ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾತುಕತೆಗಾಗಿ ಕೇಂದ್ರ ಸರ್ಕಾರ ಸಿಜೆಪಿಯನ್ನು ನಾಲ್ಕು ಬಾರಿ ಸಂಪರ್ಕಿಸಿದೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

Central Government Has Contacted CJP: ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ನಿವಾಸ ಅಥವಾ ಕಚೇರಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಜೊತೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಸಿಜೆಪಿ ನಾಯಕತ್ವವನ್ನು ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯ ಚಿತ್ರಣ

ನವದೆಹಲಿ, ಜು.23: ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ (JP Nadda) ಅವರ ನಿವಾಸ ಅಥವಾ ಕಚೇರಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಜೊತೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಹೇಳಿದ್ದಾರೆ. ಸರ್ಕಾರ ಚರ್ಚೆಗೆ ಮುಕ್ತವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. “ನೀವು ಎಲ್ಲಿ ಬೇಕಾದರೂ ನಾವು ಚರ್ಚಿಸಬಹುದು. ಅದು ನಡ್ಡಾ ಅವರ ಮನೆಯಾಗಿರಲಿ ಅಥವಾ ಕಚೇರಿಯಾಗಿರಲಿ” ಎಂದು ಸಿಂಗ್ ಹೇಳಿದರು. ಸರ್ಕಾರವು ಈವರೆಗೆ ನಾಲ್ಕು ಬಾರಿ ಸಿಜೆಪಿಯನ್ನು ಸಂಪರ್ಕಿಸಿದೆ ಎಂದು ಅವರು ಹೇಳಿದರು.

“ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ನಾನು ಚರ್ಚೆಗಾಗಿ ಹಾಜರಿರುತ್ತೇವೆ. ನಿಧಾನವಾಗಿ, ಮಾತುಕತೆಯ ಮೂಲಕ ಪರಿಹಾರದತ್ತ ನಾವು ಸಾಗುತ್ತೇವೆ ಎಂದು ಸಿಂಗ್ ಹೇಳಿದರು. ಅಲ್ಲದೆ, ನಾವು ಪ್ರತಿಷ್ಠೆಯನ್ನು ಪಣಕ್ಕಿಡುವುದಿಲ್ಲ” ಎಂದು ಹೇಳಿದರು. ಈ ಜಾಗೃತಿ ಕಾರ್ಯಕ್ರಮವನ್ನು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವೆಂದು ವಿವರಿಸಿದ ಅವರು, ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ನಿರಂತರ ಕ್ರಮಗಳ ಸರಣಿಯ ಒಂದು ಭಾಗ ಇದು ಎಂದು ಅವರು ಹೇಳಿದರು.

ಸಿಜೆಪಿ ನಾಯಕತ್ವವನ್ನು ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ ಸಿಂಗ್, “ನೀವೆಲ್ಲರೂ ಬಂದು ಚರ್ಚೆ ನಡೆಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ಹೇಳಿದರು. ಇನ್ನು ಪ್ರತಿಭಟನಾ ಸ್ಥಳದಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಸಿಜೆಪಿ ವಕ್ತಾರ ಅಶುತೋಷ್ ರಂಕಾ, ಜಿತೇಂದ್ರ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಂತರ್ ಮಂತರ್‌ನಲ್ಲಿ ಮಾತುಕತೆ ನಡೆಸುವಂತೆ ಸಿಜೆಪಿ ಕೇಂದ್ರವನ್ನು ಕೇಳಿಕೊಂಡಿತ್ತು. ಆದರೆ ಪ್ರಸ್ತಾಪವನ್ನು ತಿರಸ್ಕರಿಸಲಾಯಿತು ಎಂದು ಹೇಳಿದರು.

ಪ್ರಧಾನಿ ನಿವಾಸದ ಬಳಿ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನೇ ಟೀಕಿಸಿದ ಸೋನಮ್ ವಾಂಗ್ಚುಕ್ ಪತ್ನಿ! ಕಾರಣವೇನು?

“ಸಚಿವ ಜಿತೇಂದ್ರ ಸಿಂಗ್ ಅವರು ನಾಲ್ಕು ಬಾರಿ ನಮ್ಮನ್ನು ಸಂಪರ್ಕಿಸಿದ್ದಾರೆ. ಸಿಜೆಪಿ ಯಾವಾಗ ಬೇಕಾದರೂ ಮಾತನಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ. ನಾವು ಅವರನ್ನು ಜಂತರ್ ಮಂತರ್‌ಗೆ ಬರಲು ಕೇಳಿಕೊಂಡೆವು. ಅವರು ನಿರಾಕರಿಸಿದರು. ಅವರು ನಮ್ಮನ್ನು ಜೆಪಿ ನಡ್ಡಾ ಅವರ ಮನೆಗೆ ಬರಲು ಕೇಳಿಕೊಂಡರು” ಎಂದು ರಂಕಾ ಹೇಳಿದರು.

ನಂತರ ಅವರು ಜನಸಮೂಹದ ಕಡೆಗೆ ತಿರುಗಿ ಸಿಜೆಪಿ ನಡ್ಡಾ ಅವರ ನಿವಾಸಕ್ಕೆ ಮಾತುಕತೆಗೆ ಹೋಗಬೇಕೇ ಎಂದು ಕೇಳಿದರು. ಸಭೆಯು ಇಲ್ಲ ಎಂದು ಪ್ರತಿಧ್ವನಿಸಿತು. ಹಾಗಾದರೆ ನಾವು ಹೋಗುವುದಿಲ್ಲ ಎಂದು ರಾಂಕಾ ಹೇಳಿದ್ದಾರೆ.

ಇದಕ್ಕೂ ಮೊದಲು, ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಪೊಲೀಸರು ಮತ್ತೊಮ್ಮೆ ಪಕ್ಷವನ್ನು ಸಂಪರ್ಕಿಸಿ, ಕೇಂದ್ರ ಸಚಿವ ಜೆಪಿ ನಡ್ಡಾ ಮಾತುಕತೆ ನಡೆಸಲು ಬಯಸಿದ್ದಾರೆ. ಅದರ ನಾಯಕರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಸಿಜೆಪಿ ಆಹ್ವಾನವನ್ನು ನಿರಾಕರಿಸಿತು. ಕೇಂದ್ರದ ಉದ್ದೇಶವನ್ನು ಪ್ರಶ್ನಿಸಿದ ದಾಸ್, ಸರ್ಕಾರವು ಪಕ್ಷದ ಬೇಡಿಕೆಗಳನ್ನು ಪರಿಗಣಿಸಲು ಸಿದ್ಧವಾಗಿಲ್ಲದಿದ್ದರೆ ಅರ್ಥಹೀನ ಚರ್ಚೆಗಳನ್ನು ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.