆಕಸ್ಮಿಕ ಸ್ಫೋಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಫೋಟದ ಸಮಯದಲ್ಲಿ ವಾಹನವು ಚಲಿಸುತ್ತಿದ್ದುದರಿಂದ ಇದು ಆಕಸ್ಮಿಕ ಸ್ಫೋಟ ಎಂಬ ಸಿದ್ಧಾಂತಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಆರಂಭಿಕ ಅಂದಾಜಿನ ಪ್ರಕಾರ, ಶಂಕಿತರು ಭಯಭೀತರಾಗಿ ಸ್ಫೋಟಕಗಳನ್ನು ಸಾಗಿಸುವಾಗ ತಪ್ಪು ಮಾಡಿರಬಹುದು ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.
ಸೋಮವಾರ ದೇಶಾದ್ಯಂತ ಹೆಚ್ಚಿನ ಸಮಯ ಭಯೋತ್ಪಾದಕ ಶಂಕಿತರ ಮೇಲೆ ದಾಳಿ ನಡೆಸಲಾಗಿದ್ದು, ಹರಿಯಾಣದ ಫರಿದಾಬಾದ್‌ನಲ್ಲಿ ಬಾಂಬ್ ತಯಾರಿಕೆಯಲ್ಲಿ ಬಳಸಲಾದ 2,900 ಕೆಜಿ ರಾಸಾಯನಿಕ ಪತ್ತೆಯಾಗಿತ್ತು. ಈ ಘಟನೆಯಿಂದಾಗಿ ಶಂಕಿತರು ಶಸ್ತ್ರಾಸ್ತಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿತ್ತು. ಸ್ಫೋಟಕವನ್ನು ಸ್ಥಳಾಂತರಿಸಲು ಆತ ಪ್ರಯತ್ನಿಸುವಾಗ, ಆ ಸಾಧನವು ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ತನಿಖೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ. ಶಂಕಿತನು ಸುಧಾರಿತ ಸ್ಫೋಟಕ ಸಾಧನವನ್ನು (IED) ತಪ್ಪಾಗಿ ಜೋಡಿಸಿರುವಂತೆ ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಶಂಕಿತನು ಆತ್ಮಹತ್ಯಾ ಕಾರ್ ಬಾಂಬ್ ದಾಳಿಯ ಸಾಮಾನ್ಯ ಮಾದರಿಯನ್ನು ಅನುಸರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವನು ಕಾರನ್ನು ಗುರಿಗೆ ಡಿಕ್ಕಿ ಹೊಡೆಸಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ. ಆತ್ಮಾಹುತಿ ದಾಳಿ ಮಾಡುವ ಉದ್ದೇಶವಿದ್ದರೆ ಆತ್ಮಹತ್ಯಾ ಬಾಂಬರ್‌ಗಳ ರೀತಿ ಕಾರ್ಯಾಚರಣೆ ನಡೆಯುತಿತ್ತು ಎಂದು ಅಧಿಕಾರಿಗಳು ತಿಳಿಸಿದರು. i20 ಬಂಪರ್-ಟು-ಬಂಪರ್ ಟ್ರಾಫಿಕ್‌ನಲ್ಲಿ ತೆವಳುತ್ತಾ ಹೋಗುತ್ತಿದ್ದಾಗ ಅದು ಸ್ಫೋಟಗೊಂಡಿತು, ಮತ್ತು ವಾಹನವು ಚಲನೆಯಲ್ಲಿದ್ದಾಗ IED ಗೆ ಏನಾದರೂ ಹಾನಿ ಮಾಡಿರಬಹುದು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Abdul Rauf Azhar: ಪಾಕಿಸ್ತಾನದ ಶಸ್ತ್ರಾಸ್ತ್ರಗಳು ದೆಹಲಿಯ ಕಡೆಗೆ ಕಳಿಸಲಾಗುತ್ತಿದೆ; ಭಾರತಕ್ಕೆ ಬೆದರಿಕೆ ಹಾಕಿದ ಮಸೂದ್ ಸಹೋದರ
ಶಂಕಿತರು ಸ್ಫೋಟಕಗಳನ್ನು ಸ್ಥಳಾಂತರಿಸಲು ಅಥವಾ ವಿಲೇವಾರಿ ಮಾಡಲು ಪ್ರಯತ್ನಿಸಿದಾಗ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಳಿ ಬಣ್ಣದ ಹುಂಡೈ ಐ20 ಕಾರನ್ನು ಚಲಾಯಿಸಿದ ಪ್ರಮುಖ ಶಂಕಿತನನ್ನು ಜಮ್ಮು ಮತ್ತು ಕಾಶ್ಮೀರದ ವೈದ್ಯ ಉಮರ್ ನಬಿ ಎಂದು ಗುರುತಿಸಲಾಗಿದ್ದು, ಸ್ಫೋಟದ ಮೂರು ದಿನಗಳ ಮೊದಲು, ಅವನು ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಭೂಗತನಾಗಿದ್ದನು, ಅವನ ಕುಟುಂಬದೊಂದಿಗೆ ಸಂವಹನವನ್ನು ಸಹ ಕಡಿತಗೊಳಿಸಿದ್ದನು ಎಂದು ತಿಳಿದಯ ಬಂದಿದೆ.
ಭಯೋತ್ಪಾದಕ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಅನೇಕ ಸ್ಥಳಗಳಲ್ಲಿ ಭದ್ರತಾ ಸಂಸ್ಥೆಗಳು ದಾಳಿ ನಡೆಸುತ್ತಿದ್ದು, ಫರಿದಾಬಾದ್, ಸಹರಾನ್‌ಪುರ, ಪುಲ್ವಾಮಾ ಮತ್ತು ಇತರ ಪ್ರದೇಶಗಳಲ್ಲಿ ಗಮನಾರ್ಹ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ. ಇದರಿಂದ ಹೆಚ್ಚಾದ ಮಾನಸಿಕ ಒತ್ತಡದಲ್ಲಿ ಶಂಕಿತ ಆತುರದಿಂದ ವರ್ತಿಸಿ ಸ್ಫೋಟಕ್ಕೆ ಕಾರಣವಾಗಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.