ಕೋಲ್ಕತ್ತಾ: ವಾಯುಭಾರ ಕುಸಿತದ ಪರಿಣಾಮ ಮುಂದಿನ ಕೆಲವು ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಬಂಗಾಳಕೊಲ್ಲಿಯಲ್ಲಿ (bay of bengal) ಚಂಡಮಾರುತ (Cyclone) ರೂಪುಗೊಳ್ಳುತ್ತಿದ್ದು ಅಕ್ಟೋಬರ್ 26ರ ವೇಳೆಗೆ ಇದು ತೀವ್ರಗೊಳ್ಳುವ ಸಾಧ್ಯತೆಯಿದೆ. ಚಂಡಮಾರುತವು ಪಶ್ಚಿಮ- ವಾಯುವ್ಯ ದಿಕ್ಕಿನಲ್ಲಿ ಚಲಿಸಿ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯತ್ತ ಸಾಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಅಕ್ಟೋಬರ್ 28ರಿಂದ ಪಶ್ಚಿಮ ಬಂಗಾಳದ (west bengal) ಕರಾವಳಿ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ (Heavy rain) ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಶುಕ್ರವಾರ ತಿಳಿಸಿದೆ.
ವಾಯುಭಾರ ಕುಸಿತದ ಪರಿಣಾಮ ಚಂಡಮಾರುತ ತೀವ್ರಗೊಂಡು ಭಾರಿ ಮಳೆಯಾಗಲಿರುವುದರಿಂದ ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣ ಭಾಗಗಳಲ್ಲಿ ಹಗಲಿನ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ವಾಟ್ಸಾಪ್, ಟೆಲಿಗ್ರಾಂ ಬಳಕೆದಾರರಿಗೆ ಕೇಂದ್ರದಿಂದ ಹೊಸ ನಿಯಮ: 2027ರ ಜನವರಿ 1ರಿಂದ SIM ಬಾಂಡಿಂಗ್ ಕಡ್ಡಾಯ?
ದಕ್ಷಿಣ ಬಂಗಾಳದ ಎಲ್ಲಾ ಜಿಲ್ಲೆಗಳಲ್ಲಿ ಅಕ್ಟೋಬರ್ 28ರಿಂದ ಗಂಟೆಗೆ 40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ 24 ಪರಗಣಗಳು, ಪೂರ್ವ ಮೇದಿನಿಪುರ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಪಶ್ಚಿಮ ಭಾಗದ ಪಶ್ಚಿಮ ಮೇದಿನಿಪುರ, ಜಾರ್ಗ್ರಾಮ್, ಪುರುಲಿಯಾ ಮತ್ತು ಬಂಕುರಾ ಜಿಲ್ಲೆಗಳಲ್ಲೂ ತೀವ್ರ ಮಳೆಯಾಗುವ ನಿರೀಕ್ಷೆ ಇದೆ.
ಮೀನುಗಾರರಿಗೆ ಎಚ್ಚರಿಕೆ
ಅಕ್ಟೋಬರ್ 26ರಿಂದ ಬಲವಾದ ಚಂಡಮಾರುತ ಉಂಟಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ಸೇರಿದಂತೆ ಹಲವೆಡೆ ಅಕ್ಟೋಬರ್ 28ರಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಾಯುಭಾರ ಕುಸಿತವು ಅಕ್ಟೋಬರ್ 26ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಂಡು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯತ್ತ ಸಾಗಲಿದೆ. ಹೀಗಾಗಿ ಉತ್ತರ ಆಂಧ್ರಪ್ರದೇಶ ಮತ್ತು ಅದನ್ನು ಹೊಂದಿಕೊಂಡಿರುವ ದಕ್ಷಿಣ ಒಡಿಶಾ ಕರಾವಳಿ ಪ್ರದೇಶಗಳಲ್ಲೂ ತೀವ್ರ ಮಳೆಯಾಗಲಿದೆ.
ಈಶಾನ್ಯ ಮಾನ್ಸೂನ್ ಪ್ರಭಾವದಿಂದಾಗಿ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈಗಾಗಲೇ ಮುನ್ಸೂಚನೆಯನ್ನು ನೀಡಿದೆ.
ಎಸ್ಬಿಐ ಡೇಟಾ ಸೋರಿಕೆ ; ಜನರ ಖಾಸಗಿ ಮಾಹಿತಿ ಲೀಕ್, ಬ್ಯಾಂಕ್ ಹೇಳಿದ್ದೇನು?
ಜನರು ಎಚ್ಚರಿಕೆಯಿಂದ ಇರುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮರಗಳು, ದೊಡ್ಡ ಜಾಹೀರಾತು ಫಲಕಗಳ ಹತ್ತಿರ ನಿಲ್ಲಬಾರದು. ವಿಜಯನಗರಂ, ಮನ್ಯಂ, ಅಲ್ಲೂರಿ, ಕಡಪ, ಅನ್ನಮಯ್ಯ, ಚಿತ್ತೂರು ಮತ್ತು ತಿರುಪತಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಿಡಿಲು ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ತಿಳಿಸಿದ್ದಾರೆ.