ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Assembly Election: ವಿದೇಶದಲ್ಲಿ ಶಿಕ್ಷಣ ಮುಗಿಸಿ ಬಂದ ಮಾಜಿ ಶಾಸಕನ ಪುತ್ರಿ ಬಿಹಾರ ರಾಜಕೀಯಕ್ಕೆ ಎಂಟ್ರಿ

ಬಿಹಾರ ಚುನಾವಣಾ ಕಣದಲ್ಲಿ ಈಗ ಹೊಸ ಮುಖವೊಂದು ಕಾಣಿಸಿಕೊಂಡಿದೆ. ಧಾರ್ಮಿಕ ಮತ್ತು ಜಾತಿ ರೇಖೆಗಳನ್ನು ಮೀರಿ ಹೊಸ ಬ್ರ್ಯಾಂಡ್‌ ರಾಜಕೀಯವನ್ನು ಬಿಹಾರಕ್ಕೆ ಪರಿಚಯಿಸಲು ಮುಂದಾಗಿರುವ ಮಾಜಿ ಶಾಸಕರ ಮಗಳು ಪುಷ್ಪಮ್ ಪ್ರಿಯಾ ಚೌಧರಿ ಕಣಕ್ಕೆ ಇಳಿದಿದ್ದಾರೆ.

ಬಿಹಾರ ಚುನಾವಣಾ ಕಣದಲ್ಲಿ ಹೊಸ ಮುಖ ಪುಷ್ಪಮ್ ಪ್ರಿಯಾ ಚೌಧರಿ

-

ಪಾಟ್ನಾ: ವಿದೇಶದಲ್ಲಿ ಓದಿ ಬಂದಿರುವ ಮಾಜಿ ಶಾಸಕರ ಪುತ್ರಿ ಬಿಹಾರದ ಚುನಾವಣೆಯ (Bihar Assembly Election) ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಧಾರ್ಮಿಕ ಮತ್ತು ಜಾತಿ ಗಡಿ ರೇಖೆಗಳನ್ನು ಮೀರಿ ಇವರು ಹೊಸ ಬ್ರ್ಯಾಂಡ್‌ ರಾಜಕೀಯವನ್ನು ಬಿಹಾರಕ್ಕೆ (Bihar election) ಪರಿಚಯಿಸಲು ಮುಂದಾಗಿದ್ದಾರೆ. ಕಪ್ಪು ಉಡುಪು ಮತ್ತು ಮುಖವಾಡ ಧರಿಸಿಕೊಂಡು ನಾಮಪತ್ರ ಸಲ್ಲಿಸಲು ಬಂದ ಪುಷ್ಪಮ್ ಪ್ರಿಯಾ ಚೌಧರಿ (Pushpam Priya Chaudhary) ಈಗ ಬಿಹಾರದ ರಾಜಕೀಯದಲ್ಲಿ ಉದಯೋನ್ಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ವಿದೇಶದಲ್ಲಿ ಓದಿ ಮರಳಿರುವ ಇವರು ಬಿಹಾರದ ಸಾಂಪ್ರದಾಯಿಕ ರಾಜಕೀಯದಲ್ಲಿ ದೊಡ್ಡ ಬದಲಾವಣೆ ತರುವ ಆಶಯವನ್ನು ಹೊಂದಿದ್ದಾರೆ.

ಇಂಲೆಂಡ್‌ನಲ್ಲಿ ಶಿಕ್ಷಣ ಪಡೆದು ಭಾರತಕ್ಕೆ ಮರಳಿರುವ ದರ್ಭಾಂಗದ ಮಾಜಿ ಜೆಡಿಯು ಶಾಸಕ ವಿನೋದ್ ಕುಮಾರ್ ಚೌಧರಿ ಅವರ ಪುತ್ರಿ ಪುಷ್ಪಮ್ ಪ್ರಿಯಾ ಚೌಧರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಚುನಾವಣಾ ಪ್ರಚಾರ ನಡೆಸಿದ ಪುಷ್ಪಮ್ ಪ್ರಿಯಾ ಚೌಧರಿ:



2020ರಲ್ಲಿ ದಿ ಪ್ಲೂರಲ್ಸ್ ಪಾರ್ಟಿ ಸ್ಥಾಪಿಸಿದ ಪುಷ್ಪಮ್ ಪ್ರಿಯಾ ಚೌಧರಿ, ಧಾರ್ಮಿಕ, ಜಾತಿ ಗಡಿ ರೇಖೆಗಳನ್ನು ಮೀರಿ ಹೊಸ ಬ್ರ್ಯಾಂಡ್‌ ರಾಜಕೀಯವನ್ನು ರಾಜ್ಯಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ದರ್ಭಾಂಗದಿಂದ ಕಣಕ್ಕೆ ಇಳಿದಿರುವ ಇವರು ಕಪ್ಪು ಉಡುಪು ಮತ್ತು ಮುಖವಾಡ ಧರಿಸಿಕೊಂಡು ಬಂದು ನಾಮ ಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಮುಖವಾಡವನ್ನು ತೆಗೆದುಹಾಕುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.

ಪುಷ್ಪಮ್ ಪ್ರಿಯಾ ಅವರ ಅಜ್ಜ ಪ್ರೊಫೆಸರ್ ಉಮಾಕಾಂತ್ ಚೌಧರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದರು. ಮಾತ್ರವಲ್ಲದೆ ಸಮತಾ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರ ಚಿಕ್ಕಪ್ಪ ವಿನಯ್ ಕುಮಾರ್ ಚೌಧರಿ 2020ರ ವಿಧಾನಸಭಾ ಚುನಾವಣೆಯಲ್ಲಿ ಬೇಣಿಪುರದಿಂದ ಗೆದ್ದ ಜೆಡಿಯು ನಾಯಕರಾಗಿದ್ದರು.

1987ರ ಜೂನ್ 13ರಂದು ಜನಿಸಿದ ಪುಷ್ಪಮ್ ಪ್ರಿಯಾ ಪುಣೆಯಲ್ಲಿ ಪದವಿ ಪಡೆದಿದ್ದು, ಬಳಿಕ ಉನ್ನತ ಶಿಕ್ಷಣಕ್ಕಾಗಿ ಲಂಡನ್ ಗೆ ತೆರಳಿದರು. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಅವರು ಬಿಹಾರ ಸರ್ಕಾರದ ಪ್ರವಾಸೋದ್ಯಮ ಮತ್ತು ಆರೋಗ್ಯ ಇಲಾಖೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಧಾರ್ಮಿಕ ಮತ್ತು ಜಾತಿಯನ್ನು ಮೀರಿ ಅಭಿವೃದ್ಧಿಗಾಗಿ ಜನರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತರಾಗಿರುವ ಪುಷ್ಪಮ್ ಪ್ರಿಯಾ, 2020ರ ಮಾರ್ಚ್ 8ರಂದು 'ದಿ ಪ್ಲೂರಲ್ ಪಾರ್ಟಿ' ಅನ್ನು ಸ್ಥಾಪಿಸಿದರು. ಅಲ್ಲದೇ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತಾವೇ ಎಂದು ಘೋಷಣೆಯನ್ನು ಕೂಡ ಮಾಡಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಎಲ್ಲ 243 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದ ಅವರ ಪಕ್ಷ ನೋಂದಣಿಯಲ್ಲಿನ ವಿಳಂಬ ಮತ್ತು ಇತರ ಅಂಶಗಳಿಂದಾಗಿ ಕೇವಲ 148 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಇದರಲ್ಲಿ ಕೆಲವು ಸ್ವತಂತ್ರ ಅಭ್ಯರ್ಥಿಗಳು ಕೂಡ ಇದ್ದರು.

ಈ ಬಾರಿಯ ಚುನಾವಣೆಯಲ್ಲಿ ಬಹುವಚನ ಪಕ್ಷವು ಎಲ್ಲ 243 ಸ್ಥಾನಗಳಿಂದ ಸ್ಪರ್ಧಿಸುತ್ತಿದೆ. ಇದರಲ್ಲಿ ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪಕ್ಷಕ್ಕೆ 'ನಗರ' ಚಿಹ್ನೆ ನೀಡಲಾಗಿದೆ. ಪುಷ್ಪಮ್ ಪ್ರಿಯಾ ದರ್ಭಂಗಾದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೆಸರು ಜನರ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಬಹುವಚನ ಎಂದರೆ ಎಲ್ಲ ಜಾತಿ ಮತ್ತು ಧರ್ಮದ ಜನರು ಒಟ್ಟಾಗಿ ಆಳ್ವಿಕೆ ನಡೆಸಬೇಕು ಎಂದರು.

ಅವರು ತಮ್ಮ ಸಂಪೂರ್ಣ ಕಪ್ಪು ಉಡುಗೆಯ ಬಗ್ಗೆ ಮಾತನಾಡಿ, ರಾಜಕಾರಣಿಗಳು ಬಿಳಿ ಬಣ್ಣವನ್ನು ಏಕೆ ಧರಿಸುತ್ತಾರೆಂದು ನನಗೆ ತಿಳಿದಿಲ್ಲವಾದ್ದರಿಂದ ನಾನು ಕಪ್ಪು ಬಣ್ಣವನ್ನು ಧರಿಸುತ್ತೇನೆ. ಚುನಾವಣಾ ರಾಜಕೀಯದಲ್ಲಿ ಗೆಲುವಿನ ರುಚಿ ನೋಡುವವರೆಗೆ ಮುಖವಾಡ ಧರಿಸುವುದಾಗಿ ಹೇಳಿದರು.

ಇದನ್ನೂ ಓದಿ: US Strikes: ಮಾದಕ ವಸ್ತುಗಳು ತುಂಬಿದ್ದ ಜಲಾಂತರ್ಗಾಮಿ ಧ್ವಂಸಗೊಳಿಸಿದ ಅಮೆರಿಕ!

ರಾಷ್ಟ್ರ ರಾಜಕೀಯದಲ್ಲಿ ರಾಹುಲ್ ಗಾಂಧಿಗಿಂತ ಅಖಿಲೇಶ್ ಯಾದವ್ ಹೆಚ್ಚು ಗಂಭೀರ ನಾಯಕ. ನಿತೀಶ್ ಕುಮಾರ್ ಅತ್ಯುತ್ತಮ ಮುಖ್ಯಮಂತ್ರಿ. ಪ್ರಶಾಂತ್ ಕಿಶೋರ್ ಒಬ್ಬ ತಂತ್ರಜ್ಞನಾಗಿರಬೇಕು ನಾಯಕನಾಗಲು ಆಶಿಸಬಾರದು ಎಂದು ಪುಷ್ಪಮ್ ಪ್ರಿಯಾ ಅಭಿಪ್ರಾಯಪಟ್ಟಿದ್ದಾರೆ.