ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Delhi Building Collapse: ತಲೆ ಮರೆಸಿಕೊಂಡಿದ್ದ ಪಿಜಿ ಮಾಲಕ ಹರಿರಾಮ್ ಗುಪ್ತಾ ರಾಜಸ್ಥಾನದಲ್ಲಿ ಅರೆಸ್ಟ್‌; 7ಕ್ಕೇರಿದ ಸಾವಿನ ಸಂಖ್ಯೆ

Delhi PG Building Collapse: ತಲೆಮರೆಸಿಕೊಂಡಿದ್ದ ಕುಸಿದು ಬಿದ್ದ ದೆಹಲಿ ಪಿಜಿ ಕಟ್ಟಡ ಮಾಲಕ ಹರಿರಾಮ್ ಗುಪ್ತಾ ಅವರನ್ನು ರಾಜಸ್ಥಾನದ ಭಿವಾಡಿಯಲ್ಲಿ ಬಂಧಿಸಲಾಗಿದೆ. ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿರಾಮ್‌ನನ್ನು ಬಂಧಿಸಲು ದೆಹಲಿ ಪೊಲೀಸರು 10 ಪ್ರತ್ಯೇಕ ತಂಡಗಳನ್ನು ರಚಿಸಿದ್ದರು.

ಪಿಜಿ ಮಾಲೀಕ ಹರಿರಾಮ್ ಗುಪ್ತಾ (ಎಡ)

ಜೈಪುರ, ಸೆ. 7: ದಕ್ಷಿಣ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ 5 ದಶಕಗಳಷ್ಟು ಹಳೆಯದಾದ ಬಹುಮಹಡಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟು (Delhi PG Building Collapse Case), ಹಲವರು ಗಾಯಗೊಂಡ ನಂತರ ತಲೆಮರೆಸಿಕೊಂಡಿದ್ದ ಪಿಜಿ ಮಾಲಕ ಹರಿರಾಮ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ರಾಜಸ್ಥಾನದ ಭಿವಾಡಿಯಲ್ಲಿ ಅವರು ಪೊಲೀಸರ ಬಲೆ ಬಿದ್ದರು ಎಂದು ಮೂಲಗಳು ತಿಳಿಸಿವೆ.

ತಲೆಮರೆಸಿಕೊಂಡಿದ್ದ ಹರಿರಾಮ್‌ಗಾಗಿ ಪೊಲೀಸರು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಹುಡುಕಾಟ ನಡೆಸಿದ್ದರು. ಅಂದಹಾಗೆ, ಹರಿರಾಮ್ ಗುಪ್ತಾ ಹರಿಯಾಣದ ಗುರುಗ್ರಾಮದ ನಿವಾಸಿಯಾಗಿದ್ದು, ಅವರು ಹಲವು ವಸತಿ ಕಟ್ಟಡಗಳು ಮತ್ತು ಹಾರ್ಡ್‌ವೇರ್ ಅಂಗಡಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿ ಕಟ್ಟಡ ಕುಸಿದ ಸ್ಥಳ ಪರಿಶೀಲಿಸಿದ ಮುಖ್ಯಮಂತ್ರಿ ರೇಖಾ ಗುಪ್ತಾ:



ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಕ ಹರಿರಾಮ್‌ನನ್ನು ಬಂಧಿಸಲು ದೆಹಲಿ ಪೊಲೀಸರು 10 ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಈ ತಂಡಗಳು ಸ್ಥಳೀಯ ಜಿಲ್ಲಾ ಪೊಲೀಸ್, ವಿಶೇಷ ಸಿಬ್ಬಂದಿ ಮತ್ತು ಇತರ ಕಾರ್ಯಾಚರಣೆ ಘಟಕಗಳ ಸಿಬ್ಬಂದಿಯನ್ನು ಒಳಗೊಂಡಿದ್ದು, ಪ್ರತಿ ತಂಡವನ್ನು ಹೆಚ್ಚುವರಿ ಡಿಸಿಪಿ ಶ್ರೇಣಿಯ ಅಧಿಕಾರಿಯೊಬ್ಬರು ನೇತೃತ್ವ ವಹಿಸಿದ್ದರು.

ದೆಹಲಿ ಕಟ್ಟಡ ಕುಸಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಆಘಾತ; ಮೂರಕ್ಕೇರಿದ ಮೃತರ ಸಂಖ್ಯೆ

ಇನ್ನು ಕಟ್ಟಡ ಕುಸಿದ ನಂತರ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸ್ಥಳಕ್ಕೆ ಭೇಟಿ ನೀಡಿದರು. ಘಟನೆಯಲ್ಲಿ ಮೃತಪಟ್ಟ ಏಳು ಮಂದಿ ಸೇರಿ 12 ಜನರನ್ನು ಈವರೆಗೆ ಅವಶೇಷಗಳಿಂದ ಹೊರ ತರಲಾಗಿದೆ.

ಮುನ್ನೆಚ್ಚರಿಕೆ

ಘಟನೆಯ ಬಳಿಕ ದೆಹಲಿಯಲ್ಲಿರುವ ಐದು ಮಹಡಿಗಳನ್ನು ಹೊಂದಿರುವ ಎಲ್ಲ ಕಟ್ಟಡಗಳನ್ನು ಮುಚ್ಚುವಂತೆ ಗುಪ್ತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. “ಇದಕ್ಕೆ ಜವಾಬ್ದಾರರಾಗಿರುವ ಎಂಸಿಡಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೆಹಲಿಯಲ್ಲಿ ಐದು ಮಹಡಿಯನ್ನು ಹೊಂದಿರುವ ಕಟ್ಟಡಗಳನ್ನು ತಕ್ಷಣವೇ ಮುಚ್ಚಲು ಸೂಚನೆ ನೀಡಲಾಗಿದೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಸತ್ಯ ನಿಕೇತನ ಕಟ್ಟಡದ ನೆಲಮಾಳಿಗೆಯಲ್ಲಿ ನೀರು ಸಂಗ್ರಹವಾಗಿರುವುದೇ ಕಟ್ಟಡ ಕುಸಿಯಲು ಕಾರಣ. ಸುಮಾರು ಶೇ. 80ರಷ್ಟು ಅವಶೇಷಗಳನ್ನು ತೆರವುಗೊಳಿಸಲಾಗಿದೆ. ನೆಲಮಾಳಿಗೆಯ ಅವಶೇಷ ಮಾತ್ರ ಉಳಿದಿವೆ. ನೆಲಮಾಳಿಗೆಯಲ್ಲಿ ನೀರು ಸಂಗ್ರಹವಾಗಿತ್ತು. ಹಳೆಯ ಕಟ್ಟಡವಾಗಿದ್ದರಿಂದ ದುರಸ್ತಿ ಕಾರ್ಯವೂ ನಡೆಯುತ್ತಿದ್ದುದು ಕುಸಿತಕ್ಕೆ ಕಾರಣವಾಯಿತು” ಎಂದು ಅವರು ಹೇಳಿದರು.

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: 6 ಮಂದಿ ಸಾವು

ದೆಹಲಿಯಲ್ಲಿ ಕುಸಿದ ಕಟ್ಟಡದ ಪಿಜಿ ಒಪ್ಪಂದದಲ್ಲಿತ್ತು ವಿಚಿತ್ರ ಷರತ್ತು!

ವರದಿಗಳ ಪ್ರಕಾರ ಈ ಪಿಜಿಯಲ್ಲಿದ್ದ ವಿದ್ಯಾರ್ಥಿಗಳ ಬಾಡಿಗೆ ಒಪ್ಪಂದ ಪತ್ರದಲ್ಲಿ ʼ'ನನಗೆ ಉಂಟಾಗುವ ಯಾವುದೇ ರೀತಿಯ ಅನಾಹುತ, ಆಕಸ್ಮಿಕ ಸಾವು ಅಥವಾ ಅಪಾಯಕ್ಕೆ ಪಿಜಿ ಆಡಳಿತ ಮಂಡಳಿಯು ಜವಾಬ್ದಾರಿಯಾಗಿರುವುದಿಲ್ಲ'ʼ ಎಂಬ ಸ್ಪಷ್ಟ ಷರತ್ತನ್ನು ಸೇರಿಸಲಾಗಿತ್ತು. ಅಂದರೆ, ಕಟ್ಟಡದ ಸುರಕ್ಷತೆಯ ಹೊಣೆಯಯಿಂದ ಪಿಜಿ ಮಾಲಕರು ಸಂಪೂರ್ಣವಾಗಿ ನುಣುಚಿಕೊಳ್ಳುವಂತಹ ಒಪ್ಪಂದಕ್ಕೆ ವಿದ್ಯಾರ್ಥಿಗಳಿಂದಿದ ಸಹಿ ಪಡೆದುಕೊಳ್ಳಲಾಗಿತ್ತು.