ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Threat: ಕ್ಷಣಾರ್ಧದಲ್ಲಿ ಉಡೀಸ್‌ ಮಾಡ್ತೇವೆ.... ಉಪರಾಷ್ಟ್ರಪತಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ!

Bomb Threat: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ತಮಿಳುನಾಡಿನ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಮಾಹಿತಿ ಬಂದ ತಕ್ಷಣ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ (ಬಿಡಿಡಿಎಸ್) ತಜ್ಞರು ಮತ್ತು ಪೊಲೀಸರ ತಂಡ, ಸ್ನಿಫರ್ ಶ್ವಾನದಳದೊಂದಿಗೆ ಸಂಪೂರ್ಣ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಇದು ಸುಳ್ಳು ಬೆದರಿಕೆ ಕರೆ ಎಂದು ತಿಳಿದುಬಂದಿದೆ.

ಉಪರಾಷ್ಟ್ರಪತಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ!

-

Priyanka P Priyanka P Oct 17, 2025 12:47 PM

ಚೆನ್ನೈ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (Vice President Radhakrishnan) ಅವರ ತಮಿಳುನಾಡಿನ ಚೆನ್ನೈ (Chennai) ನಿವಾಸಕ್ಕೆ ಬಾಂಬ್ ಬೆದರಿಕೆ (Bomb Threat) ಕರೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಸುಳ್ಳು ಬೆದರಿಕೆ ಕರೆ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಬೆದರಿಕೆ ಇಮೇಲ್ ಬಂದಿದೆ. ಕೂಡಲೇ ಅದು ಚೆನ್ನೈನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಅದು ತಲುಪಿದೆ. ಮಾಹಿತಿ ಬಂದ ತಕ್ಷಣ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ (ಬಿಡಿಡಿಎಸ್) ತಜ್ಞರು ಮತ್ತು ಪೊಲೀಸರ ತಂಡ, ಸ್ನಿಫರ್ ಶ್ವಾನದಳದೊಂದಿಗೆ ಉಪರಾಷ್ಟ್ರಪತಿಯವರ ಮನೆಗೆ ಧಾವಿಸಿ ಸಂಪೂರ್ಣ ಪರಿಶೀಲನೆ ನಡೆಸಿದರು.

ಪೊಲೀಸ್ ಪರಿಶೀಲನೆ ವೇಳೆ ಯಾವುದೇ ಅಹಿತಕರ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಇದೊಂದು ಸುಳ್ಳು ಬೆದರಿಕೆ ಕರೆ ಇರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚೆನ್ನೈ ಪೊಲೀಸರಿಗೆ ಇಂತಹ ಹಲವಾರು ಇಮೇಲ್ ಬೆದರಿಕೆಗಳು ಬರುತ್ತಿವೆ. ಬೆದರಿಕೆ ಕರೆಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: Bihar Election: ಚುನಾವಣಾ ಪ್ರಚಾರ ಯಾರಿಗೆ ಬೇಕು...?ನಮ್ಗೆ ಬಿರಿಯಾನಿ ಸಿಕ್ರೆ ಸಾಕು! ಭಾರೀ ವೈರಲಾಗ್ತಿದೆ ಈ ವಿಡಿಯೊ

ಗುರುವಾರ, ದೆಹಲಿಯ ಹೊರವಲಯದ ಖಾಸಗಿ ಶಾಲೆಗೆ ಬಂದ ಬಾಂಬ್ ಬೆದರಿಕೆ ಕರೆ ಬಂದಿದೆ. ಪರಿಶೀಲನೆ ವೇಳೆ ಇದು ಸುಳ್ಳು ಎಂಬುದು ತಿಳಿದುಬಂದಿದೆ. ಪರೀಕ್ಷೆಗಳನ್ನು ತಪ್ಪಿಸಲು ಬಯಸಿದ್ದ ವಿದ್ಯಾರ್ಥಿಯೊಬ್ಬ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ. ಈತನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪೊಲೀಸರ ಪ್ರಕಾರ, ಗುರುವಾರದಂದು ನವದೆಹಲಿಯ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ವಿಶಾಲ್ ಭಾರತಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಿಗೆ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಬಂದ ನಂತರ ಪಿಸಿಆರ್ ಕರೆ ಬಂದಿತು.

ಇದರಿಂದ ಹೆದರಿದ ಪ್ರಾಂಶುಪಾಲರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಹಲವು ತಂಡಗಳು ಶಾಲೆಯನ್ನು ತಲುಪಿ ಪ್ರಮಾಣಿತ ಬಾಂಬ್ ಬೆದರಿಕೆ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಿದವು. ಕಟ್ಟಡವನ್ನು ಸ್ಥಳಾಂತರಿಸಲಾಯಿತು ಮತ್ತು ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಅಗ್ನಿಶಾಮಕ ದಳದ ತಂಡಗಳು ಸಂಪೂರ್ಣ ತಪಾಸಣೆ ನಡೆಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಕಾರಣ, ಇದೊಂದು ಸುಳ್ಳು ಬೆದರಿಕೆ ಕರೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಚೆನ್ನೈನ ಸಿ.ಪಿ. ರಾಧಾಕೃಷ್ಣನ್ ಅವರ ನಿವಾಸಕ್ಕೂ ಇದೇ ರೀತಿ ಸುಳ್ಳು ಬೆದರಿಕೆ ಕರೆ ಬಂದಿದೆ.