ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi CM: ದೆಹಲಿ ಮುಖ್ಯಮಂತ್ರಿ ಪಟ್ಟ ಮಹಿಳೆಗೆ? ಬಿಜೆಪಿ ಹೈಕಮಾಂಡ್‌ನಲ್ಲಿ ಗುಸುಗುಸು!

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲುವನ್ನು ಸಾಧಿಸಿದೆ. ಬರೋಬ್ಬರಿ 27 ವರ್ಷಗಳ ನಂತರ ಗದ್ದುಗೆ ಏರಿ ಕುಳಿತಿದೆ. ಹತ್ತು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಪ್‌ ಮುಗ್ಗರಿಸಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ರಾಜಕೀಯ ಪಡಸಾಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಹುಟ್ಟುಕೊಂಡಿದೆ. ಈ ಮಧ್ಯೆ ಮಹಿಳೆಗೆ ಸಿಎಂ ಪಟ್ಟ ಕಟ್ಟುವ ಸಾಧ್ಯತೆಯಿದೆ ಎನ್ನುವ ಸುದ್ದಿಯಿದೆ.

Delhi CM

ನವದೆಹಲಿ: ಬಹು ನಿರೀಕ್ಷಿತ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ(Delhi Election 2025) ಬಿಜೆಪಿ(BJP) ಪಕ್ಷವು ಐತಿಹಾಸಿಕ ಗೆಲುವನ್ನು ಸಾಧಿಸಿದೆ. ಬರೋಬ್ಬರಿ 27 ವರ್ಷಗಳ ನಂತರ ಗದ್ದುಗೆ ಏರಿ ಕುಳಿತಿದೆ. ಕಳೆದ ಒಂದು ದಶಕದಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಪ್‌ ಮುಗ್ಗರಿಸಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ರಾಜಕೀಯ ಪಡಸಾಲೆಯಲ್ಲಿ ದೆಹಲಿ ಮುಖ್ಯಮಂತ್ರಿ(Delhi CM) ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಹುಟ್ಟುಕೊಂಡಿದೆ. ಈ ಮಧ್ಯೆ ಮಹಿಳೆಗೆ ಸಿಎಂ ಪಟ್ಟ ಕಟ್ಟುವ ಸಾಧ್ಯತೆಯಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ದೆಹಲಿ ಚುನಾವಣೆಯ ಕಾವು ತಾರಕಕ್ಕೇರಿತ್ತು. ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು. ಭಾನುವಾರ(ಫೆ.8) ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ದಾಖಲೆಯ ಗೆಲುವು ಸಾಧಿಸಿದ್ದು, ವಿಜಯದ ನಗೆ ಬೀರಿದೆ. ಆ ಮೂಲಕ 27 ವರ್ಷಗಳ ನಂತರ ದೆಹಲಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಹತ್ತು ವರ್ಷಗಳಿಂದ ದೆಹಲಿಯನ್ನು ಭದ್ರಕೋಟೆಯಾಗಿಸಿಕೊಂಡಿದ್ದ ಆಮ್‌ ಆದ್ಮಿ ಪಕ್ಷವು ಹೀನಾಯ ಸೋಲನ್ನು ಅನುಭವಿಸಿದೆ. ಆಪ್‌ನ ಹ್ಯಾಟ್ರಿಕ್‌ ಗೆಲುವಿನ ಕನಸು ಕೂಡ ಭಗ್ನವಾಗಿದೆ. ಈ ಮಧ್ಯೆಯೇ ಬಿಜೆಪಿ ಹೈಕಮಾಂಡ್‌ ಸಿಎಂ ಗಾದಿಯಲ್ಲಿ ಯಾರನ್ನು ಕೂರಿಸಬಹುದು ಎಂಬ ಸಹಜ ಕೌತುಕತೆ ಎಲ್ಲರಲ್ಲೂ ಇದೆ. ಮಹಿಳಾ ಶಾಸಕಿಯೊಬ್ಬರಿಗೆ ಮಣೆ ಹಾಕಿ ಅವರಿಗೆ ಪಟ್ಟ ಕಟ್ಟಬಹುದು ಎಂಬ ಗುಸುಗುಸು ಮಾತು ಕೇಳಿ ಬರುತ್ತಿದೆ.

ಈ ಸುದ್ದಿಯನ್ನೂ ಓದಿ:Aravind Kejriwal: ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕೇಜ್ರಿವಾಲ್‌ಗೆ ಪಂಜಾಬ್‌ ಸಿಎಂ ಗಾದಿ?

ಮುಖ್ಯಮಂತ್ರಿ ಹುದ್ದೆಗೆ ಮಹಿಳಾ ಶಾಸಕಿಯೊಬ್ಬರನ್ನು ಪರಿಗಣಿಸಬಹುದು ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಹೊಸದಾಗಿ ಆಯ್ಕೆಯಾದ 48 ಶಾಸಕರ ಪೈಕಿ ನಾಲ್ವರು ಮಹಿಳಾ ಶಾಸಕರಿದ್ದಾರೆ. ನೀಲಂ ಪಹಲ್ವಾನ್, ರೇಖಾ ಗುಪ್ತಾ, ಪೂನಂ ಶರ್ಮಾ ಮತ್ತು ಶಿಖಾ ರಾಯ್. ನೀಲಂ ಪಹಲ್ವಾನ್ ನಜಾಫ್‌ಗಢ ಸ್ಥಾನದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ, ರೇಖಾ ಗುಪ್ತಾ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ, ಪೂನಂ ಶರ್ಮಾ ವಜೀರ್‌ಪುರದಲ್ಲಿ ಗೆದ್ದಿದ್ದಾರೆ. ಶಿಖಾ ರಾಯ್ ಹಿರಿಯ ಎಎಪಿ ನಾಯಕ ಮತ್ತು ಮಾಜಿ ಸಚಿವ ಸೌರಭ್ ಭಾರದ್ವಾಜ್ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಈ ನಾಲ್ವರ ಹೆಸರೂ ಮುಖ್ಯಮಂತ್ರಿ ರೇಸ್‌ನಲ್ಲಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಬಿಜೆಪಿ ಜಾತಿ ಸಮೀಕರಣಗಳನ್ನು ಸಹ ಪರಿಗಣಿಸಲಿದ್ದು, ಪರಿಶಿಷ್ಟ ಜಾತಿಯ ಶಾಸಕರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎನ್ನಲಾಗಿದೆ.