ಪ್ರಯಾಗ್‌ರಾಜ್: ಅಂತಿಮ ಶ್ರಾವಣ ಸೋಮವಾರದ ಪ್ರಯುಕ್ತ ಶ್ರೀ ಮಂದಿರ್ ಆ್ಯಪ್ ವತಿಯಿಂದ ಪ್ರಯಾಗ್‌ರಾಜ್‌ನ ಶ್ರೀ ಸೋಮೇಶ್ವರ ಮಹಾದೇವ ದೇವಸ್ಥಾನದಲ್ಲಿ 1,000 ಬ್ರಾಹ್ಮಣರಿಂದ 1 ಕೋಟಿ ‘ಓಂ ನಮಃ ಶಿವಾಯ’ ಮಹಾಮಂತ್ರ ಜಪ ಮತ್ತು 1,000 ಲೀಟರ್ ಗಂಗಾಜಲದಿಂದ ಮಹಾರುದ್ರಾಭಿ ಷೇಕ ನೆರವೇರಿಸಲಾಯಿತು.
ಶ್ರೀ ಮಂದಿರ್ ಆ್ಯಪ್ ಆಯೋಜಿಸಿದ್ದ ಈವರೆಗಿನ ಅತಿದೊಡ್ಡ ಪೂಜೆ ಇದಾಗಿದ್ದು, ಭಾರತ ಮತ್ತು ವಿದೇಶಗಳಿಂದ 25,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಭಕ್ತರ ಪರವಾಗಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವೈದಿಕ ವಿಧಾನದಂತೆ ಪೂಜೆ ನೆರವೇರಿಸಲಾಯಿತು.
ಇದನ್ನೂ ಓದಿ: Sanchar Saathi App: ಸಂಚಾರ್ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯವಲ್ಲ; ಆದೇಶ ಹಿಂಪಡೆದ ಕೇಂದ್ರ ಸರ್ಕಾರ
ಪೂಜೆಯಲ್ಲಿ 1 ಕೋಟಿ ಮಂತ್ರ ಜಪ, ಮಹಾರುದ್ರಾಭಿಷೇಕದ ಜೊತೆಗೆ 108 ಬಿಲ್ವಪತ್ರೆ, ಭಸ್ಮಾಭಿಷೇಕ ಮತ್ತು ಬಿಲ್ವಪತ್ರೆಯೊಂದಿಗೆ ಧತ್ತೂರ ಅರ್ಪಣೆ ಮಾಡಲಾಯಿತು. ಮಹಾರಾಷ್ಟ್ರದಿಂದ ಶೇ.23, ಕರ್ನಾಟಕದಿಂದ ಶೇ.12, ದೆಹಲಿಯಿಂದ ಶೇ.10 ರಷ್ಟು ಭಕ್ತರು ಭಾಗವಹಿಸಿದ್ದರು.
ಶ್ರೀ ಮಂದಿರ್ ಆ್ಯಪ್ ನ ಸಂಸ್ಥಾಪಕ ಮತ್ತು ಸಿಇಒ ಪ್ರಶಾಂತ್ ಸಚಾನ್ ಮಾತನಾಡಿ, “ಶಿವ ಭಕ್ತರಿಗೆ ಅಂತಿಮ ಶ್ರಾವಣ ಸೋಮವಾರ ಅತ್ಯಂತ ಮಹತ್ವದ ದಿನ. ಎಲ್ಲೇ ಇದ್ದರೂ ಭಕ್ತರು ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು” ಎಂದರು.
ಸೋಮೇಶ್ವರ ನಾಥ ಎಂದೂ ಕರೆಯಲ್ಪಡುವ ಈ ದೇವಸ್ಥಾನ ಪ್ರಯಾಗ್‌ರಾಜ್‌ನ ಪ್ರಮುಖ ಶಿವ ದೇವಸ್ಥಾನಗಳಲ್ಲಿ ಒಂದಾಗಿದೆ.