ತಿರುವನಂತಪುರಂ, ಮಾ. 20: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯಿಂದಾಗಿ ದೇಶದೆಲ್ಲೆಡೆ ಎಲ್‌ಪಿಜಿ ಕೊರತೆ ಉಂಟಾಗಿದೆ. ಹೀಗಾಗಿ ಈ ಬಿಕ್ಕಟ್ಟಿನಿಂದಾಗಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಈ ನಡುವೆ ಕೇರಳದ ಕುಟುಂಬವೊಂದಕ್ಕೆ ಕೊಳವೆ ಬಾವಿಯಿಂದ ಉಚಿತವಾಗಿ ಅಡುಗೆ ಅನಿಲ ದೊರೆಯುತ್ತಿದೆ. ಕೇರಳದ ಕುಟುಂಬವೊಂದು ಕುಡಿಯುವ ನೀರಿಗಾಗಿ ಹಣ ವ್ಯಯಿಸಿ ಬಾವಿ ಕೊರೆಯಿಸಿತ್ತು. ಆದರೆ ಈ ಬಾವಿಯಲ್ಲಿ ನೀರು ಸಿಗದೇ ಇದ್ದರೂ ಕುಟುಂಬಕ್ಕೆ ಸಿಕ್ಕ ಅದೃಷ್ಟ ಮಾತ್ರ ಭಾರಿ ಸುದ್ದಿಯಲ್ಲಿದೆ.
ಕೇರಳದ ಅಲಪ್ಪುಳದಲ್ಲಿ ಮಹಿಳೆಯೊಬ್ಬರು ಹಿತ್ತಲಿನಲ್ಲಿರುವ ಬೋರ್‌ವೆಲ್‌ನಿಂದ ನೇರವಾಗಿ ಬರುವ ಅನಿಲವನ್ನು ಬಳಸಿ ವರ್ಷಗಳಿಂದ ಅಡುಗೆ ಮಾಡುತ್ತಿದ್ದಾರೆ. ಅವರು ಹೊರಗಿನಿಂದ ಯಾವುದೇ ಅಡುಗೆ ಅನಿಲ ತರಿಸುತ್ತಿಲ್ಲ.
ಈ ಘಟನೆ 2011ರ ಹಿಂದಿನದು. ಆಲಪ್ಪುಳದ ಅರಟ್ಟುವಾಳಿ ನಿವಾಸಿ ರತ್ನಮ್ಮ ಮತ್ತು ಅವರ ಕುಟುಂಬದವರು ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯಲು ಪ್ರಯತ್ನಿಸಿತ್ತು. ಆದರೆ ಆಳವಾಗಿ ಅಗೆದ ನಂತರವೂ ನೀರು ಸಿಕ್ಕಿರಲಿಲ್ಲ. 75 ಅಡಿ ಆಳ ದಾಟಿದ ನಂತರ, ಅವರಿಗೆ ಕೇವಲ ಕೆಸರು ನೀರು ಸಿಕ್ಕಿದ್ದು ನಂತರ ಅವರು ಬಾವಿಯನ್ನು ಮುಚ್ಚಲು ನಿರ್ಧರಿಸಿದರು.
ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಇನ್ನು ನೀರು ಬರುವುದಿಲ್ಲ ಎಂದು ಬಾವಿಯನ್ನು ಮುಚ್ಚಲು ಮುಂದಾದಾಗ ಅನಿರೀಕ್ಷಿತ ಪವಾಡವೊಂದು ಕಂಡು ಬಂದಿದೆ. ಬಾವಿಯ ಪೈಪ್‌ನಿಂದ ಬೆಂಕಿ ಜ್ವಾಲೆ ಕಾಣಿಸಿಕೊಂಡಿದ್ದು ಇದನ್ನು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಇದನ್ನು ವ್ಯರ್ಥ ಮಾಡುವ ಬದಲು ಅವರು ಪೈಪ್ ಮೂಲಕ ಸಂಪರ್ಕ ಪಡೆದಿದ್ದಾರೆ. ಮೊದಲಿಗೆ ಕಾಫಿ ಮಾಡಿ ಪರೀಕ್ಷಿಸಿದ್ದು ರುಚಿಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಅಂದಿನಿಂದ ಇಂದಿನವರೆಗೆ ಈ ಕುಟುಂಬ ಎಲ್‌ಪಿಜಿ ಸಿಲಿಂಡರ್ ಬಳಸುತ್ತಿಲ್ಲ.ಅ ಅಷ್ಟು ವರ್ಷಗಳ ನಂತರವೂ ಕುಟುಂಬವು ತಮ್ಮ ಎಲ್ಲ ಅಡುಗೆಯನ್ನು ಮಾಡಲು ಅದೇ ಬೋರ್‌ವೆಲ್ ಅನಿಲವನ್ನು ಅವಲಂಬಿಸಿದೆ.
ಕುಟುಂಬಕ್ಕೆ ಈ ಅನಿರೀಕ್ಷಿತ ಆವಿಷ್ಕಾರವು ದೈನಂದಿನ ಖರ್ಚುಗಳಲ್ಲಿ ಹಣವನ್ನು ಉಳಿಸಲು ನೆರವಾಗಿದೆ. ಎಲ್‌ಪಿಜಿಯಲ್ಲಿ ನಾವು ವರ್ಷಕ್ಕೆ ಸುಮಾರು 10,000 ರು.ಗಳನ್ನು ಉಳಿಸುತ್ತೇವೆ ಎಂದು ಕುಟುಂಬದ ರಮೇಶನ್ ಹೇಳಿದ್ದಾರೆ. ಬೋರ್‌ವೆಲ್‌ನಿಂದ ಹೊರಬರುವ ಅನಿಲವು ಮಿಥೇನ್ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಮತ್ತು ONGC ಅಧಿಕಾರಿಗಳು ಇದನ್ನು ಪರೀಕ್ಷಿಸಿ ಸ್ಪಷ್ಟ ಪಡಿಸಿದ್ದಾರೆ.