ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ-ಕೆನಡಾ ಸಂಬಂಧ ಸುಧಾರಣೆಯತ್ತ: 4 ದಿನಗಳ ಪ್ರವಾಸಕ್ಕಾಗಿ ಮುಂಬೈಗೆ ಆಗಮಿಸಿದ ಪ್ರಧಾನಿ ಮಾರ್ಕ್ ಕಾರ್ನಿ

ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಮುಂಬೈಗೆ ಆಗಮಿಸಿದ್ದಾರೆ. ಮಾರ್ಚ್ 2 ರವರೆಗೆ ಅವರು ಭಾರತದಲ್ಲಿರಲಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ನಾಲ್ಕು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ (Canadian Prime Minister Mark Carney) ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಲಿದ್ದಾರೆ. ಅವರ ಈ ಭೇಟಿಯು ಭಾರತ ಮತ್ತು ಕೆನಡಾ (India- canada) ನಡುವಿನ ಸಂಬಂಧವನ್ನು ಪುನರ್ನಿರ್ಮಿಸುವುದು ಮತ್ತು ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೆನಡಾದಿಂದ (canada) ನೇರವಾಗಿ ಮುಂಬೈಗೆ ಆಗಮಿಸಿರುವ ಅವರು ಮಾರ್ಚ್ 2 ರವರೆಗೆ ಭಾರತ ಪ್ರವಾಸದಲ್ಲಿರಲಿದ್ದಾರೆ.

ಅಮೆರಿಕದೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಕೆನಡಾವು ಭಾರತ, ಚೀನಾ ಸೇರಿ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಾಢವಾಗಿಸುವ ಗುರಿಯನ್ನು ಹೊಂದಿದೆ. ಮುಂಬೈಗೆ ಬಂದಿರುವ ಅವರು ನವದೆಹಲಿಗೆ ತೆರಳುವ ಮುನ್ನ ಮುಂಬೈಯಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.

ಜೆನ್‌ ಝಿ ಪ್ರತಿಭಟನೆಯ ನಂತರ ನೇಪಾಳದಲ್ಲಿ ನಡೆಯಲಿದೆ ಮೊದಲ ಚುನಾವಣೆ; ಮಾರ್ಚ್ 2ರಿಂದ ಭಾರತ-ನೇಪಾಳ ಗಡಿ ಬಂದ್

ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾದ ಪ್ರಜೆಯ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ ಬಳಿಕ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಆದರೆ ಇದನ್ನು ನವದೆಹಲಿ ತಿರಸ್ಕರಿಸಿತ್ತು. ಇದೀಗ ಕಾರ್ನಿ ಅವರ ಈ ಭೇಟಿಯ ಮೂಲಕ ಮತ್ತೊಮ್ಮೆ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಾಗುವ ಲಕ್ಷಣ ಕಾಣುತ್ತಿದೆ. ಸಿಖ್ ಪ್ರತ್ಯೇಕತಾವಾದಿ ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಂಜಾಬ್ ಗೆ ಅವರು ಈ ಸಂದರ್ಭದಲ್ಲಿ ಭೇಟಿ ನೀಡುವುದಿಲ್ಲ. ಇದು ಘರ್ಷಣೆಯನ್ನು ತಪ್ಪಿಸುವ ಕ್ರಮವೆನ್ನಲಾಗುತ್ತಿದೆ.

ಪಾಕಿಸ್ತಾನದೊಂದಿಗಿನ ಯುದ್ಧದ ಮಧ್ಯೆ ಭಾರತದ ಸಹಾಯಕ್ಕಾಗಿ ಅಫ್ಘಾನಿಸ್ತಾನ ಸಂಸದೆ ಮನವಿ

ಕಾರ್ನಿಯವರ ಈ ಭೇಟಿಯು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಇತ್ತೀಚಿನ ವ್ಯಾಪಾರ ಒಪ್ಪಂದದ ಮುಂದುವರಿದ ಭಾಗವಾಗದೆ. ಯುರೋಪಿಯನ್ ಒಕ್ಕೂಟದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿರುವಂತೆ ಕೆನಡಾ ಕೂಡ ಇದೇ ರೀತಿಯ ಒಪ್ಪಂದವನ್ನು ಬಯಸುತ್ತಿದೆ ಎನ್ನಲಾಗಿದೆ. ಇದರಲ್ಲಿ ದೀರ್ಘಾವಧಿಯ ಯುರೇನಿಯಂ ಪೂರೈಕೆ ಒಪ್ಪಂದ, ಇಂಧನ, ಕೃತಕ ಬುದ್ಧಿಮತ್ತೆ, ಶಿಕ್ಷಣ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಸಣ್ಣ ಒಪ್ಪಂದಗಳು ಸೇರಿರಬಹುದು. ಕಾರ್ನಿ ಅವರು ಭಾರತ ಪ್ರವಾಸದ ಬಳಿಕ ಆಸ್ಟ್ರೇಲಿಯಾ, ಜಪಾನ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author