ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಟಲಿಯ ದೀರ್ಘಾವಧಿಯ ಪ್ರಧಾನಿ ದಾಖಲೆ ಬರೆದ ಮೆಲೊನಿಗೆ ಮೋದಿ ಅಭಿನಂದನೆ

PM Modi Congratulates ‘Friend’ Meloni: 49 ವರ್ಷದ ಜಾರ್ಜಿಯ ಮೆಲೊನಿ ಅವರು ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು 2022ರ ಅ.22ರಂದು ಇಟಲಿಯ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಸೆ.3ಕ್ಕೆ ಅವರು ಪ್ರಧಾನಿಯಾಗಿ 1,413 ದಿನಗಳನ್ನು ಪೂರೈಸಿದ್ದಾರೆ. ಈ ಮೂಲಕ ಎರಡನೇ ವಿಶ್ವಯುದ್ಧದ ನಂತರ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಇಟಲಿಯ ಪ್ರಧಾನಿ ಎನಿಸಿಕೊಂಡಿದ್ದಾರೆ.

Modi-Meloni

ನವದೆಹಲಿ, ಸೆ.5: ಇಟಲಿಯ ದೀರ್ಘಾವಧಿಯ ಪ್ರಧಾನಿ ಎಂಬ ಐತಿಹಾಸಿಕ ದಾಖಲೆ ಮಾಡಿದ ಜಾರ್ಜಿಯಾ ಮೆಲೋನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

'ಇಟಲಿಯ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನನ್ನ ಸ್ನೇಹಿತೆ ಜಾರ್ಜಿಯಾ ಮೆಲೋನಿ ಅವರಿಗೆ ಅಭಿನಂದನೆಗಳು. ಈ ಸಾಧನೆಯು ಅವರ ನಾಯಕತ್ವದ ಮೇಲೆ ಇಟಲಿಯ ಜನರು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ' ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮೆಲೋನಿ ಅವರೊಂದಿಗಿನ ಸ್ನೇಹವು ಭಾರತ-ಇಟಲಿ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎರಡೂ ದೇಶಗಳ ಜನರ ಸಮೃದ್ಧ ಭವಿಷ್ಯಕ್ಕಾಗಿ ನಮ್ಮ ನಿಕಟ ಸಹಯೋಗವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ. ಮುಂದಿನ ವರ್ಷಗಳಲ್ಲಿ ಅವರ ನಿರಂತರ ಯಶಸ್ಸಿಗೆ ನನ್ನ ಶುಭ ಹಾರೈಕೆಗಳು ಎಂದು ಮೋದಿ ಹೇಳಿದ್ದಾರೆ.



49 ವರ್ಷದ ಜಾರ್ಜಿಯ ಮೆಲೊನಿ ಅವರು ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು 2022ರ ಅ.22ರಂದು ಇಟಲಿಯ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಸೆ.3ಕ್ಕೆ ಅವರು ಪ್ರಧಾನಿಯಾಗಿ 1,413 ದಿನಗಳನ್ನು ಪೂರೈಸಿದ್ದಾರೆ. ಈ ಮೂಲಕ ಎರಡನೇ ವಿಶ್ವಯುದ್ಧದ ನಂತರ ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಇಟಲಿಯ ಪ್ರಧಾನಿ ಎನಿಸಿಕೊಂಡಿದ್ದಾರೆ.

ಭಾರೀ ಮಳೆಗೆ ತತ್ತರಿಸಿದ ದೆಹಲಿ; ಹೊಳೆಯಂತಾದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಮೋದಿ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮೆಲೊನಿ, ‘ನರೇಂದ್ರ ಮೋದಿ ಅವರೇ, ನಿಮ್ಮ ಶುಭಾಶಯಗಳು ಮತ್ತು ಗೆಳತನಕ್ಕಾಗಿ ಧನ್ಯವಾದಗಳು. ಭಾರತ ಮತ್ತು ಇಟಲಿಯ ಸಂಬಂಧವು ಎಂದಿಗಿಂತಲೂ ಇದೀಗ ಬಲಿಷ್ಠವಾಗಿದೆ. ಎರಡೂ ದೇಶಗಳು ಒಟ್ಟಾಗಿ ಯುರೋಪ್ ಮತ್ತು ಏಷ್ಯಾದ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತಿವೆ’ ಎಂದು ಹೇಳಿದ್ದಾರೆ.



ಇದೇ ವರ್ಷದ ಮೇ ತಿಂಗಳಲ್ಲಿ ಇಟಲಿ ಭೇಟಿ ವೇಳೆ ನರೇಂದ್ರ ಮೋದಿ ಅವರು ಭಾರತದ ಒಂದು ಕಾಲದ ಜನಪ್ರಿಯ ‘ಪಾರ್ಲೆ ಮೆಲೋಡಿ’ ಚಾಕಲೇಟ್‌ ಅನ್ನು ಜಾರ್ಜಿಯಾ ಮೆಲೋನಿ ಅವರಿಗೆ ಗಿಫ್ಟ್‌ ನೀಡಿ ಗಮನ ಸೆಳೆದಿದ್ದರು. ತಮ್ಮಿಬ್ಬರ ನಡುವಿನ ದೋಸ್ತಿಯ ನೆನಪಿಗಾಗಿ ಅವರು ಈ ಚಾಕಲೇಟ್‌ ಅನ್ನು ಗಿಫ್ಟ್‌ ಆಗಿ ನೀಡಿದ್ದರು.

ದುಬೈನಲ್ಲಿ 2023ರಲ್ಲಿ ನಡೆದಿದ್ದ ಸಿಒಪಿ28 ಸಭೆ ವೇಳೆ ಮೋದಿ-ಮೆಲೋನಿ ಅವರ ಆತ್ಮೀಯ ಮಾತುಕತೆ ನಡೆಸಿದ್ದರು. ಆ ಬಳಿಕ ಮೋದಿ ಜತೆಗಿರುವ ಫೋಟೋವನ್ನು ‘ಸಿಒಪಿ28ನಲ್ಲಿ ಉತ್ತಮ ಗೆಳೆಯರು’ ಎಂಬ ಹ್ಯಾಷ್‌ ಟ್ಯಾಗ್‌ನೊಂದಿಗೆ ಮೆಲೋನಿ ಪೋಸ್ಟ್ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.