ಕೋಲ್ಕತ್ತಾ, ಅ.13: ದುರ್ಗಾ ಪೂಜೆ ನಡೆಯುತ್ತಿರುವ ಈ ಸಮಯದಲ್ಲಿ ಹಿಂದೂ ಅಂಗಡಿಗಳಿಂದ ಬಿರಿಯಾನಿ (Biryani) ಖರೀದಿಸಿ ಎಂಬ ಪೋಸ್ಟರ್‌ಗಳು ಬಂಗಾಳದಲ್ಲಿ ರಾರಾಜಿಸುತ್ತಿವೆ. ಪಶ್ಚಿಮ ಬಂಗಾಳದ (West Bengal) ಸಿಲಿಗುರಿ ನಗರದಾದ್ಯಂತ ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಹಿಂದೂ ಜಾಗರಣ್ ಮಂಚ್ (ಎಚ್‌ಜೆಎಂ) ಪೋಸ್ಟರ್‌ಗಳನ್ನು ಅಂಟಿಸಿದ್ದು, ಹಿಂದೂಗಳ ಒಡೆತನದ ಅಂಗಡಿಗಳಿಂದ ಬಿರಿಯಾನಿ ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸುವಂತೆ ಜನರನ್ನು ಒತ್ತಾಯಿಸಿದೆ.
ಹಿಂದೂ ಅಂಗಡಿಯಲ್ಲಿ ಬಿರಿಯಾನಿ ತಿನ್ನಿರಿ, ಹಿಂದೂ ಅಂಗಡಿಗಳಿಂದ ಪೂಜಾ ಸಾಮಗ್ರಿಗಳನ್ನು ಖರೀದಿಸಿ ಮುಂತಾದ ಸಂದೇಶಗಳನ್ನು ಹೊಂದಿರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಹಾಗಂತ ಇದು ನಿರ್ದೇಶನವಲ್ಲ ಎಂದು ಸಂಘಟನೆ ತಿಳಿಸಿದೆ. ಇದು ಆದೇಶವಲ್ಲ, ಬದಲಾಗಿ ಮನವಿ. ಜನರು ಹಿಂದೂಗಳು ನಡೆಸುವ ವ್ಯವಹಾರಗಳನ್ನು ಬೆಂಬಲಿಸಿದರೆ, ಅದು ಸ್ಥಳೀಯ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ" ಎಂದು ಎಚ್‌ಜೆಎಂ ಸದಸ್ಯ ಅಭಿಷೇಕ್ ದಾಸ್ ಹೇಳಿದರು.
“ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಪೋಸ್ಟರ್‌ಗಳನ್ನು ಹಾಕುವುದು ಅಪರಾಧ. ಆಡಳಿತವು ಪೋಸ್ಟರ್‌ಗಳನ್ನು ತೆಗೆದುಹಾಕುವುದಲ್ಲದೆ, ಈ ಕೋಮು ಅಭಿಯಾನದ ಹಿಂದಿರುವವರನ್ನು ಬಂಧಿಸಬೇಕು” ಎಂದು ಸಿಪಿಐ(ಎಂ) ಹಿರಿಯ ನಾಯಕ ಮತ್ತು ಮಾಜಿ ಸಚಿವ ಅಶೋಕ್ ಭಟ್ಟಾಚಾರ್ಯ ಹೇಳಿದರು.
ಜಂತರ್ ಮಂತರ್ ಗೇಟ್ ಹಾರಿ ಪ್ರತಿಭಟನೆಗೆ ಯತ್ನಿಸಿದ ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಂಕಾ: ಮತ್ತೆ ಪೊಲೀಸ್ ವಶಕ್ಕೆ
ಈ ಕ್ರಮವು ಮುಕ್ತ ಚಿಂತನೆಯ ಆಶಯಕ್ಕೆ ಮತ್ತು ಬಂಗಾಳದ ಸಾಮಾಜಿಕ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಹಲವರು ಟೀಕಿಸಿದ್ದಾರೆ. ಬಿರಿಯಾನಿ ತಯಾರಿಸುವ ವ್ಯಕ್ತಿಯ ಧಾರ್ಮಿಕ ಗುರುತು ಏನು ಎಂದು ವಿಚಾರಿಸದೆ, ಬಂಗಾಳದ ಜನರು ಸಾಂಪ್ರದಾಯಿಕವಾಗಿ ಬಿರಿಯಾನಿಯನ್ನು ಸವಿಯುತ್ತಾ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನು ಎಚ್‌ಜೆಎಂ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಆಡಳಿತ ಪಕ್ಷಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಅ.21ರವರೆಗೆ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ ಆರಂಭವಾಗಿದ್ದು, ಪ್ರತಿ ದಿನ ನವರಾತ್ರಿ ಹೋಮ, ದುರ್ಗಾಪೂಜೆ ಹಾಗೂ ಮಹಾ ರುದ್ರಯಾಗ ನಡೆಯುತ್ತಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ರೂಪಗಳಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.