ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರಿ ಕೋಟ್‌ನಲ್ಲಿ ಹೈ ಕೋರ್ಟ್‌ಗೆ ಬಂದಿದ್ದ ಮಮತಾ ವಿರುದ್ಧ "ಕಳ್ಳಿ ಕಳ್ಳಿ" ಘೋಷಣೆ! ವಿಡಿಯೋ ನೋಡಿ

ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಚುನಾವಣೋತ್ತರ ಹಿಂಸಾಚಾರ ಮತ್ತು ಪಕ್ಷದ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣವೊಂದರ ವಾದ ಮಂಡಿಸಲು ಹಾಜರಾಗಿದ್ದರು. ಅವರು ನ್ಯಾಯಾಲಯದ ಆವರಣದಿಂದ ಹೊರಡುತ್ತಿದ್ದಂತೆ, ಕಳ್ಳ, ಕಳ್ಳ ಎಂಬ ಘೋಷಣೆಗಳು ಕೇಳಿ ಬಂದವು.

ಸಂಗ್ರಹ ಚಿತ್ರ

ಕೊಲ್ಕತ್ತಾ: ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ (Mamata Banerjee) ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ (Calcutta High Court) ಚುನಾವಣೋತ್ತರ ಹಿಂಸಾಚಾರ ಮತ್ತು ಪಕ್ಷದ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಕರಣವೊಂದರ ವಾದ ಮಂಡಿಸಲು ಹಾಜರಾಗಿದ್ದರು. ಅವರು ನ್ಯಾಯಾಲಯದ ಆವರಣದಿಂದ ಹೊರಡುತ್ತಿದ್ದಂತೆ, ಕಳ್ಳ, ಕಳ್ಳ ಎಂಬ ಘೋಷಣೆಗಳು ಕೇಳಿ ಬಂದವು. ಬಳಿಕ ಬ್ಯಾನರ್ಜಿ ನ್ಯಾಯಾಲಯದಿಂದ ತೆರಳಿದ್ದಾರೆ.

ಮಮತಾ ಬ್ಯಾನರ್ಜಿ ಅವರೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದ ತೃಣಮೂಲ ನಾಯಕ ಮತ್ತು ವಕೀಲ ಕಲ್ಯಾಣ್ ಬ್ಯಾನರ್ಜಿ, ಬಿಜೆಪಿಯ ಪ್ರಭಾವದಲ್ಲಿರುವ ವಕೀಲರು ಮಾಜಿ ಮುಖ್ಯಮಂತ್ರಿಯನ್ನು ಕೆಣಕಲು ಪ್ರಯತ್ನಿಸಿದರು ಮತ್ತು ಪಕ್ಷದ ಕಾನೂನು ತಂಡವು ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಲು ಕಷ್ಟಪಟ್ಟರು ಎಂದು ಹೇಳಿದ್ದಾರೆ. "ನ್ಯಾಯಾಲಯವು ಯಾರನ್ನಾದರೂ ಸಾರ್ವಜನಿಕವಾಗಿ ಕಳ್ಳ ಅಥವಾ ಡಕಾಯಿತ ಎಂದು ಹಣೆಪಟ್ಟಿ ಕಟ್ಟುವ ಸ್ಥಳವಲ್ಲ. ವಿರೋಧ ಪಕ್ಷದ ನಾಯಕರ ಬಗ್ಗೆಯೂ ನಾವು ಇದೇ ರೀತಿಯ ಮಾತುಗಳನ್ನು ಹೇಳಬಹುದು. ಮಾಜಿ ಮುಖ್ಯಮಂತ್ರಿ ಅರ್ಜಿಯ ವಾದ ಮಂಡಿಸಲು ನ್ಯಾಯಾಲಯಕ್ಕೆ ಹೋಗಿದ್ದರು, ಮತ್ತು ವಿಚಾರಣೆ ಮುಗಿದ ನಂತರ ಸ್ಥಳದಿಂದ ಹೊರಡುವಾಗ ನಾವು ಅಪಾರ ತೊಂದರೆಗಳನ್ನು ಎದುರಿಸಿದ್ದೇವೆ. "ಮಮತಾ ಬ್ಯಾನರ್ಜಿಯವರಿಗೂ ಇದು ಸಂಭವಿಸಬಹುದಾದರೆ, ಬಂಗಾಳದಾದ್ಯಂತ ತೃಣಮೂಲ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಿಗೆ ಪ್ರಸ್ತುತ ಏನಾಗುತ್ತಿದೆ ಎಂದು ಊಹಿಸಿ" ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.

ವಿಡಿಯೋ ನೋಡಿ



ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರವಾಗಿ ವಾದ ಮಂಡಿಸಲು ಅವರು ಖುದ್ದಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್‌ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು.

ಚುನಾವಣೆ ನಂತರ ಬಿಕ್ಕಟ್ಟಿನಲ್ಲಿ TMC: ಮಮತಾ ಬ್ಯಾನರ್ಜಿ ವಿರುದ್ಧವೇ ತಿರುಗಿಬಿದ್ದ ಪಕ್ಷದ ನಾಯಕರು, ಮೂವರು ಅಮಾನತು

92 ವರ್ಷದ ವಿಧವೆ ಸೇರಿದಂತೆ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿದ ಮಮತಾ, ಬಂಗಾಳದ ಜನರಿಗೆ ತಕ್ಷಣದ ರಕ್ಷಣೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.

Vishakha Bhat Heggar

View all posts by this author