ಇಂಫಾಲ: ಮೇ 2023 ರಲ್ಲಿ ಮೈತೈ-ಕುಕಿ ಜನಾಂಗೀಯ ಘರ್ಷಣೆಯ (Meitei-Kuki ethnic clashes) ಸಮಯದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ (Manipur gang rape case) ಮಹಿಳೆ ಮೃತಪಟ್ಟಿದ್ದಾಳೆ. ಎರಡು ವರ್ಷದ ಹಿಂದೆ ಘರ್ಷಣೆಗಳು ಭುಗಿಲೆದ್ದ ಸ್ವಲ್ಪ ಸಮಯದ ನಂತರ ಕುಕಿ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು.
ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಮಹಿಳೆಯನ್ನು ಅಪಹರಿಸಿದ್ದ ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಘಟನೆಯಿಂದ ಆಘಾತಗೊಂಡಿದ್ದ ಮಹಿಳೆ ಅನಾರೋಗ್ಯಕ್ಕೊಳಗಾಗಿದ್ದಳು. ತಮ್ಮ ಮಗಳು ಜೀವಂತವಾಗಿದ್ದಾಗ ನ್ಯಾಯ ಸಿಗದ ಕಾರಣ ಅವರ ಕುಟುಂಬವು ದುಃಖಿತವಾಗಿದೆ. ಎರಡು ವರ್ಷಗಳ ಹಿಂದೆ ಆಕೆ ಅನುಭವಿಸಿದ ಆಘಾತ ಮತ್ತು ದೈಹಿಕ ಗಾಯಗಳಿಂದ ಆಕೆ ಎಂದಿಗೂ ಚೇತರಿಸಿಕೊಳ್ಳಲಿಲ್ಲ. ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತು ಎಂದು ಆಕೆಯ ಕುಟುಂಬ ತಿಳಿಸಿದೆ.
ಜುಲೈ 2023 ರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಹಿಳೆ, ಮೈತೈ ಸಮುದಾಯದ ಕೆಲವು ಪುರುಷರಿಂದ ತಾನು ಅನುಭವಿಸಿದ ಭೀಕರ ಯಾತನೆಯನ್ನು ವಿವರಿಸಿದ್ದರು. ಘಟನೆಯಲ್ಲಿ ಅವರು ತೀವ್ರ ಗಾಯಗಳೊಂದಿಗೆ ಪಾರಾದರು. ಗಡಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದ ನಡುವೆ, ಲೈಂಗಿಕ ದೌರ್ಜನ್ಯದ ಎರಡು ತಿಂಗಳ ನಂತರ ಜುಲೈ 21 ರಂದು ಪೊಲೀಸರು ದೂರು ದಾಖಲಿಸಿಕೊಂಡರು.
ಚುರಚಂದಪುರದಲ್ಲಿರುವ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಮಹಿಳೆಯ ಸ್ಮರಣಾರ್ಥ ಮೇಣದ ದೀಪದ ಮೌನಾಚರಣೆಯನ್ನು ಘೋಷಿಸಿದೆ. ಈ ವೇಳೆ ಮಾತನಾಡಿದ ನಾಯಕರು, ಸಂತ್ರಸ್ತೆಯನ್ನು ಲ್ಯಾಂಗೋಲ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಅವರು ಪವಾಡಸದೃಶವಾಗಿ ಬದುಕುಳಿದರೂ, ಅವರು ತೀವ್ರವಾದ ದೈಹಿಕ ಗಾಯಗಳು, ಮಾನಸಿಕ ಆಘಾತ ಮತ್ತು ಗಂಭೀರ ಗರ್ಭಾಶಯದ ತೊಂದರೆಗಳನ್ನು ಅನುಭವಿಸಿದರು. ಅವರಿಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಜನವರಿ 10, 2026 ರಂದು ದುರಂತವಾಗಿ ಮೃತಪಟ್ಟರು ಎಂದು ಐಟಿಎಲ್ಎಫ್ ತಿಳಿಸಿದೆ.
ತೀವ್ರವಾದ ಗಾಯಗಳಿಂದಾಗಿ ತನ್ನ ಮಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಈ ಭಯಾನಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ನನ್ನ ಮಗಳು ತುಂಬಾ ಉತ್ಸಾಹಭರಿತ ಮತ್ತು ಮುಕ್ತ ಮನಸ್ಸಿನ ಹುಡುಗಿಯಾಗಿದ್ದಳು. ಅವಳಿಗೆ ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಅವಳು ನಮ್ಮ ಸಂಬಂಧಿಕರೊಬ್ಬರೊಂದಿಗೆ ಇಂಫಾಲ್‌ನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಅನೇಕ ಸ್ನೇಹಿತರಿದ್ದರು ಮತ್ತು ಆಗಾಗ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ನನ್ನ ಮಗಳು ಯಾವಾಗಲೂ ನಗುತ್ತಿದ್ದಳು. ಆದರೆ ಆ ಘಟನೆಯ ನಂತರ, ಅವಳು ತನ್ನ ನಗುವನ್ನು ಕಳೆದುಕೊಂಡಳು ಎಂದು ಸಂತ್ರಸ್ತೆಯ ತಾಯಿ ಹೇಳಿದರು.
ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್), ತನ್ನನ್ನು ಕಪ್ಪು ಶಸ್ತ್ರಧಾರಿ ನಾಲ್ವರು ಶಸ್ತ್ರಧಾರಿ ಪುರುಷರು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ಮೂವರು ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಮಹಿಳೆ ಆರೋಪಿಸಿದ್ದರು. ಜನಾಂಗೀಯ ಹಿಂಸಾಚಾರದ ವೇಳೆ ಶಸ್ತ್ರಾಸ್ತ್ರ ಹಿಡಿದ ಮೈತೈ ಗುಂಪಿನ ಸದಸ್ಯರಾದ ಅರಾಂಬೈ ಟೆಂಗೋಲ್ ಕಪ್ಪು ಶರ್ಟ್ ಧರಿಸಿದ್ದರು. ಮೀರಾ ಪೈಬಿಯ ಕೆಲವು ಸದಸ್ಯರು ಆಕೆಯನ್ನು ಮೈತೈ ಪುರುಷರಿಗೆ ಹಸ್ತಾಂತರಿಸಿದ್ದಾರೆ ಎಂದು ಕುಕಿ ಸಂಘಟನೆಗಳು ಆರೋಪಿಸಿವೆ.
ನಾಲ್ವರು ಪುರುಷರು ನನ್ನನ್ನು ಬಿಳಿ ಬೊಲೆರೊದಲ್ಲಿ ಕರೆದುಕೊಂಡು ಹೋದರು. ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಚಾಲಕನನ್ನು ಹೊರತುಪಡಿಸಿ ಮೂವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಂತರ ನನ್ನನ್ನು ಬೆಟ್ಟಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತೆ ಜುಲೈ 2023 ರಲ್ಲಿ ಹೇಳಿದ್ದರು.
Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ; 5 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ
ಅವರು ನನಗೆ ಏನೇನು ಹೀನಾಯ ಕೆಲಸಗಳನ್ನು ಮಾಡಬಹುದೋ ಅದನ್ನೆಲ್ಲಾ ಮಾಡಿದರು ಮತ್ತು ರಾತ್ರಿಯಿಡೀ ನನಗೆ ತಿನ್ನಲು ಏನೂ ಕೊಡಲಿಲ್ಲ. ಅವರು ನೀರನ್ನೂ ಕೊಡಲಿಲ್ಲ. ಬೆಳಗ್ಗೆ ಹೇಗೋ, ಶೌಚಾಲಯಕ್ಕೆ ಹೋಗುವ ನೆಪದಲ್ಲಿ ನಾನು ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಸುತ್ತಲೂ ಏನು ನಡೆಯುತ್ತಿದೆ ಎಂದು ನೋಡಲು ಪ್ರಯತ್ನಿಸಿದೆ. ಅದರ ನಂತರ ನಾನು ಬೆಟ್ಟದ ಕೆಳಗೆ ಓಡಿ ತಪ್ಪಿಸಿಕೊಂಡೆ ಎಂದು ಅವಳು ಹೇಳಿದ್ದಳು.
ತರಕಾರಿಗಳ ರಾಶಿಯ ಕೆಳಗೆ ಅಡಗಿಕೊಂಡಿದ್ದ ಆಕೆಯನ್ನು ಆಟೋರಿಕ್ಷಾ ಚಾಲಕನೊಬ್ಬ ಸುರಕ್ಷಿತ ಕರೆದುಕೊಂಡು ಹೋದನು. ಆಕೆ ಕಾಂಗ್ಪೋಕ್ಪಿ ತಲುಪುವಲ್ಲಿ ಯಶಸ್ವಿಯಾದಳು. ಅಲ್ಲಿ ಆಕೆಯನ್ನು ನೆರೆಯ ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.
ಮಣಿಪುರದ ಕೆಲವು ಬೆಟ್ಟ ಪ್ರದೇಶಗಳಲ್ಲಿ ಪ್ರಬಲವಾಗಿರುವ ಕುಕಿ ಬುಡಕಟ್ಟು ಜನಾಂಗ ಮತ್ತು ಕಣಿವೆಯ ಪ್ರಾಬಲ್ಯ ಹೊಂದಿರುವ ಮೈಟೈ ಸಮುದಾಯಗಳ ನಡುವೆ ಮೇ 2023 ರಲ್ಲಿ ಭೂ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯದಂತಹ ಹಲವಾರು ವಿಷಯಗಳ ಕುರಿತು ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 50,000 ಜನರು ಸ್ಥಳಾಂತರಗೊಂಡಿದ್ದಾರೆ.