ಕೋಲ್ಕತ್ತಾ: ದಕ್ಷಿಣ 24 ಪರಗಣದಲ್ಲಿ (South 24 Parganas) ಅಕ್ರಮವಾಗಿ ನಿರ್ಮಾಣವಾಗಿದ್ದ ತೃಣಮೂಲ ಕಾಂಗ್ರೆಸ್ ಸಂಸದ (TMC MP), ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Abhishek Banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸಂಸದ ಕಚೇರಿಯನ್ನು (MP office) ಶನಿವಾರ ಭಾರಿ ಪೊಲೀಸ್ ಭದ್ರತೆಯಲ್ಲಿ ಕೆಡವಲಾಯಿತು. ಇದು ಈಗ ರಾಜ್ಯಾದ್ಯಂತ ರಾಜಕೀಯ ವಿವಾದವನ್ನು ಎಬ್ಬಿಸಿದೆ. ಡೈಮಂಡ್ ಹಾರ್ಬರ್ ಸಂಸದರಾಗಿರುವ ಅಭಿಷೇಕ್ ಬ್ಯಾನರ್ಜಿಗೆ ಸಂಬಂಧಿಸಿದ 43 ಆಸ್ತಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಇದರ ಬಳಿಕ ದಕ್ಷಿಣ 24 ಪರಗಣದಲ್ಲಿದ್ದ ಅವರ ಅಕ್ರಮ ಆಸ್ತಿಯ ಮೇಲೆ ಈ ಕ್ರಮಕೈಗೊಳ್ಳಲಾಗಿದೆ.
ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸೇರಿದ ದಕ್ಷಿಣ 24 ಪರಗಣದ ಅಮ್ತಾಲಾದ ಅಮ್ತಾಲಾ-ಬರುಯಿಪುರ ರಸ್ತೆಯಲ್ಲಿರುವ ಕಚೇರಿ ಮೇಲೆ ಶನಿವಾರ ಬುಲ್ಡೋಜರ್ ಚಲಾಯಿಸಲಾಗಿದೆ. ಇದನ್ನು ಕೆಡವುವ ಮೊದಲು ಸ್ಥಳೀಯ ಆಡಳಿತವು ನೋಟಿಸ್ ಅಂಟಿಸಿತ್ತು.
ಸಂಸದರ ಕಚೇರಿ ಕೆಡವುವ ಮೊದಲು ಸ್ಥಳದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲು ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಬೊಲ್ಡೋಜರ್ ಕ್ರಮ ಕೈಗೊಳ್ಳುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿ ಸೇರಿಕೊಂಡರು.
ಇತ್ತೀಚೆಗೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ತನ್ನ ದಾಖಲೆಗಳಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಅವರ ಕಂಪೆನಿಯಾದ ಲೀಪ್ಸ್ ಆಂಡ್ ಬೌಂಡ್ಸ್‌ಗೆ ಸಂಬಂಧಿಸಿದ ಹೆಸರಿನಲ್ಲಿ ಪಟ್ಟಿ ಮಾಡಲಾದ 17 ಆಸ್ತಿಗಳನ್ನು ಕೆಡವಲು ನೊಟೀಸ್ ನೀಡಿತ್ತು. ಈ ನೋಟಿಸ್ ನಲ್ಲಿ ಹರೀಶ್ ಮುಖರ್ಜಿ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸ ಶಾಂತಿ ನಿಕೇತನ ಕೂಡ ಸೇರಿದೆ. ಅಭಿಷೇಕ್ ಬ್ಯಾನರ್ಜಿ ಅವರಿಗೆ ಸೇರಿದ ಒಟ್ಟು 43 ಆಸ್ತಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ ಬಳಿಕ ಈ ಬೆಳವಣಿಗೆಯಾಗುದೆ.
ಅಭಿಷೇಕ್ ಬ್ಯಾನರ್ಜಿ ಅವರ ಆಸ್ತಿಗಳ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯನ್ನು ತಿರಸ್ಕರಿಸಿರುವ ಟಿಎಂಸಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ, ಅಭಿಷೇಕ್ ಬ್ಯಾನರ್ಜಿ ಹೆಸರಿನ ಹಲವು ವ್ಯಕ್ತಿಗಳಿದ್ದಾರೆ. ಬಿಜೆಪಿ ಪಟ್ಟಿ ಮಾಡಿರುವ ಎಲ್ಲಾ ಆಸ್ತಿಗಳು ಟಿಎಂಸಿ ನಾಯಕನಿಗೆ ಸೇರಿಲ್ಲ ಎಂದರು. ಆದರೆ ಈ ಬಗ್ಗೆ ಅಭಿಷೇಕ್ ಬ್ಯಾನರ್ಜಿ ಅಥವಾ ಅವರ ಸಂಸದ ಕಚೇರಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
14 ವರ್ಷದ ಅತ್ಯಾಚಾರ ಸಂತ್ರಸ್ತೆ ಪರ ಕೇರಳಂ ಹೈಕೋರ್ಟ್ ತೀರ್ಪು; 28 ವಾರಗಳ ಗರ್ಭಪಾತಕ್ಕೆ ಅನುಮತಿ
ಅಭಿಷೇಕ್ ಬ್ಯಾನರ್ಜಿ ಅವರ ಸಂಸದ ಕಚೇರಿ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳುವುದಕ್ಕೂ ಮೊದಲು ಅಂದರೆ ಈ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ನಾಯಕ ಸೌಕತ್ ಮೊಲ್ಲಾ ಅವರ ಮಗನಿಗೆ ಸೇರಿದ್ದ ಭೂಮಿಯಲ್ಲಿ ನಿರ್ಮಾಣಗೊಂಡಿದ್ದ ಅಕ್ರಮ ಕೆಫೆಯನ್ನು ಕೆಡವಲಾಯಿತು.