ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pralhad Joshi take on Rahul gandhi: ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಅಮೋಘ ಸೋಲಿನ ಶತಕ: ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಕರ್ನಾಟಕ ಸೇರಿದಂತೆ ದೇಶದ 28 ಕಡೆಗಳಲ್ಲೂ ಬ್ಯಾಲೆಟ್ ಪೇಪರ್(Ballot Paper) ಮೂಲಕವೇ ಚುನಾವಣೆ ನಡೆದಿದೆ. ಅದರಲ್ಲೂ ಕರ್ನಾಟಕದಲ್ಲಿ 133 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.60 ಲಕ್ಷ ಮತದಾರರು ಬ್ಯಾಲೆಟ್ ಪೇಪರ್ ಅಲ್ಲೇ ಕಾಂಗ್ರೆಸ್ ನ ಹಣೆಬರಹ ಬರೆದಿದ್ದಾರೆ. ಇನ್ನಾದರೂ ಭಾರತದ ಶ್ರೇಷ್ಠ ಚುನಾವಣಾ ವ್ಯವಸ್ಥೆ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಡಲಿ ಎಂದು ಸಚಿವ ಜೋಶಿ ಆಗ್ರಹಿಸಿದರು.

‎ನವದೆಹಲಿ: ಕರ್ನಾಟಕದಲ್ಲಿ ಶಿಕ್ಷಕ ಮತ್ತು ಪದವೀಧರ ಮತದಾರರು ಕಾಂಗ್ರೆಸ್ ಗೆ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ. ಮಾತ್ರವಲ್ಲ, ದೇಶದಲ್ಲಿ "ರಾಹುಲ್ ಗಾಂಧಿ(Rahul Gandhi) ಅಮೋಘ ನಾಯಕತ್ವದಲ್ಲಿ ಕಾಂಗ್ರೆಸ್ ಸೋಲಿನ ಶತಕ ಬಾರಿಸಲಿದೆ" ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ(Pralhad Joshi) ಎಚ್ಚರಿಸಿದರು.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಉತ್ತರಾಖಂಡ, ಉತ್ತರ ಪ್ರದೇಶ ಬಳಿಕ ಇದೀಗ ಸತತ ಸೋಲಿನಲ್ಲಿ ಶತಕ ಪೂರೈಸಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಶೂನ್ಯ ಸಂಪಾದನೆ: ದೇಶದ 28 ಕಡೆಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ(Parishad Election)ಯಲ್ಲಿ ಒಂದರಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಿಲ್ಲ. ರಾಹುಲ್ ಗಾಂಧಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವ ಪರಿಣಾಮ ಕಾಂಗ್ರೆಸ್ ಇಂದು ಶೂನ್ಯ ಸಂಪಾದನೆ ಮಾಡಿದೆ ಎಂದು ವಿಶ್ಲೇಷಿಸಿದರು.

ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಯಾವಾಗ ಎಲ್ಲಿ ಹೋಗುತ್ತಾರೆ ಎಂಬುದು ಸ್ವತಃ ಸೆಕ್ಯೂರಿಟಿಗೂ ಗೊತ್ತಿರಲ್ಲ. ಚುನಾವಣೆ ಮುಗಿದ ಮೇಲೆ ಬಂದು ಆಯೋಗ, ಇವಿಎಂ(EVM)ಗಳ ಮೇಲೆ ವೃಥಾ ಆರೋಪ ಮಾಡುತ್ತಾರೆ. ಇನ್ನಾದರೂ ಇದನ್ನೆಲ್ಲ ಬಿಡಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Pralhad Joshi: ವಿಧಾನ ಪರಿಷತ್ ಚುನಾವಣೆ ಗೆಲುವು ಭವಿಷ್ಯದ ಶುಭ ಸೂಚನೆ: 2028ರ ಚುನಾವಣೆಗೆ ದಿಕ್ಸೂಚಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ರಾಹುಲ್ ಗಾಂಧಿ ವಿಯೆಟ್ನಾಂ ಅಲ್ಲಿ -ಇಲ್ಲಿ ಓಡಿ ಹೋಗುವುದನ್ನು ಬಿಟ್ಟು ಚುನಾವಣಾ ಅಖಾಡ ದಲ್ಲಿದ್ದು ಎದುರಿಸಲಿ ಎನ್ನುತ್ತಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಬ್ಯಾಲೆಟ್ ಚೋರಿ ಅಭಿಯಾನ ಶುರು ಮಾಡ್ತಾರಾ;? ಕಾಂಗ್ರೆಸ್ ಇವಿಎಂ ಮೇಲೆ, ಚುನಾವಣಾ ಆಯೋಗದ ಮುಖ್ಯಸ್ಥರ ಮೇಲೆ ದೋಷಾರೋಪ ಹೊರಿಸಿದ್ದಾಯಿತು. 'ವೋಟ್ ಚೋರಿ' ಬೊಬ್ಬೆ ಹೊಡೆಯಿತು. ಈಗೇನು 'ಬ್ಯಾಲೆಟ್ ಚೋರಿ' ಅಭಿಯಾನ ಆರಂಭಿಸುತ್ತಾರಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‎‎ಬ್ಯಾಲೆಟ್ ಪೇಪರ್‌ನಲ್ಲೂ ಕೈ ಸೋಲು: ವಿಧಾನ ಪರಿಷತ್ ಚುನಾವಣೆ ಸಂಪೂರ್ಣ ಬ್ಯಾಲೆಟ್ ಪೇಪರ್ ಆಧಾರಿತವಾಗಿಯೇ ನಡೆಸಿದೆ. ಇಷ್ಟು ದಿನ ಇವಿಎಂ ಯಂತ್ರಗಳ ಮೇಲೆ ಗೂಬೆ ಕೂರಿಸು ತ್ತಿದ್ದ ಕಾಂಗ್ರೆಸ್‌ಗೆ ಈ ಬಾರಿ ಬ್ಯಾಲೆಟ್ ಪೇಪರ್‌ನಲ್ಲೇ ಪ್ರಜ್ಞಾವಂತ ಮತದಾರರು ಪ್ರತ್ಯುತ್ತರ ಕೊಟ್ಟಿದ್ದಾರೆ ಎಂದು ಚಾಟಿ ಬೀಸಿದರು.

ಕರ್ನಾಟಕ ಸೇರಿದಂತೆ ದೇಶದ 28 ಕಡೆಗಳಲ್ಲೂ ಬ್ಯಾಲೆಟ್ ಪೇಪರ್(Ballot Paper) ಮೂಲಕವೇ ಚುನಾವಣೆ ನಡೆದಿದೆ. ಅದರಲ್ಲೂ ಕರ್ನಾಟಕದಲ್ಲಿ 133 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.60 ಲಕ್ಷ ಮತದಾರರು ಬ್ಯಾಲೆಟ್ ಪೇಪರ್ ಅಲ್ಲೇ ಕಾಂಗ್ರೆಸ್ ನ ಹಣೆಬರಹ ಬರೆದಿದ್ದಾರೆ. ಇನ್ನಾದರೂ ಭಾರತದ ಶ್ರೇಷ್ಠ ಚುನಾವಣಾ ವ್ಯವಸ್ಥೆ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಡಲಿ ಎಂದು ಸಚಿವ ಜೋಶಿ ಆಗ್ರಹಿಸಿದರು.

‎ಧಾರವಾಡದಲ್ಲಿ ಬಿಜೆಪಿಗೆ ಶೇ.54ರಷ್ಟು ಮತಗಳು ಬಂದಿದ್ದು, ಕಾಂಗ್ರೆಸ್‌ಗೆ ಶೇ. 40ರಷ್ಟು ಲಭಿಸಿದೆ. ಅದೇ ರೀತಿ ಬೆಂಗಳೂರಿನಲ್ಲಿ ಬಿಜೆಪಿ ಶೇ.58 ಹಾಗೂ ಕಾಂಗ್ರೆಸ್ ಶೇ.38ರಷ್ಟು ಮತಗಳನ್ನು ಪಡೆದಿದೆ. ಎಲ್ಲೆಡೆಯೂ ಎನ್‌ಡಿಎ(NDA) ಒಟ್ಟಾಗಿ ಚುನಾವಣೆ ಎದುರಿಸಿದೆ. ಕಾಂಗ್ರೆಸ್ ನಂತೆ ಫ್ರೆಂಡ್ಲಿ ಫೈಟ್(Friendly Fight) ನೀಡಿಲ್ಲ ಎಂದರು.

ಹಣ ಹಂಚಲು ಕಾಂಗ್ರೆಸ್ ಪ್ರಯತ್ನ: ಈ ಬಾರಿ ಕಾಂಗ್ರೆಸ್ ಪಕ್ಷ ಶಿಕ್ಷಕ ಮತ್ತು ಪದವೀಧರ ಮತದಾರರಿಗೆ ಹಣ ಹಂಚಲು ನಾನಾ ರೀತಿಯ ಪ್ರಯತ್ನ ಮಾಡಿತು. ಆದರೆ ಜನರ ಮುಂದೆ ಅವರ ಆಟ ನಡೆಯಲಿಲ್ಲ ಎಂದ ಸಚಿವರು, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಹೇಳಿದರು.

‎ಅಭಿವೃದ್ಧಿ ಮರೆತು ಡ್ರಾಮಾ ಬಾಜಿ: ಕಾಂಗ್ರೆಸ್ ಬರೀ ಡ್ರಾಮಾ ಬಾಜಿ ಮಾಡುತ್ತಿದೆ. ರಾಹುಲ್ ಗಾಂಧಿ ಮಕ್ಕಳನ್ನು ಕರೆತಂದು ಡ್ರಾಮಾ ಮಾಡಿಸುತ್ತಿದ್ದಾರೆ. ಇದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ ಎಂದ ಸಚಿವರು, ಕರ್ನಾಟಕದಲ್ಲಿ ಇನ್ನೂ ಒಂದೂವರೆ ವರ್ಷಕಾಲ ಅವಕಾಶವಿದೆ. ವೃಥಾ ಆರೋಪ ಬಿಟ್ಟು ಒಳ್ಳೇ ಆಡಳಿತ, ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಸಿಎಂಗೆ ಕಿವಿಮಾತು ಹೇಳಿದರು.

ವ್ಯಾಪಕ ಭ್ರಷ್ಟಾಚಾರ ಆರೋಪ: ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ. ಇತ್ತ ಶಾಸಕರು ದುಡ್ಡು ಕೇಳುತ್ತಿದ್ದಾರೆ ಹಾಗೂ ಗುತ್ತಿಗೆದಾರರು 50 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದರು.‎

ಖಾಲಿಪಿಲ್ಲಿ ಮಾತನಾಡುವ ಗೃಹ ಸಚಿವರು: ‎ರಾಜ್ಯದ ಗೃಹ ಸಚಿವರು ಸಂಬಂಧವೇ ಇಲ್ಲದ ವಿಷಯಗಳ ಬಗ್ಗೆ ಮಾತನಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಮಾಡಲು ಕೆಲಸ ಇಲ್ಲದವನಂತೆ ವರ್ತಿಸುತ್ತಿದ್ದಾರೆ. ಖಾಲಿ ಪಿಲ್ಲಿ ಮಾತನಾಡುತ್ತಿರುತ್ತಾರೆ ಬಿಡಿ ಎಂದು ಟೀಕಿಸಿದರು.