ನವದೆಹಲಿ: 2026 ರ ಕೇಂದ್ರ ಬಜೆಟ್ ಮಾನವ ಕೇಂದ್ರಿತವಾಗಿದೆ ಮತ್ತು ಮಾರ್ಗ-ವಿಕೇಂದ್ರಿತ ಸುಧಾರಣೆಗಳೊಂದಿಗೆ ಭಾರತದ ಅಡಿಪಾಯವನ್ನು ಬಲಪಡಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (Union Budget 2026) ಹೇಳಿದ್ದಾರೆ. ಪ್ರಧಾನಿಯವರು ಈ ಬಾರಿಯ ಬಜೆಟ್ ಅನ್ನು ಐತಿಹಾಸಿಕ ಮತ್ತು ದೇಶದ ಸುಧಾರಣಾ ಪಥ ಮತ್ತು (Narendra Modi) ದೀರ್ಘಕಾಲೀನ ಬೆಳವಣಿಗೆಯನ್ನು ವೇಗಗೊಳಿಸಲು ವೇಗವರ್ಧಕ ಎಂದು ಬಣ್ಣಿಸಿದರು. ಸಂಸತ್ತಿನಲ್ಲಿ ಬಜೆಟ್ ಮಂಡನೆ ನಂತರ ಮಾತನಾಡಿದ ಪ್ರಧಾನಿ ಮೋದಿ, ಈ ಪ್ರಸ್ತಾಪಗಳು ಆರ್ಥಿಕತೆಗೆ ಶಕ್ತಿ ತುಂಬುತ್ತವೆ, ನಾಗರಿಕರನ್ನು ಸಬಲೀಕರಣಗೊಳಿಸುತ್ತವೆ ಮತ್ತು ಭಾರತದ ಯುವಕರಿಗೆ ಅವಕಾಶ ನೀಡುತ್ತವೆ ಎಂದು ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಅನ್ನು 'ವಿಶಿಷ್ಟ' ಬಜೆಟ್ ಎಂದ ಪ್ರಧಾನಿ ಮೋದಿ, ಈ ಬಜೆಟ್ ಬಹು ಕ್ಷೇತ್ರಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ಜೊತೆಗೆ ಈ ಬಜೆಟ್ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಹಣಕಾಸಿನ ಕೊರತೆಯನ್ನು ನಿರ್ವಹಿಸುವ ನಡುವೆ ಸಮತೋಲನವನ್ನು ಸಾಧಿಸುತ್ತದೆ ಎಂದು ಹೇಳಿದರು. "ಈ ಬಜೆಟ್ ವರ್ತಮಾನದ ಕನಸುಗಳಿಗೆ ಜೀವ ತುಂಬುತ್ತದೆ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಉನ್ನತ ಆಕಾಂಕ್ಷೆಗಳಿಗೆ ಈ ಬಜೆಟ್ ಬಲವಾದ ಅಡಿಪಾಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಭಾರತದ 140 ಕೋಟಿ ನಾಗರಿಕರು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದರಲ್ಲಿ ಮಾತ್ರ ತೃಪ್ತರಾಗಿಲ್ಲ, ಹಾಗಾಗಿ, ಸಾಧ್ಯವಾದಷ್ಟು ಬೇಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಬಯಸುತ್ತಾರೆ ಎಂದು ಪ್ರಧಾನಿ ತಿಳಿಸಿದ್ದಾರೆ. ಹಣಕಾಸಿನ ನೀಲನಕ್ಷೆಯಲ್ಲಿ ವಿವರಿಸಿರುವ ಹೊಸ ನೀತಿ ಮಹತ್ವಗಳು ಮತ್ತು ವ್ಯಾಪಾರ ಉಪಕ್ರಮಗಳಿಂದ ಯುವಜನರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಉದಯೋನ್ಮುಖ ವಲಯಗಳು, ಮೂಲಸೌಕರ್ಯ ಮತ್ತು ಬಂಡವಾಳ ವೆಚ್ಚವು ಪ್ರಮುಖ ಪ್ರೋತ್ಸಾಹವನ್ನು ಪಡೆದಿದೆ ಎಂದು ಪ್ರಧಾನಿ ಹೇಳಿದ್ದಾರೆ.
Union Budget 2026: ಕೇಂದ್ರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್: ಬಿ.ಎಸ್. ಯಡಿಯೂರಪ್ಪ
2026–27ರ ಬಜೆಟ್ ಮೂಲಕ ಪ್ರಧಾನಮಂತ್ರಿ ಮೋದಿ ಅವರು ಸ್ವಾವಲಂಬಿ ಹಾಗೂ ಅಭಿವೃದ್ಧಿ ಹೊಂದಿದ ಭಾರತವು ಕೇವಲ ಘೋಷಣೆಯಲ್ಲ, ನಮ್ಮ ಸರ್ಕಾರದ ದೃಢ ಸಂಕಲ್ಪ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.