ನವದೆಹಲಿ: ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಜಿರಳೆಗಳು ಪತ್ತೆಯಾಗಿದ್ದು, ಪ್ರಯಾಣಿಕರು ಈ ಕುರಿತು ದೂರು ನೀಡಿದ್ದಾರೆ. ಪ್ರಯಾಣಿಕರ ದೂರಿಗೆ ತಕ್ಷಣ ಸ್ಪಂದಿಸಿದ್ದು, ವ್ಯಕ್ತಿಗಳಿಗೆ ಬೇರೆ ಆಸನದ ವ್ಯವಸ್ಥೆ ಮಾಡಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ಕಾರ್ಯನಿರ್ವಹಿಸುವ ಏರ್ ಇಂಡಿಯಾ ವಿಮಾನ AI180 ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ಜಿರಳೆಗಳಿವೆ ಇದರಿಂದ ತಮಗೆ ತೊಂದರೆಯಾಗುತ್ತಿವೆ ಎಂದು ದೂರು ನೀಡಿದ್ದರು.
"ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ಪ್ರಯಾಣಿಸುತ್ತಿದ್ದ AI180 ವಿಮಾನದಲ್ಲಿ, ದುರದೃಷ್ಟವಶಾತ್ ಇಬ್ಬರು ಪ್ರಯಾಣಿಕರು ಕೆಲವು ಸಣ್ಣ ಜಿರಳೆಗಳಿಂದ ತೊಂದರೆಗೊಳಗಾದರು. ಆದ್ದರಿಂದ ನಮ್ಮ ಕ್ಯಾಬಿನ್ ಸಿಬ್ಬಂದಿ, ಇಬ್ಬರು ಪ್ರಯಾಣಿಕರನ್ನು ಅದೇ ಕ್ಯಾಬಿನ್‌ನಲ್ಲಿರುವ ಬೇರೆ ಆಸನಳಲ್ಲಿ ಅವರಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೂರಿನ ನಂತರ, ವಿಮಾನದ ಸಿಬ್ಬಂದಿ ಕೋಲ್ಕತ್ತಾದಲ್ಲಿ ಸಂಪೂರ್ಣ ವಿಮಾನವನ್ನು ಶುಚಿಗೊಳಿಸಿದ್ದಾರೆ. "ಕೋಲ್ಕತ್ತಾದಲ್ಲಿ ವಿಮಾನದ ನಿಗದಿತ ಇಂಧನ ನಿಲುಗಡೆಯ ಸಮಯದಲ್ಲಿ, ನಮ್ಮ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲು ಶುಚಿಗೊಳಿಸುವ ಪ್ರಕ್ರಿಯೆಯನ್ನು ನಡೆಸಿದರು" ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ನಿಯಮಿತವಾಗಿ ಶುಚಿಗೊಳಿಸಿದರೂ, ಕೆಲವೊಮ್ಮೆ ಕೀಟಗಳು ವಿಮಾನದ ಒಳಗೆ ಪ್ರವೇಶಿಸುತ್ತವೆ. ಇಂತಹ ಘಟನೆ ಮತ್ತೆ ಮರುಕಳಿಸದಿರುವಂತೆ ಏರ್ ಇಂಡಿಯಾ ನೋಡಿಕೊಳ್ಳುತ್ತದೆ ಎಂದು ವಿಮಾನ ಸಂಸ್ಥೆ ತಿಳಿಸಿದೆ. ಪ್ರಯಾಣಿಕರಿಗೆ ಉಂಟಾದ ಯಾವುದೇ ಅನಾನುಕೂಲತೆಗಾಗಿ" ಏರ್ ಇಂಡಿಯಾ ಗ್ರಾಹಕರಿಗೆ ಕ್ಷಮೆಯಾಚಿಸಿದೆ.
ಈ ಸುದ್ದಿಯನ್ನೂ ಓದಿ: Air India Express: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ; ದೋಹಾಕ್ಕೆ ಹೊರಟಿದ್ದ ವಿಮಾನ ಕೋಝಿಕ್ಕೋಡ್‌ಗೆ ವಾಪಸ್
ಏರ್ ಇಂಡಿಯಾ ವಿಮಾನ ವಾಪಸ್
ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಭಾನುವಾರ ರಾತ್ರಿ ಹೈಡ್ರಾಲಿಕ್ ವೈಫಲ್ಯದಿಂದಾಗಿ ಮಧ್ಯದಲ್ಲೇ ಹಿಂತಿರುಗಿದೆ. ಬೆಂಗಳೂರು-ಕೋಲ್ಕತ್ತಾ ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (ವಿಮಾನ IX 2718)ದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೆಐಎಯಿಂದ ಸಂಜೆ 7:05 ಕ್ಕೆ ಹೊರಡಬೇಕಿದ್ದ ವಿಮಾನವು ಸಂಜೆ 7:16 ಕ್ಕೆ ಹೊರಟು 9:19 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.