ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ದೆಹಲಿ ವಿಶ್ವ ವಿದ್ಯಾಲಯಕ್ಕೆ ರಾಹುಲ್‌ ಗಾಂಧಿ ಭೇಟಿ ; ಕಚೇರಿಯೆದುರು ವಿದ್ಯಾರ್ಥಿಗಳ ಹೈಡ್ರಾಮಾ

ದೆಹಲಿ ವಿಶ್ವವಿದ್ಯಾನಿಲಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅಘೋಷಿತ ಭೇಟಿಯನ್ನು ವಿಶ್ವವಿದ್ಯಾಲಯ ಆಕ್ಷೇಪಿಸಿದೆ. ಬಿಡುಗಡೆಗೊಳಿಸಿದ ಅಧಿಕೃತ ಮಾಹಿತಿಯಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮಂಗಳವಾರ ಉತ್ತರ ಕ್ಯಾಂಪಸ್‌ (North Campus)ಗೆ ದಿಢೀರ್‌ ಭೇಟಿ ಮಾಡಿದ ವಿಚಾರ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅಘೋಷಿತ ಭೇಟಿಯನ್ನು ವಿಶ್ವವಿದ್ಯಾಲಯ ಆಕ್ಷೇಪಿಸಿದೆ. ಬಿಡುಗಡೆಗೊಳಿಸಿದ ಅಧಿಕೃತ ಮಾಹಿತಿಯಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮಂಗಳವಾರ ಉತ್ತರ ಕ್ಯಾಂಪಸ್‌ (North Campus)ಗೆ ದಿಢೀರ್‌ ಭೇಟಿ ಮಾಡಿದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (DUSU) ಅಧ್ಯಕ್ಷರ ಕಚೇರಿ ಸುತ್ತಲು ಭದ್ರತೆ ಒದಗಿಸಲಾಗಿತ್ತು ಮತ್ತು ಕಾರ್ಯದರ್ಶಿಗಳನ್ನು ಸೇರಿದಂತೆ ಯಾರಿಗೂ ಹೊಳಗೆ ಹೋಗಲು ಅವಕಾಶ ನೀಡಲಾಗಲಿಲ್ಲ.

ರಾಹುಲ್ ಗಾಂಧಿ ಈ ಭೇಟಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಾಗೂ ಇತರ ಹಿಂದುಳಿದ ವರ್ಗಗಳ (ಓಬಿಸಿ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಪ್ರತಿನಿಧಿತ್ವ, ಸಮಾನತೆ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ಒಂದು ಗಂಟೆಗೂ ಅಧಿಕ ಸಮಯ ಚರ್ಚಿಸಲಾಯಿತು. ಆದರೆ ಈ ಭೇಟಿಯನ್ನು ದೆಹಲಿ ವಿಶ್ವ ವಿದ್ಯಾಲಯ ಸಂಸ್ಥೆಯ ನಿಯಮ ಉಲ್ಲಂಘನೆ ಎಂದು ಹೇಳಿದೆ.

ರಾಹುಲ್‌ ಗಾಂಧಿ ಅವರು ಸುಮಾರು ಒಂದು ಗಂಟೆ ಇದ್ದ ವೇಳೆಯಲ್ಲಿ ಭದ್ರತಾ ಸಿಬ್ಬಂದಿ ಕಚೇರಿಯನ್ನು ಸಂಪೂರ್ಣವಾಗಿ ಸುತ್ತಿವರೆದಿದ್ದರು ಎಂದು ಹೇಳಲಾಗಿದೆ. ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗೂ ಸಹ ಕಚೇರಿಗೆ ಪ್ರವೇಶ ನೀಡದೇ, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸದಸ್ಯರು ಅಡ್ಡಿಪಡಿಸಿದ್ದಾಗಿ ಆರೋಪಿಸಿದ್ದಾರೆ. ಕೆಲ ವಿದ್ಯಾರ್ಥಿಗಳ ಜೊತೆ ಎನ್‌ಎಸ್‌ಯುಐ ಸದಸ್ಯರು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಮಾಡಲಾಗಿದೆ. ಈ ಘಟನೆಗೆ ಹೊಣೆಗಾರರಾದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಮಾಹಿತಿ ನೀಡಿದೆ.

ಇದಕ್ಕೆ ಪ್ರತಿಸ್ಪಂದಿಸಿದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋನಕ್ ಖತ್ರಿ, ಇದು ಖಾಸಗಿ ಭೇಟಿ ಆಗಿದ್ದು, ಯಾವುದೆ ಸಾರ್ವಜನಿಕ ಸಮಾವೇಶವಲ್ಲದ ಕಾರಣ ಮುಂಚೆಯೇ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ. ನಾನು ನನ್ನ ಕಚೇರಿಗೆ ಯಾವುದೇ ಅತಿಥಿಯನ್ನು ಆಹ್ವಾನಿಸುವ ಹಕ್ಕು ಹೊಂದಿದ್ದೇನೆ. ಹಾಗಾಗಿ ರಾಹುಲ್‌ ಗಾಂಧಿಯವರ ಈ ಭೇಟಿಯನ್ನು ಬೇರೆ ಯಾವುದೋ ರೀತಿಗೆ ಕೊಂಡೊಯ್ದು ದಿಕ್ಕು ತಪ್ಪಿಸುವ ಪ್ರಯತ್ನ ಇದು, ಎಂದು ಹೇಳಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದು ರಾಜಕೀಯ ಪ್ರೇರಿತ ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ಹಕ್ಕು ಪತ್ರ ವಿತರಣೆ ಮೂಲಕ 6ನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

ನಾಟಕೀಯ ಪ್ರದರ್ಶನ ಎಂದು ಎಬಿವಿಪಿ ಟೀಕೆ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೂಡ ರಾಹುಲ್ ಗಾಂಧಿ ಅವರ ಭೇಟಿಯನ್ನು ಟಿಕಿಸಿದ್ದು, ಫೋಟೋ ಆಪ್" ಮತ್ತು ಖರಾಬ್ ನಾಟಕ್ ಎಂದು ಟೀಕಿಸಿದೆ. ಈ ವೇಳೆ ಎಬಿವಿಪಿಯ ಪ್ರತಿನಿಧಿಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಲಿಲ್ಲ ಎಂದು ಆರೋಪಿಸಿ, ಈ ಕಾರ್ಯಕ್ರಮ ಕೇವಲ ಎನ್‌ಎಸ್‌ಯುಐ ಸದಸ್ಯರೊಂದಿಗೆ ನಡೆಸಲಾಯಿತು ಮತ್ತು ಅದು ಇಕೋ ಚೇಂಬರ್‌ ಆಗಿತ್ತು ಎಂದು ಎಬಿವಿಪಿ ಹೇಳಿದೆ.