ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LPG Price Hike: ಜನರಿಗೆ ಶಾಕ್‌ ಮೇಲೆ ಶಾಕ್‌; ಪೆಟ್ರೋಲ್‌ ಆಯ್ತು ,ಇದೀಗ LPG ಸಿಲಿಂಡರ್‌ ದರ 50 ರೂ. ಏರಿಕೆ

ಪೆಟ್ರೋಲ್‌ ಡಿಸೇಲ್‌ ಬೆಲೆ ಹೆಚ್ಚಾದ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಅಡುಗೆಗೆ ಬಳಸುವ 14.2 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಶನಿವಾರ 50 ರೂಪಾಯಿ ಏರಿಕೆ ಮಾಡಲಾಗಿದೆ. ಈ ಮೂಲಕ ಅಡುಗೆ ಅನಿಲ ಸಿಲಿಂಡರ್‌ ದರ ಈಗ 1,000 ರೂ. ಗಡಿ ತಲುಪಿದೆ.

ನವದೆಹಲಿ: ಪೆಟ್ರೋಲ್‌ ಡಿಸೇಲ್‌ ಬೆಲೆ ಹೆಚ್ಚಾದ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಅಡುಗೆಗೆ ಬಳಸುವ 14.2 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಶನಿವಾರ 50 ರೂಪಾಯಿ ಏರಿಕೆ ಮಾಡಲಾಗಿದೆ. ಈ ಮೂಲಕ ಅಡುಗೆ ಅನಿಲ ಸಿಲಿಂಡರ್‌ (LPG Price Hike) ದರ ಈಗ 1,000 ರೂ. ಗೆ ತಲುಪಿದೆ. ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ. ಉಜ್ವಾಲಾ ಸೇರಿದಂತೆ ಎಲ್ಲಾ ಕಂಪನಿಯ ಅಡುಗೆ ಅನಿಲ ಹೆಚ್ಚಳವಾಗಿದೆ. ಉಜ್ವಾಲಾ ಯೋಜನೆಯಡಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಾಮಾನ್ಯ ಬಳಕೆದಾರರಿಗೆ ₹ 803 ರಿಂದ 853 ರೂ. ಕ್ಕೆ ಮತ್ತು 14.2 ಕೆಜಿ ಸಿಲಿಂಡರ್‌ಗೆ 503 ರಿಂದ 553 ರೂ. ಗೆ ಏರಿಕೆಯಾಗಲಿದೆ.

ಸಿಲಿಂಡರ್‌ ದರ ಸಾವಿರಕ್ಕೆ ಕೇವಲ 50 ಪೈಸೆ ಕಡಿಮೆ ಇದ್ದು, ಗೃಹಬಳಕೆಯ ಪ್ರತಿ ಸಿಲಿಂಡರ್ ದರ ಇಂದಿನಿಂದ 999.50 ರೂ. ಇರಲಿದೆ. ಕಳೆದ ಮಾರ್ಚ್‌ನಲ್ಲಿ ಗೃಹಬಳಕೆಯ ಅಡುಗೆ ಅನಿಲದ (ಎಲ್‌ಪಿಜಿ) ದರವನ್ನು ಪ್ರತಿ ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿತ್ತು. ಕಳೆದ ವಾರ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಒಂದೇ ಬಾರಿಗೆ 102.50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈಗ 19 ಕೆಜಿ ವಾಣಿಜ್ಯ ಬಳಕೆಗೆ ಅಡುಗೆ ಅನಿಲ ಸಿಲಿಂಡರ್ 2,355.50 ರೂ.ಗೆ ಮಾರಾಟವಾಗುತ್ತಿದೆ.

ಈ ಸುದ್ದಿಯನ್ನೂ ಓದಿ:Petrol Price Hike: ವಾಹನ ಸವಾರರಿಗೆ ಬಿಗ್‌ ಶಾಕ್‌; ಪೆಟ್ರೋಲ್‌, ಡೀಸೆಲ್‌ ಮೇಲೆ ಕೇಂದ್ರದ ಅಬಕಾರಿ ಸುಂಕ ಹೆಚ್ಚಳ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ತಲಾ 2 ರೂ. ಹೆಚ್ಚಿಸುವುದಾಗಿ (Petrol Price Hike) ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ. ಈ ಬದಲಾವಣೆಗಳು ಮಂಗಳವಾರದಿಂದ ಜಾರಿಗೆ ಬರಲಿವೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂ.ಗೆ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ.ಗೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ