ನವದೆಹಲಿ: ಚುನಾವಣಾ (Election) ಸುಧಾರಣೆ ವಿಷಯಕ್ಕೆ ಸಂಬಂಧಿಸಿದಂತೆ ಡಿ.09ರಂದು ಸಂಸತ್ತಿನಲ್ಲಿ(Parliament) ಚರ್ಚೆಗೆ ಕೇಂದ್ರ ಸರಕಾರ ಅಸ್ತು ಎಂದಿದೆ. ಅದೇ ರೀತಿ ವಂoಟೀ 6ಸಂಬಂಧಿಸಿದಂತೆ ಪ್ರತ್ಯೇಕ ಚರ್ಚೆ ಡಿ.08ರಂದು ನಡೆಯಲಿದೆ. ಚುನಾವಣಾ ಸುಧಾರಣಾ ಚರ್ಚೆಯನ್ನು ಚುನಾವಣಾ ಮಂಡಳಿಯ ವಿಶೇಷ ತೀವ್ರ ಪರಿಶೀಲನೆ (ಎಸ್.ಐ.ಆರ್.) ವಿಚಾರವೇ ತೀವ್ರ ಚರ್ಚೆಗೆ ಒಳಗಾಗುವ ಸಾಧ್ಯತೆಗಳಿವೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಈಗಾಗಲೇ ವಿಸ್ತೃತ ಚರ್ಚೆಗೆ ಆಗ್ರಹಿಸಿವೆ.
ಚುನಾವಣಾ ಸುದಾರಣಾ ವಿಚಾರ ಚರ್ಚೆಗೆ ಸ್ವೀಕೃತಗೊಂಡಿರುವ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಮ್ಮ ಎಕ್ಸ್ ಖಾತೆಯಲ್ಲಿ ಡಿ.2ರಂದು ಮಾಹಿತಿ ನೀಡಿದ್ದಾರೆ. ‘ಲೋಕ ಸಭೆಯ ಸ್ಪೀಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ, ರಾಷ್ಟ್ರೀಯ ಗೀತೆಯಾಗಿರುವ ವಂದೆ ಮಾತರಂಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಚರ್ಚೆಯನ್ನು ನಡೆಸಲು ನಿರ್ಧರಿಸಲಾಗಿದೆ. ಡಿ.8ರಂದು ಮಧ್ಯಾಹ್ನ 12 ಗಂಟೆಯಿಂದ ಈ ಚರ್ಚೆ ನಡೆಯಲಿದೆ. ಅದೇ ರೀತಿ ಚುನಾವಣಾ ಸುಧಾರಣಾ ವಿಷಯದ ಮೇಲಿನ ಚರ್ಚೆ ಡಿ.9ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭಗೊಳ್ಳಲಿದೆ’ ಎಂದು ಸಚಿವ ರಿಜಿಜು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
Viral Video: ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು: ಹೃದಯ ಹಿಂಡುವ ದೃಶ್ಯ ಇಲ್ಲಿದೆ
ಈ ಮೂಲಕ ಚುನಾವಣಾ ಸುಧಾರಣೆ ವಿಷಯವು ಈ ಬಾರಿ ಸಂಸತ್ತಿನಲ್ಲಿ ಭಾರೀ ಗದ್ದಲವೆಬ್ಬಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರತಿಪಕ್ಷಗಳು ಎಸ್.ಐ.ಆರ್. ವಿಧಾನ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ತೆರವಿಗೆ ಸಂಬಂಧಿಸಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದಕ್ಕೆ ಕೌಂಟರ್ ಆಗಿ ಸರಕಾರವು, ಬೂತ್ ವಶಪಡಿಸಿಕೊಳ್ಳುವಿಕೆ ಮತ್ತು ಮತದಾನದ ಹಕ್ಕು ನಿರಾಕರಣೆಯಂತಹ ವಿಚಾರಗಳನ್ನು ಮುನ್ನಲೆಗೆ ತರುವ ಸಾಧ್ಯತೆಗಳಿವೆ. ಮತ್ತು ಇತ್ತೀಚಿನ ಬಿಹಾರ ವಿಧಾನ ಸಭೆಯ ಚುನಾವಣೆಗಳಲ್ಲಿ ಒಂದೇ ಒಂದು ಕಡೆ ಮತದಾನ ರದ್ದಾದ ಅಥವಾ ಮರು ಮತದಾನವಾದ ಉದಾಹರಣೆ ಇಲ್ಲ ಎಂಬುದನ್ನು ಕೇಂದ್ರ ಸರಕಾರ ಸಂಸತ್ತಿನಲ್ಲಿ ಚರ್ಚೆಯ ವೇಳೆ ಪ್ರಸ್ತಾಪಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.
ವ್ಯವಹಾರ ಸಲಹಾ ಮಂಡಳಿ ಸಭೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರು ವಂದೇ ಮಾತರಂ ಸಂಬಂಧಿತ ಚರ್ಚೆ ಮೊದಲಿಗೆ ನಡೆಯಬೇಕೆಂದು ಮಾತನಾಡಿಕೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.