Cyclone Montha: ಕೆಲವೇ ಗಂಟೆಗಳಲ್ಲಿ ಕಾಕಿನಾಡಿಗೆ ಅಪ್ಪಳಿಸಲಿದೆ ʼಮೊಂತಾʼ; ಐದು ರಾಜ್ಯಗಳಲ್ಲಿ ಕಟ್ಟೆಚ್ಚರ
ಬಂಗಾಳಕೊಲ್ಲಿಯಲ್ಲಿ (Bey Of Bengal) ತೀವ್ರ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೊಂತಾ ಚಂಡಮಾರುತ ಇನ್ನೆರಡು ದಿನ ಅಬ್ಬರಿಸಲಿದೆ. ಆಂಧ್ರ ಪ್ರದೇಶದ ಕರಾವಳಿಗೆ ಕೆಲವೇ ಕ್ಷಣದಲ್ಲಿ ಮೊಂತಾ ಅಪ್ಪಳಿಸಲಿದೆ. ಆಂಧ್ರಪ್ರದೇಶ, ಒಡಿಶಾ, ಛತ್ತೀಸ್‌ಗಢ ಮತ್ತು ತಮಿಳುನಾಡಿನಲ್ಲಿ ಅಕ್ಟೋಬರ್ 28 ಮತ್ತು 30 ರ ನಡುವೆ ಭಾರೀ ಮಳೆಯಾಗಲಿದೆ.
-
Vishakha Bhat
Oct 28, 2025 8:33 AM
ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೊಂತಾ ಚಂಡಮಾರುತ ಇನ್ನೆರಡು ದಿನ ಅಬ್ಬರಿಸಲಿದೆ. (Cyclone Montha) ಆಂಧ್ರ ಪ್ರದೇಶದ ಕರಾವಳಿಗೆ ಕೆಲವೇ ಕ್ಷಣದಲ್ಲಿ ಮೊಂತಾ ಅಪ್ಪಳಿಸಲಿದೆ. ಆಂಧ್ರಪ್ರದೇಶ, (Andhra Pradesh) ಒಡಿಶಾ, ಛತ್ತೀಸ್‌ಗಢ ಮತ್ತು ತಮಿಳುನಾಡಿನಲ್ಲಿ ಅಕ್ಟೋಬರ್ 28 ಮತ್ತು 30 ರ ನಡುವೆ ಭಾರೀ ಮಳೆ ಮುಂದುವರಿಯಲಿದೆ. ಮೊಂತಾ ಆಂಧ್ರಪ್ರದೇಶಕ್ಕೆ ತೀವ್ರ ಚಂಡಮಾರುತವಾಗಿ ಅಪ್ಪಳಿಸುವ ನಿರೀಕ್ಷೆಯಿದ್ದು, ಗರಿಷ್ಠ ಗಾಳಿಯ ವೇಗ ಗಂಟೆಗೆ 90-100 ಕಿ.ಮೀ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಆಂಧ್ರ ಕರಾವಳಿಯನ್ನು ಅಪ್ಪಳಿಸಿದ ನಂತರ, "ಮೊಂತಾ" ಚಂಡಮಾರುತವು ಸ್ವಲ್ಪಮಟ್ಟಿಗೆ ನಿಧಾನಗೊಂಡು ಒಡಿಶಾ ಕಡೆಗೆ ಚಲಿಸುತ್ತದೆ. ಚಂಡಮಾರುತವು ಈಗ ಚೆನ್ನೈನಿಂದ 420 ಕಿ.ಮೀ, ವಿಶಾಖಪಟ್ಟಣದಿಂದ 500 ಕಿ.ಮೀ ಮತ್ತು ಕಾಕಿನಾಡದಿಂದ 450 ಕಿ.ಮೀ ದೂರದಲ್ಲಿದೆ ಮತ್ತು ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು, ಕಾಕಿನಾಡ ಕರಾವಳಿಗೆ ಅಪ್ಪಳಿಸುವ ಮೊದಲೇ ಆಂಧ್ರಪ್ರದೇಶಲ್ಲಿ ಭಾರೀ ಮಳೆ ಉಂಟಾಗಿದೆ.
ಕರಾವಳಿ ತೀರದ ದೃಶ್ಯ
#WATCH | Odisha: Rough sea, strong winds and rainfall in Ganjam district this morning, due to the impact of cyclone #Montha
— ANI (@ANI) October 28, 2025
Visuals from Aryapalli of Ganjam District. pic.twitter.com/SNRExjlOyi
ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಆಂಧ್ರ ಸರ್ಕಾರ ಈಗಾಗಲೇ ಸಜ್ಜಾಗಿದ್ದು, ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೊಂತಾ ಚಂಡ ಮಾರುತ ಹೆಚ್ಚಿನ ಪರಿಣಾಮಗಳನ್ನು ಉಂಟುಮಾಡುವ ಐದು ರಾಜ್ಯಗಳಾದ ಆಂಧ್ರಪ್ರದೇಶ, ಒಡಿಶಾ, ಪುದುಚೇರಿ, ತಮಿಳುನಾಡು ಮತ್ತು ಛತ್ತೀಸ್‌ಗಢಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ 22 ತಂಡಗಳನ್ನು ಸರ್ಕಾರ ನಿಯೋಜಿಸಿದೆ.
ಬಂಗಾಳಕೊಲ್ಲಿಯಲ್ಲಿನ ಆಳವಾದ ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರಗೊಂಡು ಪೂರ್ವ ಕರಾವಳಿಯ ಕಡೆಗೆ ಗಂಟೆಗೆ ಸುಮಾರು 15 ಕಿ.ಮೀ ವೇಗದಲ್ಲಿ ಚಲಿಸುತ್ತಿರುವುದರಿಂದ, ಒಡಿಶಾ ಸರ್ಕಾರವು "ರೆಡ್ ಅಲರ್ಟ್" ಘೋಷಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಚೆನ್ನೈ, ಆಂಧ್ರಪ್ರದೇಶ ಸೇರಿದಂತೆ ಹಲವಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Karnataka Rain: ಈ ಮಳೆ ಟ್ರೇಲರ್ ಮಾತ್ರ, ಇನ್ನೂ 5 ದಿನ ಸುರಿಯಲಿದೆ ಸೈಕ್ಲೋನ್ ಮಳೆ!
ಚಂಡಮಾರುತದಿಂದಾಗಿ ಸಂಚಾರ ವ್ಯತ್ಯಯಗೊಂಡಿದ್ದು, ಒಟ್ಟು 65 ರೈಲುಗಳ ಸಂಚಾರ ವಿಳಂಬವಾಗಲಿದೆ. ಇನ್ನು ಏರ್‌ಇಂಡಿಯಾ ಸಹ ವಿಮಾನವನ್ನು ರದ್ದುಗೊಳಿಸಿದೆ. ಕರಾವಳಿ ಕರ್ನಾಟಕಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 27 ರಂದು ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 35-45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗಂಟೆಗೆ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.