ಮುಂಬೈ, ಜು. 8: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರಿದಿದ್ದು, ರಾಜ್ಯಾದ್ಯಂತ ಅವಘಡಗಳ ಸರಣಿಯೇ ಬಡೆಯುತ್ತಿದೆ. ಇದೀಗ ಕಟ್ಟಡ ಕುಸಿದು ಬಿದ್ದ ಪರಿಣಾಮ ಕನಿಷ್ಠ 15 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ (Maharashtra) ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಈ ಅವಘಡ ಸಂಭವಿಸಿದೆ. ಭಾರಿ ಮಳೆಯ ನಡುವೆ ಬೃಹತ್ ಕಸದ ದಿಬ್ಬ ಬಿದ್ದ ಕಾರಣ ಕಟ್ಟಡ ಕುಸಿದಿದೆ (Building collapse). ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೋಶಿಯಲ್ಲಿ ಈ ಘಟನೆ ಸಂಭವಿಸಿದೆ. ಮೂರು ಅಂತಸ್ತಿನ ಕಟ್ಟಡವನ್ನು ನಗರದ ಸ್ಥಳೀಯ ಆಡಳಿತ ಸಂಸ್ಥೆಯ ಪರವಾಗಿ ತ್ಯಾಜ್ಯ ಸಂಸ್ಕರಣೆ ನಡೆಸುತ್ತಿದ್ದ ಖಾಸಗಿ ಕಂಪನಿಯ ಆಡಳಿತ ಕಚೇರಿಯಾಗಿ ಬಳಸಲಾಗುತ್ತಿತ್ತು. ಆಡಳಿತ ಕಟ್ಟಡವು ಬೆಟ್ಟದಂತೆ ನಿರ್ಮಾಣವಾಗಿರುವ ತ್ಯಾಜ್ಯದ ರಾಶಿಯ ಪಕ್ಕದಲ್ಲಿದೆ. ಭಾರಿ ಮಳೆಯಿಂದಾಗಿ, ತ್ಯಾಜ್ಯದ ದಿಬ್ಬವು ಸಡಿಲಗೊಂಡು ಕಟ್ಟಡದ ಮೇಲೆ ಕುಸಿದಿರಬಹುದು ಎಂದು ಪಿಂಪ್ರಿ ಚಿಂಚ್‌ವಾಡ್ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಸೂರ್ಯವಂಶಿ ತಿಳಿಸಿದ್ದಾರೆ.
ಕಟ್ಟಡದಡಿ ಸಿಲುಕಿರುವವರಲ್ಲಿ ಹೆಚ್ಚಿನವರು ಖಾಸಗಿ ಕಂಪನಿಯ ಉದ್ಯೋಗಿಗಳೆಂದು ಹೇಳಲಾಗಿದೆ. ಅವರು ಕಸದ ದಿಬ್ಬವು ಕಟ್ಟಡಕ್ಕೆ ಅಪ್ಪಳಿಸಿದಾಗ ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದರು. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಕುಸಿದಾಗ ಹತ್ತೊಂಬತ್ತು ಉದ್ಯೋಗಿಗಳು ಕಟ್ಟಡದ ಒಳಗಿದ್ದರು. ಘಟನೆಯಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಸಿಕೊಂಡಿದೆ.
ʼʼ2024ರ ಸ್ಥಿತಿ ಮರುಕಳಿಸದಿರಲಿʼʼ: ವಯನಾಡ್ ಭೂ ಕುಸಿತಕ್ಕೆ ಮಿಡಿದ ದೇಶವಾಸಿಗಳ ಹೃದಯ
ವಯನಾಡಿನ ಭೂ ಕುಸಿತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಕೇರಳಂನ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ (ಜುಲೈ 7) ಸಂಭವಿಸಿದ ಭೂಕುಸಿತದ ಭಯಾನಕ ಘಟನೆಯ ಸಿಸಿಟಿವಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೃಶ್ಯ ನೋಡುತ್ತಿದ್ದರೆ ಎದೆ ಝಲ್ಲೆನ್ನಿಸುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ಯೋಜನೆಯ ಭಾಗವಾಗಿ ಕಲ್ಲಡಿಯ ಮೀನಾಕ್ಷಿ ಸೇತುವೆಯ ಬಳಿ ಸಂಗ್ರಹವಾದ ದೊಡ್ಡ ಮಣ್ಣಿನ ದಿಬ್ಬವು ಮಳೆಯಿಂದಾಗಿ ಇದ್ದಕ್ಕಿದ್ದಂತೆ ಕೆಳಗೆ ಜಾರಿ, ಮರಗಳು ಉರುಳಿ ಬಿದ್ದವು. ನಿರ್ಮಾಣ ಸ್ಥಳದಲ್ಲಿರಿಸಲಾದ ಬ್ಯಾರಿಕೇಡ್‌ಗಳು ಕೊಚ್ಚಿ ಹೋಗಿದೆ.
ಭೂಕುಸಿತ ಜಾರಿ ಬಂದ ರಭಸಕ್ಕೆ ಟ್ಯಾಂಕರ್ ಸುಮಾರು 10 ಅಡಿಗಳನ್ನು ದೂರಕ್ಕೆ ಜಾರಿದೆ. 2 ಬಸ್‌ಗಳು ಕಂದಕಕ್ಕೆ ಉರಳಿ ಬಿದ್ದಿವೆ. ಅದೃಷ್ಟವಶಾತ್ ಬಸ್‌ನಲ್ಲಿ ಯಾರೂ ಇರಲಿಲ್ಲವಾದ್ದರಿಂದ ಭಾರಿ ದುರಂತವೊಂದು ತಪ್ಪಿದೆ.