ನವದೆಹಲಿ: ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ್ ಸಾಥಿ ಸೈಬರ್ (Sanchar Saathi APP) ಸೆಕ್ಯುರಿಟಿ ಅಪ್ಲಿಕೇಶನ್‌ನ ಪೂರ್ವ-ಸ್ಥಾಪನೆಯನ್ನು ಕಡ್ಡಾಯಗೊಳಿಸುವ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂತೆಗೆದುಕೊಂಡಿದೆ. ಕಳೆದ ವಾರ ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ ತಯಾರಕರು ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಲೋಡ್ ಮಾಡಿರುವ ಈ ಆ್ಯಪ್‌ಗೆ ಸಂಬಂಧಿಸಿದ ಗೌಪ್ಯತೆ ಕಾಳಜಿಗಳ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಗಳ ಮಧ್ಯೆ ಈ ನಿರ್ಧಾರ ಬಂದಿದೆ.
ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಾರ್ವಜನಿಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ವೇದಿಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಸಂಸತ್ತಿಗೆ ತಿಳಿಸಿದರು. ಸರ್ಕಾರದ ಪ್ರಕಾರ, ಈ ಅಪ್ಲಿಕೇಶನ್ ಅನ್ನು ಸೈಬರ್ ವಂಚನೆಯಿಂದ ಬಳಕೆದಾರರನ್ನು ರಕ್ಷಿಸಲು, ದುರುದ್ದೇಶಪೂರಿತ ಚಟುವಟಿಕೆಗಳನ್ನು ವರದಿ ಮಾಡಲು ಅವರಿಗೆ ಸಹಾಯ ಮಾಡಲು ಮತ್ತು ಸೈಬರ್ ಅಪರಾಧವನ್ನು ಎದುರಿಸುವಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ತಡೆಯಲು ಈ ನಿರ್ಣಯ ಕೈಗೊಂಡಿತ್ತು ಎಂದು ಅವರು ತಿಳಿಸಿದರು.
ಸರ್ಕಾರವು ಈ ಅಪ್ಲಿಕೇಶನ್‌ನ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಸದನ ಮುಂದಿಟ್ಟಿತು. ಇಲ್ಲಿಯವರೆಗೆ 1.4 ಕೋಟಿ ಬಳಕೆದಾರರು ಸಂಚಾರ್ ಸಾಥಿಯನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ, ಪ್ರತಿದಿನ ಸುಮಾರು 2,000 ವಂಚನೆ ಘಟನೆಗಳ ಮಾಹಿತಿಯನ್ನು ಸಾಮೂಹಿಕವಾಗಿ ನೀಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಆರು ಲಕ್ಷ ಹೊಸ ನೋಂದಣಿಗಳೊಂದಿಗೆ ಈ ಆವೇಗ ತೀವ್ರಗೊಂಡಿದೆ, ಇದು ದೈನಂದಿನ ಬಳಕೆಯಲ್ಲಿ ಹತ್ತು ಪಟ್ಟು ಹೆಚ್ಚಳವನ್ನು ಸೂಚಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Kendriya Vidyalayas: ದೇಶಾದ್ಯಂತ 57 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಅಸ್ತು
ಸಂಚಾರ್ ಸಾಥಿ ಎಂಬುದು ಸೈಬರ್ ವಂಚನೆಯನ್ನು ಎದುರಿಸಲು ಮತ್ತು ದೂರಸಂಪರ್ಕ ಭದ್ರತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ನಾಗರಿಕ ಕೇಂದ್ರಿತ ಉಪಕ್ರಮವಾಗಿದೆ. ಅದರ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ಬಳಕೆದಾರರು ಉಪಯೋಗ ಪಡೆದುಕೊಳ್ಳಬಹುದು. ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿದ ಬಳಿಕ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್ ಮಾಡಬಹುದು.