ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naxal Encounter: ಭದ್ರತಾ ಪಡೆಗಳಿಂದ 14 ಮಾವೋವಾದಿಗಳ ಎನ್‌ಕೌಂಟರ್; ನಾಯಕ ಸಚಿನ್ ಮಾಂಗ್ಡು ಬಲಿ

ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿ ಶನಿವಾರ ಬೆಳಿಗ್ಗೆ ಭದ್ರತಾ ಪಡೆಗಳು (security forces) ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 14 ನಕ್ಸಲರುಹತರಾಗಿದ್ದಾರೆ ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನಕ್ಸಲ್ ಗುಂಪಿನ ಪ್ರಮುಖ ಸದಸ್ಯನೂ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದು, ಈ ಎನ್‌ಕೌಂಟರ್‌ನಲ್ಲಿ ಸುಕ್ಮಾ ಜಿಲ್ಲೆಯಲ್ಲಿ 12 ಹಾಗೂ ಬಿಜಾಪುರದಲ್ಲಿ ಇಬ್ಬರು ಹತ್ಯೆಗೀಡಾಗಿದ್ದಾರೆ. ಈ ಪ್ರದೇಶಗಳಲ್ಲಿ ಇನ್ನೂ ಶೋಧಕಾರ್ಯಾ ಮುಂದುವರಿದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಎನ್​ಕೌಂಟರ್​ಗೆ 14 ನಕ್ಸಲರು ಬಲಿ

ಸಾಂದರ್ಭಿಕ ಚಿತ್ರ -

Profile
Sushmitha Jain Jan 3, 2026 1:03 PM

ಬಿಜಾಪುರ: ಛತ್ತೀಸ್‌ಗಢ (Chhattisgarh)ದ ಸುಕ್ಮಾ (Sukma) ಮತ್ತು ಪಕ್ಕದ ಬಿಜಾಪುರ (Bijapur) ಜಿಲ್ಲೆಗಳಲ್ಲಿ ಶನಿವಾರ ಬೆಳಿಗ್ಗೆ ಭದ್ರತಾ ಪಡೆಗಳು (security forces) ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 14 ಮಾವೋವಾದಿಗಳನ್ನು ಎನ್‌ಕೌಂಟರ್(Encounter) ಮಾಡಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ಸುಕ್ಮಾ ಜಿಲ್ಲೆಯಲ್ಲಿ 12 ಹಾಗೂ ಬಿಜಾಪುರದಲ್ಲಿ ಇಬ್ಬರು ಹತ್ಯೆಗೀಡಾಗಿದ್ದಾರೆ. ಈ ಪ್ರದೇಶಗಳಲ್ಲಿ ಇನ್ನೂ ಶೋಧಕಾರ್ಯಾ ಮುಂದುವರಿದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮೊದಲ ಎನ್‌ಕೌಂಟರ್ ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ (Kistaram) ಪ್ರದೇಶದಲ್ಲಿ ನಡೆದಿದೆ. ಖಚಿತ ಗುಪ್ತಚರ ಇಲಾಖೆ ನೀಡಿ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಕಾಡಿನೊಳಗೆ ಸಾಗುತ್ತಿದ್ದ ತಂಡದ ಮೇಲೆ ಮಾವೋವಾದಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದರಿಂದ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಕೋಂಟಾ (Konta) ಏರಿಯಾ ಕಮಿಟಿಯ ಹಿರಿಯ ಮಾವೋವಾದಿ ನಾಯಕ ಸಚಿನ್ ಮಾಂಗ್ಡು (Sachin Mangdu ) ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಅಷ್ಟೇಅಲ್ಲದೇ, ಕೋಂಟಾದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಆಕಾಶ್ ಗಿರ್ಪುಂಜೆ (Akash Girpunje) ಅವರ ಹತ್ಯೆಗೆ ಕಾರಣಾಗಿದ್ದ ಮಾವೋವಾದಿ ಕಮಾಂಡರ್ ಕೂಡ ಇದೇ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂಬ ವರದಿಗಳೂ ಕೆಳಿಬಂದಿವೆ.

Naxal Encounter: 1.1 ಕೋಟಿ ಬಹುಮಾನ ಹೊಂದಿದ್ದ ನಕ್ಸಲ್​ ನಾಯಕ ಗಣೇಶ್ ಉಯಿಕೆ ಎನ್‌ಕೌಂಟರ್‌

ಮೂಲಗಳ ಪ್ರಕಾರ, ಘಟನಾ ಸ್ಥಳದಲ್ಲಿ ಹಲವಾರು ಡಿವಿಸಿಎಂ (Divisional Committee Member) ಮಟ್ಟದ ಮಾವೋವಾದಿಗಳು ಹಾಜರಿದ್ದರು. ಇದರಿಂದ ಭದ್ರತಾ ಪಡೆಗಳು ದಾಳಿ ನಡೆಸಿದ ವೇಳೆ ಅಲ್ಲಿ ಉನ್ನತ ಮಟ್ಟದ ಮಾವೋವಾದಿ ಸಭೆ ಅಥವಾ ಚಲನವಲನ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ಕುರಿತು ಪ್ರತಿಕ್ರಿಸಿರುವ ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ (SP) ಕಿರಣ್ ಚವಾಣ್ (Kiran Chavan), ಕಾಡಿನಲ್ಲಿ ಶೋಧಕಾರ್ಯ ನಡೆಸುತ್ತಿರುವ ತಂಡ ಮರಳಿದ ಬಳಿಕವೇ ಮೃತಪಟ್ಟ ಮಾವೋವಾದಿಗಳೆಷ್ಟು ಎಂಬ ಅಧಿಕೃತ ಮಾಹಿತಿ ಬರಲಿದೆ," ಎಂದು ತಿಳಿಸಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ AK-47 ಮತ್ತು INSAS ರೈಫಲ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಮತ್ತೊಂದು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿ, ಅವರ ಬಳಿ ಇದ್ದ ಒಂದು SLR ಮತ್ತು ಒಂದು 12-ಬೋರ್ ರೈಫಲ್ ಅನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಇದು ಮಾವೋವಾದಿಗಳ ವಿರುದ್ಧ ಭದ್ರತಾ ಪಡೆಗಳ ಕೈಗೊಂಡ ಈ ವರ್ಷದ ಮೊದಲ ಎನ್‌ಕೌಂಟರ್ ಆಗಿದ್ದು, ಬಸ್ತಾರ್ ಪ್ರದೇಶದಲ್ಲಿ ತೀವ್ರಗೊಳಿಸಲಾದ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.