ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Complete education is free in Odisha: ಒಡಿಶಾದಲ್ಲಿ ಸಂಪೂರ್ಣ ಶಿಕ್ಷಣವೇ ಉಚಿತ: ಇಡೀ ದೇಶಕ್ಕೆ ಮಾದರಿ

ಒಡಿಶಾದಲ್ಲಿ ಬಿಜೆಡಿ ಸರಕಾರವನ್ನು ಕಿತ್ತು ಹಾಕಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಸರಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಝಿ ಮೇಲಿನ ಘೋಷಣೆ ಮಾಡಿದ್ದಾರೆ. ಸರ್ವರಿಗೂ ಶಿಕ್ಷಣ, ಉಚಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಒಡಿಶಾ ಪಾತ್ರವಾಗಿದೆ.

ಸಿಎಂ ಮೋಹನ ಮಾಝಿ ಘೋಷಣೆ, ಉಚಿತಗಳ ಕಾಲದಲ್ಲಿ ಐತಿಹಾಸಿಕ ಹೆಜ್ಜೆ, 10 ಲಕ್ಷ ವಿದ್ಯಾರ್ಥಿಗಳಿಗೆ ಲಾಭ

ಭುವನೇಶ್ವರ: ಭಾರತದಲ್ಲಿ ಪ್ರಸ್ತುತ ಅತ್ಯಂತ ದುಬಾರಿಯಾಗಿರುವುದು ಶಿಕ್ಷಣ ಮತ್ತು ಆರೋಗ್ಯ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ, ಅಷ್ಟೇ ಉತ್ತಮ ಆರೋಗ್ಯ ಸೌಲಭ್ಯ ದೊರಕಿದಲ್ಲಿ ಉನ್ನತ ಸಾಧನೆಗೆ ಸಜ್ಜಾಗಬಹುದೆಂದು ಬಹುತೇಕರು ಹೇಳುತ್ತಾರೆ. ಇಂತಹ ಹೊತ್ತಿನಲ್ಲಿ ಒಡಿಶಾ ಮುಖ್ಯ ಮಂತ್ರಿ ಮೋಹನ ಚರಣ ಮಾಝಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ಸಂಪೂರ್ಣ ಶಿಕ್ಷಣವನ್ನೇ ಉಚಿತವಾಗಿ ನೀಡಲಾಗುವುದೆಂದು ಘೋಷಿಸಿದ್ದಾರೆ.

ಒಡಿಶಾದಲ್ಲಿ ಬಿಜೆಡಿ ಸರಕಾರವನ್ನು ಕಿತ್ತು ಹಾಕಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಸರಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಝಿ ಮೇಲಿನ ಘೋಷಣೆ ಮಾಡಿದ್ದಾರೆ. ಸರ್ವರಿಗೂ ಶಿಕ್ಷಣ, ಉಚಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಒಡಿಶಾ ಪಾತ್ರವಾಗಿದೆ.

ಪ್ರಸ್ತುತ ಕರ್ನಾಟಕವೂ ಸೇರಿದಂತೆ ದೇಶದ ಹಲವು ಪ್ರಮುಖ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಗ್ಯಾರಂಟಿಗಳನ್ನು, ಉಚಿತಗಳನ್ನು ಘೋಷಿಸಲಾಗಿದೆ. ಆದರೆ ಅಮೂಲ್ಯವಾದ ವಿದ್ಯೆ, ಆರೋಗ್ಯ ವ್ಯವಸ್ಥೆಗಳು ಇನ್ನೂ ಕೈಗೆಟುಕುವ ಸ್ಥಿತಿಯಲ್ಲಿಲ್ಲ.

ಇದನ್ನೂ ಓದಿ: State Education Policy: ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡಲು ಸಚಿವ ಸಂಪುಟ ಒಪ್ಪಿಗೆ

ಮುಖ್ಯವಾಗಿ ಎಂಜಿನಿಯರಿಂಗ್, ವೈದ್ಯಕೀಯದಂತಹ ತಾಂತ್ರಿಕ ಶಿಕ್ಷಣಗಳ ವೆಚ್ಚ ನಿಭಾಯಿಸ ಲಾಗದ ಸ್ಥಿತಿಯಲ್ಲಿದೆ. ಉತ್ತಮ ಅಂಕಗಳ ಆಧಾರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶುಲ್ಕ ಕಡಿಮೆ ಯಾದರೂ ಅದನ್ನೂ ಬಡ, ಮಧ್ಯಮ ವರ್ಗದ ಕೋಟ್ಯಂತರ ವಿದ್ಯಾರ್ಥಿಗಳು ಭರಿಸಲಾ ಗದೇ ಬೇರೆ ಕೋರ್ಸ್‌ಗಳನ್ನು ಆಯ್ದುಕೊಳ್ಳುವ ಸ್ಥಿತಿಯಿದೆ.

ಇಂತಹ ಸ್ಥಿತಿಯಲ್ಲಿ ಮಧ್ಯಮವರ್ಗ ನಿರಂತರವಾಗಿ ಕೇಳುತ್ತಿರುವುದು ಯಾಕೆ ಯಾವ ಸರಕಾರವೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯವನ್ನು ಸುಲಭ ಲಭ್ಯವಾಗುವಂತೆ ಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು.

ಒಡಿಶಾ ಮುಖ್ಯಮಂತ್ರಿ ಮಾಝಿ ಮಾಡಿದ ಘೋಷಣೆ, ಹಲವು ಉಚಿತಗಳನ್ನು ನೀಡುತ್ತಿರುವ ಎಲ್ಲ ಸರಕಾರಗಳಿಗೆ ಮಾದರಿಯಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಉನ್ನತ ಸಂಶೋ ಧನಾ ವಿದ್ಯಾರ್ಥಿಗಳಿಗೆ ದೊಡ್ಡ ಲಾಭವಾಗಲಿದೆ.

ಪ್ರಸ್ತುತ ಒಡಿಶಾದಲ್ಲಿ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಹೊಸ ಘೋಷಣೆ ಯಿಂದ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಒಡಿಶಾ ಸರಕಾರಕ್ಕೆ ಇದರಿಂದ 30 ಕೋಟಿ ರು. ವಾರ್ಷಿಕ ಹೊರೆ ಬೀಳಲಿದೆ.

45000ಕ್ಕೂ ಹೆಚ್ಚು ಶಿಕ್ಷಕರ ನೇಮಕ: ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ 45000ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗು ವುದು ಎಂದು ಮುಖ್ಯಮಂತ್ರಿ ಮೋಹನ ಮಾಝಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ 26,000ಕ್ಕೂ ಹೆಚ್ಚು ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿಕೊಳ್ಳ ಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಶೀಘ್ರದ ನಾಲ್ಕು ಹೊಸ ವಿಶ್ವವಿದ್ಯಾಲಯ ಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಈ ಶಿಕ್ಷಣಗಳು ಉಚಿತ

ವೈದ್ಯಕೀಯ, ಎಂಜಿನಿಯರಿಂಗ್ ತಾಂತ್ರಿಕ ಶಿಕ್ಷಣವೂ ಉಚಿತವಾಗಿಯೇ ಲಭ್ಯ

ಫಾರ್ಮಸಿ, ಕೃಷಿ, ಕಾನೂನು ಶಿಕ್ಷಣದಂತಹ ಇತರೆ

ತಾಂತ್ರಿಕ ಶಿಕ್ಷಣಗಳೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗಲಿದೆ

ಒಡಿಶಾ ಸರಕಾರಿ ಸಂಸ್ಥೆಗಳಲ್ಲಿ ಉಚಿತ, ಉನ್ನತ ಶಿಕ್ಷಣ ಅಲಭ್ಯತೆ ತಡೆಯಲು ಕ್ರಮ