ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಜೆಪಿ ಪ್ರತಿಭಟನೆ: 18 ದಿನಗಳ ಉಪವಾಸದಲ್ಲಿ 8.2 ಕೆಜಿ ತೂಕ ಕಳೆದುಕೊಂಡ ಸೋನಮ್ ವಾಂಗ್‌ಚುಕ್

ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರಾರಂಭಿಸಿದ ಪ್ರತಿಭಟನೆಗೆ ಬೆಂಬಲ ನೀಡಿ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞ ಮತ್ತು ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 18 ದಿನಗಳನ್ನು ಪೂರೈಸಿದೆ. ಉಪವಾಸ ಆರಂಭಿಸಿದ ಬಳಿಕ ಅವರ ದೇಹ ತೂಕ 8.2 ಕೆಜಿ ಇಳಿಕೆಯಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಕಳೆದ 18 ದಿನಗಳಿಂದ ದೆಹಲಿಯ (Delhi) ಜಂತರ್ ಮಂತರ್‌ನಲ್ಲಿ (Jantar Mantar) ಉಪವಾಸ ಸತ್ಯಾಗ್ರಹ (Hunger Strike) ನಡೆಸುತ್ತಿರುವ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞ ಮತ್ತು ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ (Sonam Wangchuk ) ಅವರು ಸುಮಾರು 8.2 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಉಪವಾಸ ಸತ್ಯಾಗ್ರಹದ ಪರಿಣಾಮ ಅವರ ಆರೋಗ್ಯದ ಮೇಲಾಗುತ್ತಿದೆ ಎಂದು ಸೋಮವಾರ ಪ್ರತಿಭಟನಾಕಾರರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷ (Cockroach Janta Party)ದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.

ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಹೇಳಿಕೆ ನೀಡಿರುವ ಪ್ರತಿಭಟನಾಕಾರರು, ವಾಂಗ್‌ಚುಕ್ ಅವರು ಸುಮಾರು 8.25 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆ ಮಟ್ಟ 70 ಮಿ.ಗ್ರಾಂ. ಗಿಂತ ಕಡಿಮೆಯಾಗಿದೆ. ಪದೇ ಪದೇ ಅವರಿಗೆ ತಲೆತಿರುಗುವಿಕೆ, ಸ್ನಾಯು ಸೆಳೆತ, ದೌರ್ಬಲ್ಯ ಕಾಣಿಸುತ್ತಿದೆ ಅವರ ಪಕ್ಕೆಲುಬು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ 18 ದಿನಗಳಿಂದ ಅವರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರವು ಮಾತನಾಡಲು ಯಾರನ್ನೂ ಕೂಡ ಕಳುಹಿಸಿಲ್ಲ ಎಂದು ಹೇಳಿದರು.

21ನೇ ಶತಮಾನದಲ್ಲೂ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ ವಾಣಿಜ್ಯ ನಗರಿ ಮುಂಬೈ ಸಮೀಪದ ಈ ಗ್ರಾಮ; ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಮ್ ವಾಂಗ್‌ಚುಕ್, ನನ್ನ ದೇಹ ದುರ್ಬಲವಾಗಿರಬಹುದು. ಆದರೆ ನಾನು ಒಳಗಿನಿಂದ ತುಂಬಾ ಬಲಶಾಲಿಯಾಗಿದ್ದೇನೆ ಎಂದು ತಿಳಿಸಿದರು.

ಭಾರತದಲ್ಲಿ ಶೈಕ್ಷಣಿಕ ಸುಧಾರಣೆಗಳಿಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಯನ್ನು ಆರಂಭಿಸಿತ್ತು. ಸಿಜೆಪಿ ಪ್ರಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಆದರೆ ಪ್ರಧಾನ್ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ವಾಂಗ್‌ಚುಕ್ ಅವರು ಉಪವಾಸ ಕೈ ಬಿಡುವಂತೆ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಹಲವಾರು ನಾಯಕರು ಒತ್ತಾಯಿಸಿದ್ದಾರೆ. ವಾಂಗ್‌ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕನಿಮೋಳಿ, ದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ಹೇಳಿದ್ದರು.

ಈ ಕುರಿತು ಎಕ್ಸ್ ನಲ್ಲಿ ಬರೆದಿದ್ದ ಅವರು, ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳವಾಗಿದೆ. ಅವರ ಉಪವಾಸವು ನಮ್ಮ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅವರ ಆಳವಾದ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಬಿಜೆಪಿ ಸರ್ಕಾರವು ಈ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸಬೇಕು. ದೇಶಕ್ಕೆ ವಾಂಗ್‌ಚುಕ್‌ ಅವರಂತಹ ಧ್ವನಿಗಳು ಬೇಕಾಗಿವೆ. ನ್ಯಾಯಕ್ಕಾಗಿ ಹೋರಾಟವು ಅಚಲವಾದ ದೃಢಸಂಕಲ್ಪದೊಂದಿಗೆ ಮುಂದುವರಿಯಬೇಕು. ಅದಕ್ಕಾಗಿ ಅವರ ಆರೋಗ್ಯದ ಬಲಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು.

ಬಾಂಗ್ಲಾದೇಶಕ್ಕೆ ಮರಳಿದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಜೈಲು ವಾಸ ಫಿಕ್ಸ್‌; ಎಚ್ಚರಿಕೆ ನೀಡಿದ ಸಚಿವೆ

ಸಿಜೆಪಿ ವತಿಯಿಂದ ಜುಲೈ 20 ರಂದು ಸಂಸತ್ತಿಗೆ ಮೆರವಣಿಗೆ ನಡೆಯಲಿದ್ದು, ಇದನ್ನು ಉದ್ಭವ್ ಠಾಕ್ರೆ ಬೆಂಬಲಿಸಿದ್ದಾರೆ, ದೇಶದ ಯುವಕರ ಭವಿಷ್ಯಕ್ಕಾಗಿ ಮೆರವಣಿಗೆಯನ್ನು ಬೆಂಬಲಿಸುವಂತೆ ರಾಹುಲ್ ಗಾಂಧಿ ಸೇರಿದಂತೆ ಇತರ ಪಕ್ಷಗಳ ರಾಜಕೀಯ ನಾಯಕರಿಗೆ ಅವರು ಮನವಿ ಮಾಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author