ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಹಾ ಕೂಟದ ಸಭೆ ನಡೆಸಿ ಶಕ್ತಿ ಪ್ರದರ್ಶಿಸಿದ ನೇತೃತ್ವದ ಇಂಡಿಯಾ ಮೈತ್ರಿಕೂಟ? ವರ್ಕೌಟ್ ಆಯ್ತಾ ರಾಹುಲ್ ಗಾಂಧಿ ಪ್ಲ್ಯಾನ್?

INDIA bloc meet: ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಾಗಿರುವ ಇಂಡಿಯಾ ಮೈತ್ರಿಕೂಟದ ನಾಯಕರು ಮಂಗಳವಾರ ಸಂಜೆ ಸುನಹರಿ ಬಾಗ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಚಹಾ ಕೂಟಕ್ಕಾಗಿ ಸೇರಿದ್ದರು. ಇಂದು ಒಂದು ರೀತಿಯ ಶಕ್ತಿ ಪ್ರದರ್ಶನದಂತಿತ್ತು. ಸಮಾಜವಾದಿ ಪಕ್ಷ ಮತ್ತು ಉದ್ಧವ್ ನೇತೃತ್ವದ ಶಿವಸೇನಾ ಬಣದ ಸಂಸದರು ಈ ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ (congress mp)ರಾಹುಲ್ ಗಾಂಧಿ (Rahul gandhi) ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಚಹಾ ಕೂಟದಲ್ಲಿ (INDIA bloc meet) ಸಮಾಜವಾದಿ ಪಕ್ಷ (Samajwadi Party) ಮತ್ತು ಉದ್ಧವ್ ನೇತೃತ್ವದ ಶಿವಸೇನಾ ಬಣದ (Uddhav led Shiv Sena) ಸಂಸದರು ಭಾಗವಹಿಸಿ ಒಗ್ಗಟ್ಟನ್ನು ಪ್ರದರ್ಶಿಸಿದರು. ಕಳೆದ ಕೆಲವು ತಿಂಗಳುಗಳಿಂದ ಇಂಡಿಯಾ ಮೈತ್ರಿಕೂಟದ (INDIA alliance) ಸಭೆಯಲ್ಲಿ ಈ ಎರಡೂ ಪಕ್ಷಗಳ ಗೈರುಹಾಜರಿ ಎದ್ದುಕಾಣುತ್ತಿತ್ತು ಮತ್ತು ಚರ್ಚೆಯ ವಿಷಯವಾಗಿತ್ತು. ಇದೀಗ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ನಾವು ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸಿ ಈ ಮೂಲಕ ಮೈತ್ರಿಕೂಟದ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ.

ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿರುದ್ದದ ಹೋರಾಟಕ್ಕೆ ಮುಂಬರುವ ದಿನಗಳ ಕಾರ್ಯತಂತ್ರವನ್ನು ರೂಪಿಸಲು ಇಂಡಿಯಾ ಮೈತ್ರಿಕೂಟದ ಸಂಸದರು ಮಂಗಳವಾರ ಸಂಜೆ ಸುನಹರಿ ಬಾಗ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಹಾರ ಸಭೆಯಲ್ಲಿ ಸೇರಿದರು. ಈ ಸಭೆಯು ಮೈತ್ರಿಕೂಟದ ಒಗ್ಗಟ್ಟಿನ ಪ್ರದರ್ಶನವಾಗಿತ್ತು. ಈ ಸಭೆಯಲ್ಲಿ ಸಮಾಜವಾದಿ ಪಕ್ಷದ 22 ಸಂಸದರು ಮತ್ತು ಉದ್ಧವ್ ನೇತೃತ್ವದ ಶಿವಸೇನಾ ಬಣದ ಸಂಸದರು ಭಾಗವಹಿಸಿದ್ದರು.

ಸೌರವ್ ದಾಸ್, ಅಶುತೋಷ್ ರಂಕಾ ಬಂಧನ ಹೇಡಿತನದ ಕೃತ್ಯ: ಸಿಜೆಪಿ ನಾಯಕರ ಪರ ರಾಹುಲ್ ಗಾಂಧಿ ಭರ್ಜರಿ ಬ್ಯಾಟಿಂಗ್

ಪ್ರತಿಭಟನೆ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಸುಮಾರು 40 ದುಂಡಗಿನ ಮೇಜುಗಳನ್ನು ಹಾಕಿ ಲಘು ಉಪಹಾರ ಸಭೆಯನ್ನು ನಡೆಸಲಾಯಿತು. ವಿವಿಧ ರಾಜ್ಯಗಳ ಸಂಸದರು ಇದರಲ್ಲಿ ಭಾಗವಹಿಸಿದ್ದರು.



ಈ ಸಂದರ್ಭದಲ್ಲಿ ಕೇರಳದ ಕಾಂಗ್ರೆಸ್ ಸಂಸದರೊಂದಿಗೆ ಸಮಾಜವಾದಿ ಪಕ್ಷದ ಸಂಸದರು ಕುಳಿತು ಮಾತುಕತೆ ನಡೆಸಿದರು. ಉತ್ತರ ಪ್ರದೇಶದಲ್ಲಿ ಎಸ್‌ಪಿ ಸರ್ಕಾರ ರಚನೆ ಕುರಿತು ಹಾಗೂ ಬಿಹಾರ, ಉತ್ತರ ಪ್ರದೇಶ ಮತ್ತು ಬಂಗಾಳದ ಸಂಸದರು ಮುಂಬರುವ ದುರ್ಗಾ ಪೂಜೆಯ ಬಗ್ಗೆ ಚರ್ಚೆ ನಡೆಸಿದರು. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಅಂತರ ಕಾಯ್ದುಕೊಂಡಿರುವ ವಿಷಯದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಇನ್ನು ಸಮಾಜವಾದಿ ಪಕ್ಷವು ಆಜಾದ್ ಸಮಾಜ ಪಕ್ಷದ ಚಂದ್ರಶೇಖರ್ ಅವರನ್ನು ಮೈತ್ರಿಕೂಟದಿಂದ ಹೊರಗಿಡುವ ಬಗ್ಗೆಯೂ ಪ್ರಸ್ತಾಪಿಸಿದೆ. ಜಂತರ್ ಮಂತರ್ ಅನ್ನು ನಿಗದಿತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕುವ ಕ್ರಮದ ವಿರುದ್ಧ ಹೋರಾಡಲು ಕೂಡ ನಿರ್ಧರಿಸಲಾಯಿತು.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನಿಸಿದ ಮಹಿಳೆ

ನವರಾತ್ರಿ ಮತ್ತು ದೀಪಾವಳಿಯ ಅನಂತರ ವಿರೋಧ ಪಕ್ಷಗಳು ಮತ್ತೆ ಬೀದಿಗಿಳಿದು ಹೋರಾಟ ಮುಂದುವರಿಸಲಿವೆ. ಸಿಜೆಪಿಯಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ತಮ್ಮ ನಾಯಕರಿಗೆ ತಿಳಿಸಿವೆ.

ವಿದ್ಯಾ ಇರ್ವತ್ತೂರು

View all posts by this author