ನವದೆಹಲಿ: ಶಾಲೆಯ ಪಠ್ಯ ಪುಸ್ತಕದಲ್ಲಿ ( NCERT text book) ನ್ಯಾಯಾಂಗವನ್ನು (Judiciary) ದೂಷಿಸಿರುವುದನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (Chief Justice of India Surya Kant) ಟೀಕಿಸಿದ್ದಾರೆ. 8ನೇ ತರಗತಿಯ ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ "ನ್ಯಾಯಾಂಗ ಭ್ರಷ್ಟಾಚಾರ"ದ (Corruption In Judiciary) ಉಲ್ಲೇಖಕ್ಕೆ ಪ್ರತಿಕ್ರಿಯಿಸಿರುವ ಅವರು, ಇದು ತಿಳಿದು ನ್ಯಾಯಾಂಗದ ಮೇಲೆ ನಡೆಸಿರುವ ದಾಳಿಯಾಗಿದೆ. ಸಂಸ್ಥೆಯನ್ನು ದೂಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಇದನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ತಿಳಿದಿದೆ ಎಂದು ಅವರು ಮಂಗಳವಾರ ಹೇಳಿದರು.
ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಭ್ರಷ್ಟಾಚಾರವನ್ನು ಉಲ್ಲೇಖಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಆಯ್ದುಕೊಂಡು, ಇದಕ್ಕೆ ಸಂಬಂಧಿಸಿ ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಕರೆಗಳು ಮತ್ತು ಸಂದೇಶಗಳು ತಮಗೆ ಬರುತ್ತಿವೆ ಎಂದು ಹೇಳಿದರು.
Dr N Someshwara Column: ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು
ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ಶಾಲಾ ಪಠ್ಯಪುಸ್ತಕಗಳಲ್ಲಿ "ನ್ಯಾಯಾಂಗ ಭ್ರಷ್ಟಾಚಾರ"ವನ್ನು ಸೇರಿಸಿರುವುದು ತುಂಬಾ ತೊಂದರೆದಾಯಕ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಅವರು, ರಾಜಕಾರಣಿಗಳು, ಸಚಿವರು ಅಥವಾ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಯಾವುದೇ ಉಲ್ಲೇಖವಿಲ್ಲದೆ ಒಂದು ಸಂಸ್ಥೆಯನ್ನು ಪ್ರತ್ಯೇಕವಾಗಿರಿಸಲಾಗುತ್ತಿದೆ ಎಂದು ತೋರುತ್ತಿದೆ. ವಿದ್ಯಾರ್ಥಿಗಳಿಗೆ ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ಕಲಿಸಲಾಗುತ್ತಿದೆ. ಇದನ್ನು ನೋಡಿ ನಾವು ಸಂಸ್ಥೆಯ ಸದಸ್ಯರಾಗಿ ತೀವ್ರ ದುಃಖ ಪಡುತ್ತೇವೆ. ಇದು ಸಂಪೂರ್ಣ ಹಗರಣವಾಗಿದೆ. ಪುಸ್ತಕದ ಪ್ರತಿಗಳು ನಮ್ಮ ಬಳಿ ಇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ವಂದೇ ಭಾರತ್ ರೈಲಿನಲ್ಲಿ ಕಸ ಹಾಕಿದ ಹೆಕ್ಕಿಸಿದ ತಂದೆ; ಶ್ಲಾಘನೆ ವ್ಯಕ್ತ ಪಡಿಸಿದ ನೆಟ್ಟಿಗರು!
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ನ್ಯಾಯಾಂಗ ಸಂಸ್ಥೆಯ ಮೇಲೆ ಯಾವುದೇ ದಾಳಿಗೆ ಅವಕಾಶ ನೀಡುವುದಿಲ್ಲ. ಒಂದು ದಿನ ಕಾಯಿರಿ. ಅದು ಯಾರೇ ಆಗಿರಲಿ. ಕಾನೂನು ಎಲ್ಲರಿಗೂ ಸಮಾನವಾಗಿದೆ. ಅದು ತನ್ನ ಹಾದಿಯಲ್ಲಿ ಸಾಗುತ್ತದೆ. ಅದನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿದೆ. ಇದು ಬಹಳ ಲೆಕ್ಕಾಚಾರ ಮಾಡಿ ನಡೆಸಲಾದ ಕ್ರಮವೆಂದು ತೋರುತ್ತದೆ. ನಾವು ಹೆಚ್ಚೇನೂ ಹೇಳಲು ಬಯಸುವುದಿಲ್ಲ. ನನಗೆ ಗೊತ್ತು ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದು ಸಿಜೆಐ ತಿಳಿಸಿದರು.