ನವದೆಹಲಿ: ಸೆಕ್ಷನ್ 163 ಜಾರಿಯಲ್ಲಿದ್ದು, ಭದ್ರತೆಗಾಗಿ ಬ್ಯಾರಿಕೇಡ್ ಅಳವಡಿಸಿದ್ದರೂ ಕೂಡ ಸಂಸತ್ತಿನ (Parliament) ಆವರಣವನ್ನು ಸಿಜೆಪಿ ಪ್ರತಿಭಟನಾಕಾರರು (CJP Protester) ಪ್ರವೇಶಿಸಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಕೇಳಿ ಬರುತ್ತಿದೆ. ಜುಲೈ 20ರಂದು ನಡೆದ ಪ್ರತಿಭಟನೆಯ (Protest) ಹೊಸ ವಿಡಿಯೊ (New Video) ಬೆಳಕಿಗೆ ಬಂದಿದ್ದು, ಇದರಲ್ಲಿ ಪ್ರತಿಭಟನಾಕಾರರು ಸಂಸತ್ತಿನ ಹತ್ತಿರ ತಲುಪಿ ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವುದು ಸೆರೆಯಾಗಿದೆ. ಕಾಕ್ರೋಚ್ ಜನತಾ ಪಕ್ಷದ (Cockroach Janata Party) ನೇತೃತ್ವದಲ್ಲಿ ಸಂಸತ್ ಚಲೋ ಪ್ರತಿಭಟನೆ ನಡೆದಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಂಸತ್ತಿನ 100 ಮೀಟರ್ ಒಳಗೆ ಬಂದು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದಿರುವುದನ್ನು ಕಾಣಬಹುದಾಗಿದೆ.
ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಜುಲೈ 20ರಂದು ನಡೆದಿದ್ದ ದೆಹಲಿಯ ಜಂತರ್ ಮಂತರ್ ನಿಂದ ಸಂಸತ್ ಚಲೋ ಪ್ರತಿಭಟನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದರಲ್ಲಿ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿನ ಆವರಣದೊಳಗೆ ಪ್ರವೇಶಿಸಿದ್ದರು. ಇದು ದೆಹಲಿ ಪೊಲೀಸರ ಸಿದ್ಧತೆ ಕಾರ್ಯಗಳ ಕುರಿತು ಪ್ರಶ್ನಿಸುವಂತೆ ಮಾಡಿದೆ.
ಹೊಸ ವಿಡಿಯೊದಲ್ಲಿ ಪ್ರತಿಭಟನಾಕಾರರು ಸಂಸತ್ತಿನ ಕಟ್ಟಡದ ಸುತ್ತಲಿನ ಹಲವಾರು ಸ್ಥಳಗಳನ್ನು ತಲುಪಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಪದೇ ಪದೇ ಘರ್ಷಣೆಗಳು ನಡೆಸಿವೆ. ಈ ದೃಶ್ಯಗಳು ರೈಲು ಭವನದ ಬಳಿಯ ಸೆಲ್ಫಿ ಪಾಯಿಂಟ್ ಸೇರಿದಂತೆ ಸಂಸತ್ತಿನ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.
ಪ್ರತಿಭಟನಾ ಸ್ಥಳದಲ್ಲಿ ದೆಹಲಿ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯ ಪಡೆ ಸಿಬ್ಬಂದಿಯ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿದೆ. ಸಂಸತ್ತಿನ ಹಿಂದೆ ಆರ್‌ಎಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆಯು ಹಿಂಸಾತ್ಮಕ ರೂಪ ತಳೆಯುವ ಮುನ್ಸೂಚನೆ ಇದ್ದರೂ ದೆಹಲಿ ಪೊಲೀಸರು ಮಾಡಿದ ಭದ್ರತಾ ವ್ಯವಸ್ಥೆಗಳಲ್ಲಿ ಆಗಿರುವ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಂಸತ್ತು ಆವರಣದಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 163 ಜಾರಿಯಲ್ಲಿದ್ದಾಗ ಸಾವಿರಾರು ಪ್ರತಿಭಟನಾಕಾರರು ಸಂಸತ್ತನ್ನು ತಲುಪುವುದನ್ನು ಮುಂಚಿತವಾಗಿ ಏಕೆ ಸಾಧ್ಯವಾಗಲಿಲ್ಲ ? ಇದಕ್ಕಾಗಿ ಯಾಕೆ ಮೊದಲೇ ತಡೆ ಹಾಕಿರಲಿಲ್ಲ ಎಂಬುದನ್ನು ಕೂಡ ಪ್ರಶ್ನಿಸುವಂತೆ ಮಾಡಿದೆ.
ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ ನಡೆದ ಅಕ್ರಮಗಳ ವಿರುದ್ಧ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಸಂಸತ್ತು ಆವರಣದಲ್ಲಿ ಗದ್ದಲ ಹೆಚ್ಚಾದಾಗ ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ದೃಶ್ಯವು ರೈಲ್ ಭವನದ ಬಳಿಯ ಸೆಲ್ಫಿ ಪಾಯಿಂಟ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.
"ನಿದ್ದೆ ಬಂದಿಲ್ಲ ಎಂದು ಮೋದಿ ಮಧ್ಯರಾತ್ರಿ ರೀಲ್ಸ್ ಮಾಡಿದ್ದಾರೆ"; ಪ್ರಧಾನಿ ಭಾಷಣವನ್ನು ಟೀಕಿಸಿದ ಖರ್ಗೆ
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಆರ್‌ಎಎಫ್ ಸಿಬ್ಬಂದಿ ಇದ್ದರು. ಯುವಕರನ್ನು ಚದುರಿಸಲು ಅವರು ಲಾಠಿ ಪ್ರಹಾರ ನಡೆಸಿರುವುದು ಕೂಡ ಈ ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ ಎಂದು ಮಾಧ್ಯಮವೊಂದು ನಡೆಸಿರುವ ತನಿಖೆಯಲ್ಲಿ ತಿಳಿದುಬಂದಿದೆ.