ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ: ಸರಯು ನದಿ ದಡದಲ್ಲಿ ಮೈಜುಮ್ಮೆನ್ನಿಸುವ ಘಟನೆ

Crocodile attack: ಅತ್ತೆಯ ಅಂತ್ಯಕ್ರಿಯೆ ವೇಳೆ ವ್ಯಕ್ತಿಯೊಬ್ಬನನ್ನು ಮೊಸಳೆ ಕಚ್ಚಿ ಎಳೆದೊಯ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ ನಡೆದಿದೆ. ಸ್ನಾನ ಮಾಡುತ್ತಿದ್ದ 30 ವರ್ಷದ ವ್ಯಕ್ತಿಯ ಮೇಲೆ ಮೊಸಳೆಯೊಂದು ದಾಳಿ ಮಾಡಿ ನದಿಗೆ ಎಳೆದೊಯ್ದಿದೆ. ಅಂದಿನಿಂದ ಆತ ಪತ್ತೆಯಾಗಿಲ್ಲ. ಕೆಲವೇ ಸೆಕೆಂಡುಗಳಲ್ಲಿ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

ಲಖನೌ, ಮೇ 21: ಅತ್ತೆಯ ಅಂತ್ಯಕ್ರಿಯೆ ವೇಳೆ ವ್ಯಕ್ತಿಯೊಬ್ಬನನ್ನು ಮೊಸಳೆ ಕಚ್ಚಿ ಎಳೆದೊಯ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಸರಯು ನದಿಯ ದಡದಲ್ಲಿ ನಡೆದಿದೆ. ಸ್ನಾನ ಮಾಡುತ್ತಿದ್ದ 30 ವರ್ಷದ ವ್ಯಕ್ತಿಯ ಮೇಲೆ ಮೊಸಳೆಯೊಂದು ದಾಳಿ ಮಾಡಿ ನದಿಗೆ ಎಳೆದೊಯ್ದಿದೆ. ಅಂದಿನಿಂದ ಆತ ಪತ್ತೆಯಾಗಿಲ್ಲ. ಗ್ರೇಟರ್ ನೋಯ್ಡಾ (Greater Noida) ನಿವಾಸಿ ದೀಪಕ್ ಶರ್ಮಾ, ತಮ್ಮ ಅತ್ತೆ ಊರ್ಮಿಳಾ ದೇವಿ ಎಂಬುವವರ ಮರಣದ ನಂತರ ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು.

ನದಿಯ ದಡದಲ್ಲಿ ಅಂತ್ಯಕ್ರಿಯೆಯ ಚಿತೆಯನ್ನು ಸಿದ್ಧಪಡಿಸಲು ಗುಂಡಿ ತೋಡಲು ಸಹಾಯ ಮಾಡಿದ ನಂತರ, ಶರ್ಮಾ ನದಿಯಲ್ಲಿ ಸ್ನಾನ ಮಾಡಲು ಹೋದರು. ಈ ವೇಳೆ ನೀರೊಳಗಿದ್ದ ಮೊಸಳೆಯೊಂದು ಹೊರಬಂದು, ಅವರನ್ನು ಎಳೆದುಕೊಂಡು ಹೋಯಿತು. ಇದು ಅಲ್ಲಿದ್ದವರನ್ನು ಭೀತಿಗೊಳಿಸಿತು. ಕೆಲವೇ ಸೆಕೆಂಡುಗಳಲ್ಲಿ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಹಾಜರಿದ್ದವರು ಶರ್ಮಾ ಅವರಿಗೆ ನದಿಗೆ ಇಳಿಯದಂತೆ ಸೂಚಿಸಿದ್ದರು. ಆದರೆ ಅವರು ಎಚ್ಚರಿಕೆಯನ್ನು ನಿರ್ಲಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿ ರಾಜೇಶ್ ಶುಕ್ಲಾ ಎಂಬುವವರು ತಿಳಿಸಿದರು. ಮೊಸಳೆ ಅವರನ್ನು ಎಳೆದುಕೊಂಡು ಹೋದಾಗ ಸ್ಥಳದಲ್ಲಿದ್ದವರು ಜೋರಾಗಿ ಕಿರುಚಿದ್ದಾರೆ. ಈ ವೇಳೆ ಸ್ಥಳೀಯರು ತಕ್ಷಣ ಹುಡುಕಾಟ ನಡೆಸಿದರು. ಆದರೆ ಶರ್ಮಾ ಅವರ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ.

"ರಕ್ತದಲ್ಲಿ ನೆನೆಸಿ, ಪ್ರಾಣಿಗಳ ಮಾಂಸ ಸುರಿದ"; ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮತಾಂತರಕ್ಕೆ ಯತ್ನ!

ಘಟನೆ ನಡೆದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ಕಂದಾಯ ಇಲಾಖೆ ತಂಡವೂ ಶೋಧ ಕಾರ್ಯಾಚರಣೆ ನಡೆಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಲಖನೌದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಕರೆಸಲಾಗಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಂಡದ ಆಗಮನಕ್ಕಾಗಿ ಕಾಯುತ್ತಿದ್ದರೂ, ಶರ್ಮಾ ಅವರ ದೇಹ ಇನ್ನೂ ಪತ್ತೆಯಾಗಿಲ್ಲ.

ಹಾಡ ಹಗಲೇ 4 ವರ್ಷದ ಮಗುವಿನ ಅಪಹರಣ

ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹಗಲು ಸಮಯದಲ್ಲೇ 4 ವರ್ಷದ ಹೆಣ್ಣು ಮಗುವೊಂದನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಲಾಗಿದೆ. ಹತ್ತಿರದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ಈ ದೃಶ್ಯವು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟುಹಾಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಕಿ ತನ್ನ ಅಜ್ಜನೊಂದಿಗೆ ಸ್ಕೂಟರ್‌ನಲ್ಲಿ ಮನೆಯ ಹೊರಗೆ ಕುಳಿತಿದ್ದಾಗ ಘಟನೆ ಸಂಭವಿಸಿದೆ. ಅಜ್ಜಿ ಗೇಟ್ ತೆರೆಯಲು ಹೋದಾಗ ಬೈಕ್‌ನಲ್ಲಿ ಬಂದ ಇಬ್ಬರು ಪುರುಷರು ಇದ್ದಕ್ಕಿದ್ದಂತೆ ಮನೆಯ ಬಳಿಗೆ ನುಗ್ಗಿದ್ದಾರೆ ಎನ್ನಲಾಗಿದೆ.