ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Accident: ಕಾರು ಚಾಲಕನ ಹುಚ್ಚಾಟಕ್ಕೆ ವಿದ್ಯಾರ್ಥಿಗಳು ಸೇರಿದಂತೆ 12 ಮಂದಿಗೆ ಗಾಯ- ಭೀಕರ ದೃಶ್ಯ ವೈರಲ್‌

ಪುಣೆಯ ವಿಶ್ರಮ್‌ಬಾಗ್ ಪ್ರದೇಶದ ಸದಾಶಿವ ಪೇಠ್‌ನ ಭಾವೆ ಪ್ರೌಢಶಾಲೆಯ ಸಮೀಪ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ವೇಗವಾಗಿ ಬಂದ ಕಾರು 12 ಜನರಿಗೆ ಡಿಕ್ಕಿಯಾಗಿದೆ. ತಿರುವಿನ ಬಳಿ ಇರುವ ಚಹಾ ಅಂಗಡಿಯ ಹೊರಗೆ ಕೆಲವು ಪಾದಚಾರಿಗಳು ನಿಂತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಾರು ಡಿಕ್ಕಿಯಾಗಿದೆ. ಕಾರಿನ ಅಪಘಾತಕ್ಕೊಳಗಾದ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪುಣೆ: ವೇಗವಾಗಿ ಬಂದ ಕಾರೊಂದು ಪುಣೆಯ (Pune) ವಿಶ್ರಮ್‌ಬಾಗ್ ಪ್ರದೇಶದ ಟೀ ಅಂಗಡಿ ಬಳಿ ಇದ್ದ ಪಾದಚಾರಿಗಳಿಗೆ (Pedestrians) ಡಿಕ್ಕಿ (Accident) ಹೊಡೆದ ಪರಿಣಾಮ 12 ಮಂದಿ ಗಾಯಗೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಶನಿವಾರ ಸಂಜೆ ಈ ಘಟನೆ ನಡೆದಿದೆ. ಸದಾಶಿವ ಪೇಠ್‌ನ ಭಾವೆ ಪ್ರೌಢಶಾಲೆಯ (Sadashiv Peth Bhave High School) ಸಮೀಪವಿರುವ ವಿಶ್ರಮ್‌ಬಾಗ್ ಪ್ರದೇಶದ ಟೀ ಅಂಗಡಿಯ ಬಳಿ ಶನಿವಾರ ಸಂಜೆ 6 ಗಂಟೆ ವೇಗವಾಗಿ ಬಂದ ಕಾರು ಸುಮಾರು 12 ಜನರಿಗೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆಯ ವಿಶ್ರಮ್‌ಬಾಗ್ ಪ್ರದೇಶದ ಸದಾಶಿವ ಪೇಠ್‌ನ ಭಾವೆ ಪ್ರೌಢಶಾಲೆಯ ಸಮೀಪ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ವೇಗವಾಗಿ ಬಂದ ಕಾರು 12 ಜನರಿಗೆ ಡಿಕ್ಕಿಯಾಗಿದೆ. ತಿರುವಿನ ಬಳಿ ಇರುವ ಚಹಾ ಅಂಗಡಿಯ ಹೊರಗೆ ಕೆಲವು ಪಾದಚಾರಿಗಳು ನಿಂತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಾರು ಡಿಕ್ಕಿಯಾಗಿದೆ. ಕಾರಿನ ಅಪಘಾತಕ್ಕೊಳಗಾದ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಾಳುಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ (ಎಂಪಿಎಸ್‌ಸಿ) ಪರೀಕ್ಷೆಗೆ ಹಾಜರಾಗುತ್ತಿದ್ದ ಕೆಲವು ವಿದ್ಯಾರ್ಥಿಗಳು ಸೇರಿದ್ದಾರೆ. ಒಬ್ಬ ಹುಡುಗಿ ಮತ್ತು ಇತರ ನಾಲ್ವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕಾರು ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಕುಡಿದು ವಾಹನ ಚಲಾಯಿಸಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ವಿಶ್ರಮ್‌ಬಾಗ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಜಯಮಾಲಾ ಪವಾರ್ ತಿಳಿಸಿದ್ದಾರೆ.



ಕಾರಿನ ಮಾಲೀಕನನ್ನು ದಿಗಂಬರ್ ಶಿಂಧೆ ಎಂದು ಗುರುತಿಸಲಾಗಿದ್ದು, ಚಾಲಕ ಜೈರಾಮ್ ಮುಳೆ ಎಂದು ಗುರುತಿಸಲಾಗಿದೆ. ನಾರಾಯಣ್ ಸಾಯಿ ಟೀ ಅಂಗಡಿಯಲ್ಲಿ ಪಕ್ಕದಲ್ಲಿದ್ದವರು ಮತ್ತು ನಿಲ್ಲಿಸಿದ್ದ ವಾಹನಗಳ ಮೇಲೆ ಇವರು ಕಾರು ಚಲಾಯಿಸಿದ್ದರಿಂದ ಮದ್ಯಪಾನ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Belagavi Accident: ಬೆಳಗಾವಿಯಲ್ಲಿ ಟ್ಯಾಂಕರ್‌ ಹರಿದು ಮೂವರು ಕಾರ್ಮಿಕರ ದುರ್ಮರಣ

ಈ ಘಟನೆ ಸಂಜೆ ನಡೆದಿದ್ದು ಆರೋಪಿ ಚಾಲಕ ಮತ್ತು ಕಾರಿನ ಮಾಲೀಕನನ್ನು ಬಂಧಿಸಲಾಗಿದೆ. ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪುಣೆ ಪೊಲೀಸ್ ಡಿಸಿಪಿ ನಿಖಿಲ್ ಪಿಂಗಳೆ ತಿಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ವೇಗವಾಗಿ ಬಂದ ಎಸ್ ಯುವಿಯೊಂದು ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author